ಸುದ್ದಿಗಳು

“ಈ ಕೆರೆ ಇಷ್ಟರ ಮಟ್ಟಿಗೆ ಮಾಲಿನ್ಯವಾಗಿದೆ ಎಂದು ನನಗೆ ನಿಜವಾಗಿಯೂ ಗೊತ್ತಿರಲಿಲ್ಲ”

ಬೆಳ್ಳಂದೂರು ಕೆರೆಯ ದುಃಸ್ಥಿಯ ಬಗ್ಗೆ ದುಃಖ

ಬೆಂಗಳೂರು,ಡಿ.14: ನಟಿ ರಶ್ಮಿಕಾ ಸದಾ ಒಂದೆಲ್ಲಾ ಒಂದು ಕಿರಿಕ್ ನಲ್ಲಿ ಸಿಲುಕಿಕೊಳ್ಳುತ್ತಿದ್ದಳು.. ಆದರೆ ಈ ಬಾರಿ ಒಂದು ಒಳ್ಳೆಯ ಸಮಾಜ ಮುಖಿ ಕಾರ್ಯವನ್ನು ಮಾಡುವ ಮೂಲಕ ಸುದ್ದಿಯಾಗಿದ್ದಾರೆ..

ಬೆಳ್ಳಂದೂರು ಕೆರೆ..

ರಶ್ಮಿಕಾ, ಜಲಮಾಲಿನ್ಯದ ಕುರಿತು ಜನರಿಗೆ  ಅರಿವು ಮೂಡಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ.. . ಬೆಂಗಳೂರಿನ ವಿಷಪೂರಿತ, ವಿನಾಶದಂಚಿನ ಕೆರೆ ಎಂದರೆ ಬೆಳ್ಳಂದೂರು ಕೆರೆ.. ಇಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ ರಶ್ಮಿಕಾ.. ಒಂದೆರಡು ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅವರು, ಬೆಳ್ಳಂದೂರು ಕೆರೆಯ ದುಃಸ್ಥಿಯ ಬಗ್ಗೆ ದುಃಖ ಪಟ್ಟಿದ್ದಾರೆ…

 ರಶ್ಮಿಕಾ ಟ್ವೀಟ್

“ಈ ಕೆರೆ ಇಷ್ಟರ ಮಟ್ಟಿಗೆ ಮಾಲಿನ್ಯವಾಗಿದೆ ಎಂದು ನನಗೆ ನಿಜವಾಗಿಯೂ ಗೊತ್ತಿರಲಿಲ್ಲ, ಫೋಟೋಶೂಟ್ ಗೆಂದು ಅಲ್ಲಿಗೆ ಹೋದ ಮೇಲೆ ನನಗೆ ತಿಳಿಯಿತು..  ಆ ಕೆರೆಯ ದುಃಸ್ಥಿತಿ ನೋಡಿ ನನ್ನ ಹೃದಯ ಒಡೆದೇ ಹೋಯಿತು, ನೆನಪಿಸಿಕೊಳ್ಳಿ ಕೆಲ ವರ್ಷಗಳ ಹಿಂದೆ ಈ ಕೆರೆ ಎಷ್ಟು ಚೆನ್ನಾಗಿತ್ತು. ಆದರೆ,ಈಗ ಎಲ್ಲಿ ನೋಡಿದರೂ ನೀರು ಮಲಿನಗೊಂಡಿದೆ. ನನಗೆ ಅಲ್ಲಿ ನಿಲ್ಲಲು ಮನಸ್ಸಾಗಲಿಲ್ಲ. ಆದರೆ ನಿಮ್ಮೊಂದಿಗೆ ಇದನ್ನು ಹಂಚಿಕೊಳ್ಳೋಣ ಎಂದೆನಿಸಿತು” ಎಂದು ಟ್ವೀಟ್ ಮಾಡಿದ್ದಾರೆ.

ಪ್ಲಾಸ್ಟಿಕ್ ಕವರ್ಗಳು ತೇಲಾಡುತ್ತಿವೆ

ಇನ್ನು ರಶ್ಮಿಕಾ ಶೇರ್ ಮಾಡಿರುವ ಫೋಟೋಗಳ ಒಂದರಲ್ಲಿ ನೀರಿನೊಳಗೆ ಧುಮುಕಿದ್ದಾರೆ. ಅವರ ಸುತ್ತ ಪ್ಲಾಸ್ಟಿಕ್ ಕವರ್​ಗಳು ತೇಲಾಡುತ್ತಿವೆ… ಇನ್ನೊಂದು ಚಿತ್ರದಲ್ಲಿ ಕೆರೆಯ ದಂಡೆಯ ಮೇಲೆ ಚಿಂತಾ ಕ್ರಾಂತವಾಗಿ ರಶ್ಮಿಕಾ ನಿಂತಿದ್ದಾರೆ. ​​ ಹೀಗೆ ಈ ಫೋಟೋಗಳು ನಾನಾ ಬಗೆಯ ಅರ್ಥಗಳನ್ನು ಕೊಡುತ್ತವೆ..

Tags

Related Articles