ಸುದ್ದಿಗಳು

‘ರಶ್ಮಿಕಾ ಮಂದಣ್ಣ’ರನ್ನು ಹಾಡಿ ಹೊಗಳಿದ ಮೆಗಾ ಪವರ್ ಸ್ಟಾರ್…!

ಬೆಂಗಳೂರು, ಆ.18: ಕನ್ನಡದಲ್ಲಿ ಕಿರಿಕ್ ಪಾರ್ಟಿಯ ಮೂಲಕ ಹೆಸರು ಮಾಡಿದ್ದ ನಟಿ ರಶ್ಮಿಕಾ ಮಂದಣ್ಣ ಈಗ ತೆಲಗು ಚಿತ್ರರಂಗದಲ್ಲಿಯೂ ದಿನೇ ದಿನೇ ಖ್ಯಾತಿ ಪಡೆಯುತ್ತಿದ್ದಾರೆ. . ತೆಲುಗು ಚಿತ್ರರಂಗದ ಪ್ರಸಿದ್ಧ ನಟರು ಕೂಡ ರಶ್ಮಿಕಾ ಅವರ ಅದ್ಭುತ ನಟನೆಯನ್ನು ಹೊಗಳುತ್ತಿದ್ದಾರೆ.

ರಶ್ಮಿಕಾ ನಟಿಸಿರುವ ‘ಗೀತಾ ಗೋವಿಂದಂ’ ಚಿತ್ರಕ್ಕೆ ಪ್ರೇಕ್ಷಕರಿಂದ ಅತಿ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ತೆಲುಗು ಚಿತ್ರರಂಗದ ಬಿಗ್ ಸ್ಟಾರ್ ಗಳು ಈ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಟಾಲಿವುಡ್ ನ ಮೆಗಾ ಪವರ್ ಸ್ಟಾರ್ ಹಾಗೂ ಚಿರಂಜೀವಿಯ ಪುತ್ರ ರಾಮ್ ಚರಣ್ ಈ ಚಿತ್ರದ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ.

ರಶ್ಮಿಕಾ ಅಭಿನಯವನ್ನು ಹೊಗಳಿದ ರಾಮ್

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ನಟನೆಯನ್ನು ನೋಡುವುದು ತುಂಬ ಖುಷಿ ಆಗುತ್ತದೆ. ರಶ್ಮಿಕಾ ಅಭಿನಯವನ್ನು ಹಾಡಿ ಹೊಗಳಿದ ರಾಮ್ ಚರಣ್ ಅವರು, ಇಬ್ಬರೂ ತುಂಬಾ ಸಹಜವಾಗಿ ನಟಿಸಿದ್ದಾರೆ. ಅಭಿನಯವೇ ಚಿತ್ರದ ಸುಂದರ ಕಥೆಯನ್ನು ಪೂರ್ಣಗೊಳಿಸಿದೆ. ಅಂತೆಯೇ ಸಿನಿಮಾದ ಸಂಗೀತವೂ ತುಂಬಾ ಚೆನ್ನಾಗಿದೆ. ಒಳ್ಳೆಯ ಕಥೆಯನ್ನು ಪರಿಪೂರ್ಣವಾದ ಜೋಡಿಗೆ ಕೊಟ್ಟು, ಚಿತ್ರವು ಸುಂದರವಾಗಿ ಮೂಡುವಂತೆ ಮಾಡಿದ್ದಾರೆ .” ಎಂದು ರಾಮ್ ಚರಣ್ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಮೆಗಾ ಪವರ್ ಸ್ಟಾರ್ ಆಗಿರುವ ರಾಮ್ ಚರಣ್ ಅವರ ಹೊಗಳಿಕೆಗೆ ತುಂಬಾ ಸಂತಸ ವ್ಯಕ್ತಪಡಿಸಿರುವ ರಶ್ಮಿಕಾ ಮಂದಣ್ಣನವರು, ಪ್ರತಿಕ್ರಿಯೆ ನೀಡಿದ್ದಾರೆ. ಸರ್, ನೀವು ನಮ್ಮ ಸಿನಿಮಾ ನೋಡಿರುವುದು ಹಾಗೂ ಅದನ್ನು ಇಷ್ಟಪಟ್ಟಿರುವುದು ತುಂಬಾ ಖುಷಿಯ ಸಂಗತಿ. ನಿಮ್ಮ ಈ ದೊಡ್ಡ ಪ್ರೋತ್ಸಾಹಕ್ಕೆ ನನ್ನ ಧನ್ಯವಾದಗಳು. ಎಂದು ತಿಳಿಸಿದ್ದಾರೆ. ಅಂದಹಾಗೆ, ಕೆಲ ದಿನಗಳ ಹಿಂದೆ ನಟ ಮಹೇಶ್ ಬಾಬು ‘ಗೀತಾ ಗೋವಿಂದಂ’ ಸಿನಿಮಾವನ್ನು ಹೊಗಳಿದ್ದರು. ಈಗ ರಾಮ್ ಚರಣ್ ಕೂಡ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ.

ಗೀತಾ ಗೋವಿಂದಂ ಚಿತ್ರವು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ಕನ್ನಡದ ನಟಿಯೊಬ್ಬಳು ತೆಲಗು ಚಿತ್ರರಂಗದಲ್ಲಿ ಹೆಸರು ಗಳಿಸುವಂತೆ ಮಾಡಿರುವುದು ರಾಜ್ಯದ ಜನತೆಗೆ ಹೆಮ್ಮೆಯ ಸಂಗತಿಯೇ ಹೌದು.

Tags