ಸುದ್ದಿಗಳು

ರಶ್ಮಿಕಾ – ಕಾರ್ತಿ ಸಿನಿಮಾ ಕನ್ನಡಕ್ಕೆ…?

ಬೆಂಗಳೂರು, ಏ.13:

ನಟಿ ರಶ್ಮಿಕಾ ಸದ್ಯ ತಮಿಳಿಗೆ ಹಾರಿರುವುದು ಗೊತ್ತಿರುವ ವಿಚಾರವೇ. ಈಗಾಗಲೇ ತಮಿಳು ನಟ ಕಾರ್ತಿ ಜೊತೆಗೆ ಈ ನಟಿ ನಟಿಸುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರ ಈಗಾಗಲೇ ಮುಹೂರ್ತ ಕೂಡ ಕಂಡಿದೆ. ಇದೀಗ ಈ ಹೆಸರಿಡದ ಚಿತ್ರ ಕನ್ನಡಕ್ಕೆ ಡಬ್ ಆಗುತ್ತದೆ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ.

ಕನ್ನಡದಲ್ಲಿ ಕಾರ್ತಿ – ರಶ್ಮಿಕಾ

ಸದ್ಯ ಕೆ.19 ಎನ್ನುವ ಹೆಸರಿಡದ ಚಿತ್ರದಲ್ಲಿ ನಟಿ ರಶ್ಮಿಕಾ ನಟಿಸುತ್ತಿದ್ದು, ತಮಿಳಿನ ಖ್ಯಾತ ನಟ ಕಾರ್ತಿ ಜೊತೆಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಬಹುಭಾಷೆಯಲ್ಲೂ ಸಿನಿಮಾ ಮಾಡುತ್ತಿರುವ ಈ ನಟ ಇದೀಗ ಹೆಸರಿಡದ ಚಿತ್ರದಲ್ಲಿ ನಟಿಸುವ ಮೂಲಕ ದಾಖಲೆ ಬರೆಯಲು ರೆಡಿಯಾಗಿದ್ದಾರೆ. ಈ ಚಿತ್ರ ಅಂದರೆ ಕಾರ್ತಿ ಹಾಗೂ ರಶ್ಮಿಕಾ ಕಾಂಬಿನೇಷನ್ ಸಿನಿಮಾ ಕನ್ನಡಕ್ಕೆ ಡಬ್ ಆಗುತ್ತದೆ ಎನ್ನುವ ಮಾತುಗಳು ಸಿನಿಮಾ ವಲಯದಲ್ಲಿ ಬರುತ್ತಿವೆ.

ಏಕಕಾಲದಲ್ಲಿ ತಮಿಳು ಹಾಗೂ ಕನ್ನಡದಲ್ಲಿ ತೆರೆಗೆ

ಇನ್ನೂ ಈ ಚಿತ್ರ ತಮಿಳೀನಲ್ಲಿ ಬಿಡುಗಡೆಯಾಗುವ ಕಾಲದಲ್ಲಿಯೇ ಕನ್ನಡದಲ್ಲೂ ತೆರೆಗೆ ಬರುತ್ತದೆ ಎನ್ನಲಾಗಿದೆ. ಈಗಾಗಲೇ ಸಿನಿಮಾ ತಂಡ ಕೂಡ ಮಾತುಕತೆ ನಡೆಸಿದೆ ಎನ್ನಲಾಗುತ್ತಿದೆ. ಆದರೆ ಸಿನಿಮಾ ತಂಡ ಇನ್ನೂ ಯಾವ ವಿಚಾರವನ್ನು ಅಧಿಕೃತ ಮಾಡಿಲ್ಲ. ಬದಲಾಗಿ ಸಿನಿಮಾ ವಲಯದಲ್ಲಿ ಈ ಮಾತುಗಳು ಕೇಳಿ ಬರುತ್ತಿವೆ. ಸದ್ಯ ರಶ್ಮಿಕಾ ಅಭಿಮಾನಿಗಳಲ್ಲಿ ಈ ವಿಚಾರ ಸಂತಸ ತಂದಿದೆ.

ಒಮ್ಮೆ ಇವಳು ನಕ್ಕರೆ ನಾಲ್ಕು ರಾಜ್ಯಗಳ ಗೆದ್ದಂತೆ…. ‘ರತ್ನಮಂಜರಿ’ಯ ಕಲರ್ ಫುಲ್ ಹಾಡು

#balkaninews #sandalwood #kollywood #rashmikamandanna #rashmikamandannaandkarti #dubbedmovies

Tags

Related Articles