ಸುದ್ದಿಗಳು

ನಾನು ಆ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡಿಲ್ಲ: ರಶ್ಮಿಕಾ!!

ಬೆಂಗಳೂರು,ಆ.17: ನಟ ರಕ್ಷಿತ್ ಹಾಗೂ ರಶ್ಮಿಕಾ ಮಧ್ಯೆ ಸರಿಯಿಲ್ಲ, ಬಿರುಕು ಮೂಡಿದೆ, ಅವರ ನಿಶ್ಚಿತಾರ್ಥ ಮುರಿದು ಬೀಳಲಿದೆ ಎನ್ನುವ ಸುದ್ದಿ ಇತ್ತೀಚಿಗೆ ಹರಿದಾಡಿತ್ತು. ಎಲ್ಲೆಡೆ ಅದೇ ಸುದ್ದಿ!! ಆದರೆ, ಈ ಎಲ್ಲ ಗಾಳಿಸುದ್ದಿಯನ್ನು ತಳ್ಳಿ ಹಾಕಿದ್ದ ಈ ಜೋಡಿ, ನಾವು ಚೆನ್ನಾಗಿದ್ದೇವೆ, ನಮ್ಮ ನಡುವೆ ಯಾವುದೇ ಬಿರುಕು ಇಲ್ಲ ಎಂದು ಸ್ಪಷ್ಟನೆ ನೀಡಿತ್ತು. ಇದೇ ವಿಷಯವಾಗಿ ರಶ್ಮಿಕಾ ಜಾಲಾತಾಣಗಳಲ್ಲಿ ಲೈವ್ ಕೂಡ ಬಂದಿದ್ದರು.

ಗಾಸಿಪ್ ಗೆ ಬ್ರೇಕ್

ತಮ್ಮ ಬಗ್ಗೆ ಹರಿದಾಡಿದ್ದ ವದಂತಿ ಬಗ್ಗೆ ರಶ್ಮಿಕಾ ಈಗ ಮತ್ತೊಮ್ಮೆ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ  ರಕ್ಷಿತ್​ ಹಾಗೂ ತಾನು ಹೇಗೆ ಸ್ವೀಕರಿಸಿದ್ದೇವು ಎಂಬುದನ್ನು ಬಿಚ್ಚಿಟ್ಟಿದ್ದಾರೆ.

Image result for rashmika mandanna

ತಾವು ಬೇರೆ ಬೇರೆಯಾಗುತ್ತಿರುವ ಗಾಳಿಸುದ್ದಿ​ ಕೇಳಿದ್ದ ರಕ್ಷಿತ್ ​ಗೆ ನಗು ತಡೆಯಲು ಸಾಧ್ಯವಾಗಲಿಲ್ವಂತೆ. ಮುಂದುವರೆದು ಮಾತನಾಡಿರುವ ಅವರು, ನಾವು ಎಂಗೇಜ್​ ಆಗುವ ಮುಂಚೆ ಜಾಸ್ತಿ ಸಮಯ ಕಳೆಯಲು ಸಾಧ್ಯವಾಗಲಿಲ್ಲ. ಡೇಟಿಂಗ್​ ಕೂಡ ಮಾಡಿರಲಿಲ್ಲ. ಆದ್ದರಿಂದ ನಿಶ್ಚಿತಾರ್ಥದ ನಂತರ ನಾವು ಪ್ರೀತಿಯನ್ನು ತುಂಬಾ ಆನಂದಿಸುತ್ತಿದ್ದೇವೆ. ನಾವು ಮದುವೆ ಆಗೋದು  ನಿಶ್ಚಿತ. ಆದರೆ, ಅದು ಯಾವಾಗ ನಡೆಯುತ್ತೆ ಎಂಬುದು ಗೊತ್ತಿಲ್ಲ ಎಂದಿದ್ದಾರೆ. ಅಂತೂ ಇಂತೂ ಈ ಎಲ್ಲಾ ಗಾಸಿಪ್ ಗೆ ತೆರೆ ಎಳೆದಿದ್ದಾರೆ ರಶ್ಮಿಕಾ!!

Tags