ಸುದ್ದಿಗಳು

ರಶ್ಮಿಕಾ ಮುಂದಿನ ಸಿನಿಮಾ ‘ದೇವದಾಸ್’

‘ದೇವದಾಸ್’ ಗೆ ನಾಯಕಿಯಾದ ರಶ್ಮಿಕಾ!!

ದೇವದಾಸ್ ಪರಿಕಲ್ಪನೆಯನ್ನು ಇಷ್ಟಪಟ್ಟೆ, ಮತ್ತು ಅದಕ್ಕಾಗಿಯೇ ನಾನು ನಟಿಸಲು ಒಪ್ಪಿದೆ.”

 ಬೆಂಗಳೂರು,ಸೆ.05: ಕಿರಿಕ್ ಪಾರ್ಟಿ ಚಿತ್ರದ ಮೂಲಕ ಗಾಂಧಿನಗರಕ್ಕೆ ಕಾಲಿಟ್ಟ ರಶ್ಮೀಕಾ ಮಂದಣ್ಣ, ಟಾಲಿವುಡ್‌ಗೂ ಎಂಟ್ರಿಯಾಗಿ ಇದೀಗ ಬಾರಿ ಸಂಚಲನವನ್ನು ಸೃಷ್ಟಿಸಿದ್ದಾರೆ.. ಸದ್ಯ ತೆರೆಕಂಡು ಯಶಸ್ಸಿನ ಪ್ರಯಾಣವನ್ನು ಆರಂಭಿಸಿರೋ ‘ಗೀತ ಗೋವಿಂದಂ’ಗೆ ಈಗಾಗಲೇ ಪ್ರಶಂಸೆ ವ್ಯಕ್ತವಾಗಿದೆ. ಇದೀಗ ರಶ್ಮಿಕಾ ಅವರ ಮುಂದಿನ ಸಿನಿಮಾ ಕೂಡ ಘೋಷಣೆ ಆಗಿದೆ.

Image result for rashmika

 ಪ್ರಯತ್ನಕ್ಕೆ ಫಲ

ಹೌದು, ಕಿರಿಕ್ ಪಾರ್ಟಿ” ಖ್ಯಾತಿಯ ರಶ್ಮಿಕಾ ಮಂದಣ್ಣ ಇವರ ಅಭಿನಯದ ಎರಡನೇ ತೆಲುಗು ಚಿತ್ರ “ಗೀತ ಗೋವಿಂದಂ” ಸದ್ಯ ಯಶಸ್ವಿಯಾಗಿ ಮುನ್ನುಗ್ಗುತ್ತಿರುವುದು ಗೊತ್ತಿರುವ ವಿಚಾರ.  ಪರಾಸುರಂ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ನಾಯಕರಾಗಿ ಕಾಣಿಸಿಕೊಂಡಿದ್ದು, ವಿಜಯ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.. “ಕಳೆದ ಏಳು ತಿಂಗಳುಗಳಲ್ಲಿ ರಶ್ಮಿಕಾ ಟಾಲಿವುಡ್‌ನಲ್ಲಿ ಮಾಡಿದ್ದ ಪ್ರಯತ್ನಕ್ಕೆ ಫಲ ಇದೀಗ ಸಿಕ್ಕಿದಂತಾಗದೆ..

 

ನಾಗಾರ್ಜುನ ಹಾಗೂ ನಾನಿ

ಇನ್ನು ಸಿನಿಮಾ ೧೦೦ ಕೋಟಿ ಕ್ಲಬ್ ಸೇರಿದೆ ಕೂಡಲೇ, ರಶ್ಮಿಕಾ ಬ್ರ್ಯಾಂಡ್ ಮೌಲ್ಯ ಒಂದೇ ರಾತ್ರಿಯಲ್ಲಿ ಏರಿಕೆಯಾಗಿ ಇವರ ಸಂಭಾವನೆ ಕೂಡಾ ಹೆಚ್ಚಾಗಿದೆ.. ತೆಲುಗಿನಲ್ಲಿ ರಶ್ಮಿಕಾ ತಮ್ಮ ಮುಂದಿನ ಚಿತ್ರವಾದ”ದೇವದಾಸ್”ನಲ್ಲಿ ತಮ್ಮ ಶೆಡ್ಯೂಲ್ ಪೂರ್ತಿಗೊಳಿಸುವತ್ತ ಚಿತ್ತ ನೆಟ್ಟಿದ್ದಾರೆ.. ಈ ಚಿತ್ರದಲ್ಲಿ ನಾಗಾರ್ಜುನ ಹಾಗೂ ನಾನಿ ನಟಿಸುತ್ತಿದ್ದಾರೆ. “ನಾನು,  ದೇವದಾಸ್ ಪರಿಕಲ್ಪನೆಯನ್ನು ಇಷ್ಟಪಟ್ಟೆ, ಮತ್ತು ಅದಕ್ಕಾಗಿಯೇ ನಾನು ನಟಿಸಲು ಒಪ್ಪಿದೆ.” ಎಂದು ನಟಿ ಈ ಹಿಂದೆ ಹೇಳಿಕೊಡಿದ್ದಾರಂತೆ. ಅಷ್ಟೆ ಅಲ್ಲ ವಿಜಯ್ ದೇವರಕೊಂಡ ಜೊತೆ ಕೂಡ ‘ಡಿಯರ್ ಕಾಮ್ರೇಡ್’ ಚಿತ್ರಗಲ್ಲೂ ಕೂಡ ನಟಿಸುತ್ತಿದ್ದಾರೆ.

Image result for nagarjuna nani devadas

ಒಟ್ಟಿನಲ್ಲಿ ತೆಲುಗು ಹಾಗೂ ಕನ್ನಡ ಸಿನಿಮಾದಲ್ಲಿ ಬ್ಯುಸಿಯಾಗಿರೋ ನಟಿ ರಶ್ಮಿಕಾ ಮಂದಣ್ಣ, ಮುಂದಿನ ಸಿನಿಮಾದ ಜೋಶ್‌ನಲ್ಲಿದ್ದಾರೆ.. ಒಂದಾದ ಮೇಲೊಂದರಂತೆ ಸಿನಿಮಾಗಳಲ್ಲಿ ಬ್ಯುಸಿಯಾಗಿಯೋ ರಶ್ಮಿಕಾಗೆ ಸದ್ಯ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಾಗಿರೋದಂತೂ ಸತ್ಯ..

 

Tags