ಸುದ್ದಿಗಳು

ಟಾಲಿವುಡ್ ವಿಜಯ್‌ ದೇವರಕೊಂಡ ಚಿತ್ರದಲ್ಲಿ ಕಿರಿಕ್ ಬೆಡಗಿ!

ಟಾಲಿವುಡ್ ರಿಯಲ್ ಸ್ಟಾರ್  ವಿಜಯ್‌ ದೇವರಕೊಂಡ್‌‌ ‘ಅರ್ಜುನ್ ರೆಡ್ಡಿ’ ಚಿತ್ರದ ಬಳಿಕ ಸಾಕಷ್ಟು ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ ಇದರ ಬೆನ್ನಲ್ಲೇ ಮಹಾನಟಿ ಸಿನಿಮಾ ಸಹ ದಕ್ಷಿಣ ಭಾರತದಲ್ಲಿ ಸಾಕಷ್ಟು ಯಶಸ್ಸು ಗಳಿಸುವುದರ ಮೂಲಕ ನಟ ವಿಜಯ್ ದೇವರಕೊಂಡ ಅವರಿಗೆ ಸಾಕಷ್ಟು ರೆಕಗ್ನೈಜೇಷನ್ ತಂದು ಕೊಡುವುದರ ಮೂಲಕ ಅವರನ್ನು ಸಿಕ್ಕಾಬಟ್ಟೆ ಬ್ಯುಸಿಯಾಗುವಂತೆ ಸಾಲು ಸಾಲು ಸಿನಿಮಾಗಳು ಅವರ ತೆಕ್ಕೆಯಲ್ಲಿವೆ. ಅವುಗಳ ಪೈಕಿ ಒಂದು ಚಿತ್ರದ ಟೈಟಲ್ ಇಂದು ಫಿಕ್ಸ್ ಆಗಿದೆ ಎಂದು ಸಿನಿಮೂಲಗಳು ತಿಳಿಸಿವೆ.

ವಿಜಯ್‌ ನಟಿಸಲಿರುವ ಮುಂದಿನ ಚಿತ್ರಕ್ಕೆ ‘ಗೀತ ಗೋವಿಂದಂ’ ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರವನ್ನು ಉದಯೋನ್ಮುಖ ನಿರ್ದೇಶಕ ಪರಶುರಾಮ್‌ ಅವರು ಯಾಕ್ಷನ್ ಕಟ್ ಹೇಳಲಿದ್ದು, ಈ ಚಿತ್ರಕ್ಕೆ ವಿಜಯ್ ಅವರಿಗೆ ಜೋಡಿಯಾಗಿ ಚಂದನವನದ ಕ್ಯೂಟ್ ಬೆಡಗಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.

ಪ್ರಸ್ತುತ ರಶ್ಮಿಕಾ, ಚಲೋ ಚಿತ್ರದಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಈಗಾಗಲೇ ತಮ್ಮ ಕ್ರೇಜ್ ಕ್ರಿಯೇಟ್ ಮಾಡಿರುವ  ನಟಿ ಟಾಲಿವುಡ್‌ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಜೊತೆಗೆ ವಿಜಯ್‌ ದೇವರಕೊಂಡ ಅವರ ಮುಂದಿನ ಚಿತ್ರಕ್ಕೆ ನನ್ನನ್ನು ಆಯ್ಕೆ ಮಾಡಿರುವುದು ನನಗೆ ತುಂಬಾ ಖುಷಿ ನೀಡಿದೆ ಎಂದು ರಶ್ಮಿಕಾ ಮಾಧ್ಯಮಗಳೊಂದಿಗೆ ತಿಳಿಸಿದ್ದಾರೆ.

Tags