ಸುದ್ದಿಗಳು

ತಮಿಳು ಸಿನಿಮಾ ಗಿಟ್ಟಿಸಿಕೊಂಡ ರಶ್ಮಿಕಾ

ಚೆನೈ, ಮಾ.14:

ನಟಿ ರಶ್ಮಿಕಾ ಮಂದಣ್ಣ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಸಕ್ಕತ್ ಸೌಂಡ್ ಮಾಡಿದ ನಟಿ. ಈಗಾಗಲೇ ಕನ್ನಡ ಹಾಗೂ ತೆಲುಗಿನಲ್ಲಿ ಮಿಂಚುತ್ತಿರುವ ಕೊಡಗಿನ ಸುಂದರಿ ರಶ್ಮಿಕಾ ಮಂದಣ್ಣ ಇದೀಗ ತಮಿಳಿನತ್ತ ಹೊರಟಿದ್ದಾರೆ. ಹೀಗಂತ ಒಂದು ವಿಚಾರ ಹೊರ ಬಿದ್ದಿದ್ದರೂ ಕೂಡ ಅದನ್ನು ತಳ್ಳಿ ಹಾಕಿದ್ದರು ಈ ನಟಿ. ಆದರೆ ಇದೀಗ ಸ್ವತಃ ಅವರೇ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಈ ವಿಚಾರವನ್ನು ಹೊರ ಹಾಕಿದ್ದಾರೆ.

ಕಾರ್ತಿ ಜೊತೆ ಸ್ಕ್ರೀನ್ ಶೇರ್

ಹೌದು, ಸದ್ಯ ನಟಿ ರಶ್ಮಿಕಾ ಈಗಾಗಲೇ ಸಕ್ಕತ್ ಸೌಂಡ್ ಮಾಡ್ತಾ ಇರುವ ನಟಿ. ಎಲ್ಲೇ ಹೋದರೂ ಆ ಸಿನಿಮಾ ಹಿಟ್ ಆಗೋದು ಗ್ಯಾರಂಟಿ. ಲಕ್ಕಿ ಸ್ಟಾರ್ ಅಂತಾನೇ ಅಭಿಮಾನಿಗಳು ಈ ನಟಿಯನ್ನು ಕರೆಯುವುದುಂಟು. ಇದೀಗ ಈ ನಟಿ ತಮಿಳಿನಲ್ಲೂ ತಮ್ಮ ಹವಾ ಎಬ್ಬಿಸಲು ರೆಡಿಯಾಗಿದ್ದಾರೆ‌. ನಿನ್ನೆಯಷ್ಟೇ ರಶ್ಮಿಕಾ ಅವರ ಮೊದಲ ತಮಿಳು ಸಿನಿಮಾದ ಮುಹೂರ್ತ ಕಾರ್ಯ ನಡೆದಿದೆ.

ಟ್ವಿಟ್ಟರ್ ನಲ್ಲಿ ಬಹಿರಂಗ ಮಾಡಿದ ನಟಿ

ತಮಿಳು ಸ್ಟಾರ್ ನಟ ಕಾರ್ತಿ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ ರಶ್ಮಿಕಾ. ಈ ನಟನ ನಟನೆಯ ಇನ್ನೂ ಹೆಸರಿಡದ ಚಿತ್ರದಲ್ಲಿ ರಶ್ಮಿಕ ಅಭಿನಯಿಸಲಿದ್ದಾರೆ. ತಮ್ಮ ಕಾಲಿವುಡ್​ ಎಂಟ್ರಿ ಬಗ್ಗೆ ರಶ್ಮಿಕಾ ಮಂದಣ್ಣ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇನ್ನೂ ಈ ಚಿತ್ರವನ್ನು ಬಕ್ಕಿಯರಾಜ್ ಕಣ್ಣನ್ ನಿರ್ದೇಶನ ಮಾಡುತ್ತಿದ್ದು, ಡ್ರೀಮ್ ವಾರಿಯರ್ಸ್​ ಸಂಸ್ಥೆ ನಿರ್ಮಾಣದ ಹೊಣೆ ಹೊತ್ತಿದೆ.

‘ಕಿರಿಕ್ ಪಾರ್ಟಿ’, ‘ಅಂಜನಿಪುತ್ರ’, ‘ಚಮಕ್’, ‘ಚಲೋ’, ‘ಗೀತಾ ಗೋವಿಂದಂ’, ‘ಯಜಮಾನ’ ಅಂತಹ ಚಿತ್ರಗಳ ಮೂಲಕ ಸೌತ್ ಇಂಡಸ್ಟ್ರಿಯಲ್ಲಿ ಸದ್ದು ಮಾಡ್ತಿದ್ದಾರೆ. ಇನ್ನೂ ಧೃವ ಅಭಿನಯದ ಪೊಗರು ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

ರುಚಿಕರವಾದ ಆಹಾರಕ್ಕಾಗಿ ಈ ಸುಂದರ ಬೀಚ್ ಗಾಗಿ ಇಲ್ಲಿಗೆ ಬೇಟಿ ನೀಡಿ ಎಂದ ಸಿಂಡ್ರೆಲಾ!!

#balkaninews #rashmikamandanna #tollywood #tamilmovies #rashmikamandannaandkarti

Tags

Related Articles