ಸುದ್ದಿಗಳು

ರಶ್ಮಿಕಾಗೆ ಬಂತು ಪುಟ್ಟ ಅಭಿಮಾನಿಯಿಂದ ದೊಡ್ಡ ಪತ್ರ

ಬೆಂಗಳೂರು, ಫೆ.11:

ನಟಿ ರಶ್ಮಿಕಾ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಬಂದು ಇಂದು ಕರ್ನಾಟಕ ಕ್ರಶ್ ಆಗಿದ್ದಾರೆ. ಈಗಾಗಲೇ ಕನ್ನಡ ಅಷ್ಟೇ ಅಲ್ಲ ಬಹು ಭಾಷೆಯಲ್ಲೂ ಈ ನಟಿ ಬ್ಯುಸಿಯಾಗಿದ್ದಾರೆ. ಸದ್ಯ ಯಜಮಾನ, ಪೊಗರು ಸಿನಿಮಾದಲ್ಲಿ ಬ್ಯುಸಿಯಾಗಿರುವ ಈ ನಟಿ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಅದ್ಬುತ ನಟನೆ, ಚಂದದ ಎಕ್ಸ್ ಪ್ರೆಷನ್ ಮೂಲಕವೇ ಎಲ್ಲರ ಗಮನ ಸೆಳೆಯುವ ಈ ನಟಿಗೆ ಅಭಿಮಾನಿಯೊಬ್ಬ ಪತ್ರ ಬರೆದಿದ್ದಾರೆ.

8 ವರ್ಷದ ಬಾಲಕನ ಪತ್ರ ವೈರಲ್

ಹೌದು, ಈ ನಟಿಗೆ ಅಭಿಮಾನಿಯೊಬ್ಬ ಸುಂದರವಾದ ಪತ್ರ ಬರೆದಿದ್ದು ಇದೀಗ ಈ ಪತ್ರ ವೈರಲ್ ಆಗಿದೆ. ಅಷ್ಟೇ ಅಲ್ಲ ಈ ಪತ್ರವನ್ನು ಟ್ವಿಟ್ಟರ್ ನಲ್ಲಿ ರಶ್ಮಿಕಾಗೆ ಟ್ಯಾಗ್ ಕೂಡ ಮಾಡಿದ್ದಾರೆ. ಈ ಅಭಿಮಾನಿ ಯಾರೋ ದೊಡ್ಡವನಲ್ಲ ಕೇವಲ 8 ವರ್ಷದ ಬಾಲಕ. ಈ ಅಭಿಮಾನಿ ನ್ಯೂಯಾರ್ಕ್ ಅವನು. ಇದೀಗ ಈ ಅಭಿಮಾನಿಯ ಪತ್ರದ ಫೋಟೋವನ್ನು ಅವರ ಫ್ಯಾನ್ ಕ್ಲಬ್ ಹಾಕಿದ್ದಾರೆ.

ಪುಟ್ಟ ಬಾಲಕನ ಪತ್ರ ದಲ್ಲಿ ಏನಿದೆ ಗೊತ್ತೆ..?

ಈ ಪುಟ್ಟ ಬಾಲಕ ಬರೆದಿರುವ ಪತ್ರ ಎಂಥವರ ತುಟಿಯಲ್ಲೂ ನಗು ತರಿಸುವಂತಿದೆ‌. ನೀವು ತುಂಬಾ ಅದ್ಭುತವಾದ ಮಹಿಳೆ. ನೀವು ನೀವಾಗಿ ನಟನೆ ಮಾಡುವುದು ನನಗೆ ತುಂಬಾ ಇಷ್ಟ. ನಿಮ್ಮ ಮುಖ ತುಂಬಾ ಚೆನ್ನಾಗಿ ಇದೆ. ನನಗೆ ನಿಮ್ಮ ಸಿನಿಮಾಗಳು ಹಾಗೂ ಹಾಡುಗಳು ಎಂದರೆ ಇಷ್ಟ. ನಿಮ್ಮ ‘ಗೀತಾ ಗೋವಿಂದಂ’ ಸಿನಿಮಾ ನೋಡಿ ಮಹಿಳೆಯರನ್ನು ಹೇಗೆ ಗೌರವಿಸಬೇಕು ಎಂದು ಕಲಿತುಕೊಂಡಿದ್ದೇನೆ. ನೀವು ಮಾತನಾಡುವ ಶೈಲಿ ಹಾಗೂ ನಿಮ್ಮ ಅಭಿನಯ ನನಗೆ ತುಂಬಾ ಇಷ್ಟ. ನಿಮ್ಮ ಚಿತ್ರದ ಹಾಡುಗಳನ್ನು ಕೇಳಲು ನನಗೆ ಖುಷಿ ಆಗುತ್ತದೆ.. ನಿಮ್ಮ ಚಿತ್ರದ ಹಾಡುಗಳು ಹಾಸ್ಯವಾಗಿ, ಶಾಂತಿಯುತವಾಗಿ ಇರುತ್ತದೆ. ನನಗೆ ತುಂಬಾ ಇಷ್ಟವಾಗುತ್ತದೆ. ನಾನು ‘ಗೀತಾ ಗೋವಿಂದಂ’ ಚಿತ್ರ ಹಾಗೂ ಆ ಚಿತ್ರದ ಹಾಡುಗಳನ್ನು ಕೇಳಿದ್ದೇನೆ. ಅದೊಂದು ಅದ್ಭುತ ಚಿತ್ರ. ನೀವು ಹೆಚ್ಚು ಸಿನಿಮಾ ಹಾಗೂ ಹಾಡಗಳನ್ನು ಮಾಡುತ್ತೀರಾ ಎಂದು ನನಗೆ ಗೊತ್ತು. ಮುಂದೆ ನಿಮ್ಮನ್ನು ಭೇಟಿ ಮಾಡಿದರೆ ನಾನು ನಿಮ್ಮನ್ನು ತಬ್ಬಿಕೊಳ್ಳಬೇಕು ಎಂದು ಬರೆದಿದ್ದಾನೆ.

ತಂಗಿಯೊಂದಿಗೆ ಸಖತ್ ಸ್ಟೆಪ್ ಹಾಕಿದ ‘ಕಿರಿಕ್’ ರಶ್ಮಿಕಾ ಮಂದಣ್ಣ

#rashmikamandanna #sandalwood #kannadamovies #balkaninews #rashmikamandannafansletter #rashmikatwitter #rashmikateluguandkannadamovies

Tags