ಸುದ್ದಿಗಳು

ತನ್ನ ಪ್ರೀತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸಿದ ರಶ್ಮಿಕಾ

ಬೆಂಗಳೂರು, ಮಾ.20:

ನಟಿ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ತಮಿಳಿನಲ್ಲೂ ಸಿನಿಮಾ ಮಾಡುತ್ತಿರುವ ಬಗ್ಗೆ ಫೋಟೋ ಹಂಚಿಕೊಂಡಿದ್ದ ಈ ನಟಿ ಇದೀಗ ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ಈ ಬೆನ್ನಲ್ಲೇ ಇದೀಗ ಈ ನಟಿ ತಮ್ಮ ಪ್ರೀತಿಯ ಬಗೆಗಿನ ಬಗ್ಗೆ ಟ್ವಿಟ್ ಮಾಡಿದ್ದಾರೆ.

ಭಾವುಕ ಟ್ವಿಟ್ ಮಾಡಿದ ನಟಿ

ಒಂದು ಕಾಲವಿತ್ತು. ನಾನು ಪ್ರೀತಿಸುತ್ತಿದ್ದೆ. ಆದರೆ ನನ್ನ ನಿಜವಾದ ಪ್ರೀತಿಗೆ ಪರೀಕ್ಷೆ ನಡೆದಿತ್ತು. ಆದ್ರೆ ನಿನ್ನನ್ನು ಯಾರು ನಿಜವಾಗಿ ಪ್ರೀತಿ ಮಾಡುತ್ತಾರೆ. ನಿಜವಾದ ಕಾಳಜಿ ಮಾಡುತ್ತಾರೆ ಅನ್ನೋದನ್ನು ತಿಳಿಯುವ ಕಾಲ ಬಂದಿದೆ. ಅವರು ಈ ಪ್ರಪಂಚದಲ್ಲಿರುವ ಎಲ್ಲಾ ಪ್ರೀತಿ ಕಾಳಜಿಗೆ ಅರ್ಹರು. ಯಾರು ನಿನ್ನನ್ನು ಪ್ರೀತಿಸಲ್ಲವೋ ಅವರು ಕೂಡ ಸಂತೋಷವಾಗಿರಲಿ ಎಂದು ಟ್ವಿಟ್ ಮಾಡಿದ್ದಾರೆ.

ರಶ್ಮಿಕಾಗೆ ಫ್ಯಾನ್ ಜೊತೆ

ಇನ್ನೂ ಈ ಟ್ವಿಟ್ ಗೆ ಅನೇಕ ಅಭಿಮಾನಿಗಳು ರಿಪ್ಲೇ ಮಾಡಿದ್ದಾರೆ. ನೀವು ಬೆಳೆಯುತ್ತಲೇ ಇರಿ. ನಿಮ್ಮ ಬೆಳವಣಿಗೆ ಅಭಿವೃದ್ಧಿ ನೋಡಿ ಖುಷಿಯಾಗುತ್ತದೆ ಎಂದು ರೀ ಟ್ವಿಟ್ ಮಾಡುವ ಮೂಲಕ ನಿಮ್ಮ ಜೊತೆ ನಾವಿದ್ದೇವೆ ಎಂದು ತೋರಿಸಿದ್ದಾರೆ. ಸದ್ಯ ಈ ನಟಿ ಯಜಮಾನದಲ್ಲಿ ಮಿಂಚಿ ಇದೀಗ ಕನ್ನಡದಲ್ಲಿ ಮತ್ತೆ ಪೊಗರು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ತೆಲುಗು ವಾಹಿನಿಯ ಸಂಗೀತ ಕಾರ್ಯಕ್ರಮಕ್ಕೆ ಬೆಂಗಳೂರಿನ ಪೋಲಿಸ್ ಕಾನ್ಸ್ ಟೇಬಲ್.

#rashmikamandanna #tollywood #rashmikatwitter  #rashmikaengagement #rashmikamandannamovies

Tags