ಸುದ್ದಿಗಳು

ರಶ್ಮಿಕಾಗೆ ಧನ್ಯವಾದ ತಿಳಿಸಿದ ‘ಯಜಮಾನ’!!

ಬೆಂಗಳೂರು,ಫೆ.13:

‘ಯಜಮಾನ’ ಟ್ರೇಲರ್ ಇದೀಗ ಬಾರೀ ಕ್ರೇಜ್ ನನ್ನೇ ಹುಟ್ಟು ಹಾಕಿದೆ. ಅಷ್ಟೇ ಅಲ್ಲ ಈ ಟ್ರೇಲರ್ ನಲ್ಲಿ ಯಜಮಾನ ಅದ್ಬುತವಾಗಿ ನಟಿಸಿದ್ದಾರೆ. ಶತ್ರುಗಳನ್ನು ಹುಟ್ಟು ಅಡಗಿಸುವ ರೀತಿ, ಫೈಟಿಂಗ್, ಮಾಸ್ ಲುಕ್, ಹಳ್ಳಿಯ ವಾತಾವರಣ ಹೀಗೆ ಎಲ್ಲವೂ ಕೂಡ ಸೂಪರ್ ಆಗಿ ಮೂಡಿ ಬಂದಿದೆ.

ನಂಬರ್ 1 ಸ್ಥಾನ

ಕೌಟುಂಬಿಕ ಕಥೆಯನ್ನೊಳಗೊಂಡ ಯಜಮಾನ ಟ್ರೇಲರ್ ಗೆ ಅಭಿಮಾನಿಗಳು ಫಿದಾ ಆಗಿದ್ದು, ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ನಂಬರ್ 1 ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಈ ಸಿನಿಮಾ ಮಾರ್ಚ್ 1 ಕ್ಕೆ ತೆರೆ ಕಾಣುವುದು ಇದೀಗ ಪಕ್ಕಾ ಆಗಿದೆ. ಈ ಟ್ರೈಲರ್ ಗೆ ಸಿಕ್ಕ ಪ್ರತಿಕ್ರಿಯೆ ನೋಡಿ ಸ್ವತಃ ದರ್ಶನ್ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

Image result for yajaman poster

ರಶ್ಮಿಕಾ ಗೆ ದಚ್ಚು ಟ್ವೀಟ್

ಟ್ವೀಟ್ ಮೂಲಕ ಅಭಿಮಾನಿಗಳಿಗೆ ಹಾಗೂ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣನಿಗೂ ಟ್ವಿಟ್ ಮಾಡಿ  ಧನ್ಯವಾದ ಸಲ್ಲಿಸಿದ್ದಾರೆ. ನಿಮ್ಮ ಬೆಂಬಲ ಹಾಗೂ ಪ್ರೀತಿಗೆ ಧನ್ಯವಾದಗಳು ಎಂದು ದರ್ಶನ್ ಟ್ವೀಟ್ ಮಾಡಿದ್ದರು ದಚ್ಚು.. ಇದನ್ನು ನೋಡಿ ಖುಷಿಯಾಗಿರುವ ರಶ್ಮಿಕಾ ನಿಮ್ಮ ಪ್ರೀತಿ ಹಾಗೂ ಬೆಂಬಲಕ್ಕೆ ಧನ್ಯವಾದಗಳು..  ನಿಮ್ಮ ಜತೆ ಕೆಲಸ ಮಾಡಿದ್ದು ನನಗೆ ತುಂಬಾ ಖುಷಿ ಕೊಟ್ಟಿದೆ.  ಬಿಡುಗಡೆಗಾಗಿ ಕಾಯುತ್ತಿದ್ದೇನೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎನ್ನುವ ಭರವಸೆ ಇದೆ… ಎಂದು ಪ್ರತಿಕ್ರಿಯೆ ನೀಡಿದ್ದಾಳೆ…

ಫ್ಯಾನ್ಸಿ ಕಿವಿಯೋಲೆಗೆ ಡಿಮಾಂಡಪ್ಪೋ ಡಿಮ್ಯಾಂಡ್!!

#balkaninews #sandalwood #yajamana #rashmikamandanna

Tags