ಸುದ್ದಿಗಳು

ಕ್ಯಾಮೆರಾ ಕಂಡೊಡನೆ ಮುಖ ಮುಚ್ಚಿಕೊಂಡ ರಶ್ಮಿಕಾ ಮಂದಣ್ಣ!!

ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೇ ಬಿಡುಗಡೆಯಾದ ‘ಡಿಯರ್ ಕಾಮ್ರೇಡ್’ ಚಿತ್ರದ ಯಶಸ್ಸನ್ನು ಆನಂದಿಸುತ್ತಿದ್ದಾರೆ. ಭರತ್ ಕಮ್ಮ ನಿರ್ದೇಶನದ ಈ ಚಿತ್ರವು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.

ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾದ ರಶ್ಮಿಕಾ ‘ಡಿಯರ್ ಕಾಮ್ರೇಡ್’ ಚಿತ್ರದ ನಂತರ ಸಾಕಷ್ಟು ಅವಕಾಶಗಳನ್ನು ಪಡೆಯುತ್ತಿದ್ದು, ಮುಂಬರುವ ಚಿತ್ರಗಳ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

ಅಂದಹಾಗೆ ನಿನ್ನೆ, ರಶ್ಮಿಕಾ ಸ್ಪೋರ್ಟ್ಸ್ ಲುಕ್ ನಲ್ಲಿ ಹೈದರಾಬಾದ್ ವಿಮಾನ ನಿಲ್ದಾಣ ಬಳಿ ಕಾಣಿಸಿಕೊಂಡರು. ಬ್ಲಾಕ್ ಆಂಡ್ ಬ್ಲಾಕ್ ಟ್ರಾವೆಲ್ ಔಟ್ ಫಿಟ್ ಧರಿಸಿದ್ದ ರಶ್ಮಿಕಾ ಪಾಪರಜ್ಜಿಗಳಿಗೆ ಪೋಸ್ ನೀಡುವ ಮನಸ್ಥಿತಿಯಲ್ಲಿರಲಿಲ್ಲ. ಆದರೆ ಕ್ಯಾಮೆರಾ ಕಂಡೊಡನೆ ಕೈಯಿಂದ ಮುಖವನ್ನು ಮುಚ್ಚಿಕೊಂಡು ರಶ್ಮಿಕಾ ನಗುತ್ತಿದ್ದರು.

ಪ್ರತಿ ಬಾರಿ ವಿಮಾನ ನಿಲ್ದಾಣದಲ್ಲಿ ಇಳಿದಾಗ ಸಂತೋಷದಿಂದ ಕ್ಯಾಮೆರಾಗೆ ಪೋಸ್ ಕೊಡುತ್ತಿದ್ದ ರಶ್ಮಿಕಾ ಇದೇ ಮೊದಲ ಬಾರಿಗೆ ಹೀಗೆ ಮುಖ ಮುಚ್ಚಿಕೊಂಡಿದ್ದಾರೆ.

 

 

 

ದಾಖಲೆ ಮೇಲೆ ದಾಖಲೆ; 600 ಮಿಲಿಯನ್ ಮುಟ್ಟಿದ ‘ರೌಡಿ ಬೇಬಿ’!

#balkaninews #rashmikamandanna #airport #photo

Tags