ಸುದ್ದಿಗಳು

ಸಂಭಾವನೆ ಹೆಚ್ಚಿಸಿಕೊಂಡಳು ಕಿರಿಕ್ ಬೆಡಗಿ!!

ಬೆಂಗಳೂರು,ಆ.23: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಕನ್ನಡತಿಯಾದರೂ ಟಾಲಿವುಡ್​ ಚಿತ್ರರಂಗಕ್ಕೆ ಅದೃಷ್ಟ ದೇವತೆ. ಹೌದು ಟಾಲಿವುಡ್ ನಲ್ಲಿ ಆಕೆ ನಟಿಸಿರುವುದು ಕೇವಲ ಎರಡೇ ಸಿನಿಮಾ. ಈ ಎರಡೂ ಚಿತ್ರಗಳು ಕೂಡ ಸೂಪರ್ ಹಿಟ್ ..

ಯಶಸ್ಸಿನ ಮೆಟ್ಟಿನಲ್ಲಿ ರಶ್ಮಿಕಾ

‘ಚಲೋ’ ಚಿತ್ರದ ಮೂಲಕ ಟಾಲಿವುಡ್​ ಗೆ ಪ್ರವೇಶ ಕೊಟ್ಟ ಕಿರಿಕ್ ಬೆಡಗಿ ರಶ್ಮಿಕಾ, ಸದ್ಯ ತೆಲುಗು ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವ ನಾಯಕಿ. ಒಂದರ ನಂತರ ಒಂದರಂತೆ ಬ್ಲಾಕ್​ ಬ್ಲಸ್ಟರ್ ಸಿನಿಮಾವನ್ನು ನೀಡಿರುವ ರಶ್ಮಿಕಾ ಕೈಯಲ್ಲಿ ಈಗ ಬಹಳಷ್ಟು ಸಿನಿಮಾಗಳಿವೆ. ಮೊನ್ನೆಯಷ್ಟೆ ಬಿಡುಗಡೆಯಾಗಿರುವ ‘ಗೀತ ಗೋವಿಂದಂ’ ಚಿತ್ರ ಕೂಡ ಯಶಸ್ಸು​ ಗಳಿಸಿರುವುದು ರಶ್ಮಿಕಾಗೆ ಮತ್ತಷ್ಟು ಬೇಡಿಕೆ ಹೆಚ್ಚಿಸುವಂತೆ ಮಾಡಿದೆ.

ಸಂಭಾವನೆ ಜಾಸ್ತಿ

ಸಾಲು ಸಾಲು ಹಿಟ್​ ಚಿತ್ರಗಳನ್ನು ನೀಡುತ್ತಿರುವ ರಶ್ಮಿಕಾ,  ತಮ್ಮ ಸಂಭಾವನೆಯನ್ನು ಕೂಡ ಕೊಂಚ ಹೆಚ್ಚಿಸಿಕೊಂಡಿದ್ದಾರೆ. ಸದ್ಯ ಪಡೆಯುತ್ತಿರುವ  ಸಂಭಾವನೆಗಿಂತಲೂ ಎರಡುಪಟ್ಟು ಜಾಸ್ತಿ ಬೇಡಿಕೆ ಮಾಡುತ್ತಿದ್ದಾರಂತೆ. ಮೂಲಗಳ ಪ್ರಕಾರ ಅವರು ಒಂದು ಚಿತ್ರಕ್ಕೆ ಅರ್ಧ ಕೋಟಿ ರೂಪಾಯಿ ಕೇಳುತ್ತಿದ್ದಾರೆ. ನಿರ್ಮಾಪಕರು ಕೂಡ ರಶ್ಮಿಕಾ ಕೇಳಿದಷ್ಟು ಹಣ ನೀಡಲು ರೆಡಿಯಾಗಿದ್ದಾರೆ ಎಂದು ಕೇಳಿ ಬರುತ್ತಿದೆ.
ಸದ್ಯ ರಶ್ಮಿಕಾ ಟಾಲಿವುಡ್ ​ನ ‘ದೇವದಾಸ’ ಹಾಗೂ’ ಡಿಯರ್ ಕಾಮ್ರೆಡ್’​ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಈ ಚಿತ್ರಗಳು ಸೆಟ್ಟೇರಲಿವೆ.

 

Tags