ಸುದ್ದಿಗಳು

ಮತ್ತೊಬ್ಬ ಟಾಲಿವುಡ್ ನಟನೊಂದಿಗೆ ಅವಕಾಶ ಗಿಟ್ಟಿಸಿಕೊಂಡ ರಶ್ಮಿಕಾ!!

ಮತ್ತೊಬ್ಬ ಟಾಲಿವುಡ್ ನ ಸ್ಟಾರ್ ನಟನೊಂದಿಗೆ ಸಿನಿಮಾ!!

ಬೆಂಗಳೂರು,ಸೆ.09 : ಚಂದನವನದ ಕಿರಿಕ್ ಬೆಡಗಿ ಸದಾ ಸುದ್ದಿಯಲ್ಲಿರುತ್ತಾಳೆ. ಟಾಲಿವುಡ್ ನಲ್ಲಿ  ರಶ್ಮಿಕಾ ಮಂದಣ್ಣ ಈಗ ಸಕತ್ ಬ್ಯುಸಿ. ಕಯಲ್ಲಿ ಸಾಲು ಸಾಲು ಚಿತ್ರಗಳು. ‘ಗೀತ ಗೋವಿಂದಂ’ ಹಿಟ್ ಆಗಿದ್ದೇ ತಡ, ಆಕೆಯ ಬೇಡಿಕೆಯ ಜೊತೆಗೆ ಸಂಭಾವನೆಯೂ ದುಪ್ಪಟ್ಟಾಗಿದೆ. ಇದೀಗ ಮತ್ತೊಬ್ಬ ಟಾಲಿವುಡ್ ನ  ಸ್ಟಾರ್ ನಟರೊಬ್ಬರ ಜೊತೆ ನಟಿಸಲಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿದೆ.

Related image

 ಜ್ಯೂನಿಯರ್ ಎನ್ ಟಿ ಆರ್ ಜೊತೆ ರಶ್ಮಿಕಾ!!

ಈಗಾಗಲೇ ವಿಜಯ ದೇವರಕೊಂಡ ಸೇರಿದಂತೆ, ಅಕ್ಕಿನೇನಿ ನಾಗಾರ್ಜನ್ ಹಾಗೂ ನಾನಿ ಜೊತೆ ರಶ್ಮಿಕಾ ಅಭಿನಯ ಮಾಡಿದ್ದಾರೆ. ಇದೀಗ ಟಾಲಿವುಡ್ ಸ್ಟಾರ್ ಜ್ಯೂನಿಯರ್ ಎನ್ ಟಿ ಆರ್ ಅಭಿನಯದ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ಅಭಿನಯ ಮಾಡುತ್ತಾರಂತೆ. ಈಗಾಗಲೇ ಸಿನಿಮಾ ನಿರ್ಮಾಪಕರು ಒಂದು ಸುತ್ತಿನ ಮಾತುಕಥೆ ನಡೆಸಿದ್ದು ರಶ್ಮಿಕಾ ಕಡೆಯಿಂದ ಓಕೆ ಅನ್ನೋ ಮಾತು ಬರಬೇಕಿದೆ..

 

Tags