ಸುದ್ದಿಗಳು

‘ಯಜಮಾನ’ನೊಂದಿಗೆ ಮಿಂಚುತ್ತಿರುವ ‘ಕಿರಿಕ್’ ಹುಡ್ಗಿ ರಶ್ಮಿಕಾ ಕಟೌಟ್..!!!

‘ಕಿರಿಕ್’ ಹುಡ್ಗಿ ರಶ್ಮಿಕಾ- ತುಮಕೂರಿನ ಅಭಿಮಾನಿಗಳಿಂದ ಶುಭ ಹಾರೈಕೆ

ಬೆಂಗಳೂರು.ಮಾ.01: ಡಿ-ಬಾಸ್ ದರ್ಶನ್ ನಟನೆಯ ಬ್ಲಾಕ್ ಬಾಸ್ಟರ್ ‘ಯಜಮಾನ’ ಸಿನಿಮಾ ಇಂದು ದೇಶಾದ್ಯಂತ ತೆರೆ ಕಂಡಿದೆ. ಬೆಳ್ಳಗ್ಗೆ ಆರು ಗಂಟೆಯಿಂದಲೇ ಚಿತ್ರದ ಪ್ರದರ್ಶನ ಆರಂಭವಾಗಿದ್ದು ಚಿತ್ರಕ್ಕೆ ಎಲ್ಲೆಡೆ ಅದ್ದೂರಿ ಸ್ವಾಗತ ಸಿಕ್ಕಿದೆ. ಇನ್ನು ಚಿತ್ರಮಂದಿರಗಳ ಮುಂದೆ ಸಾಮಾನ್ಯವಾಗಿ ನಾಯಕನ ಕಟೌಟ್ ಅನ್ನು ಹಾಕುತ್ತಾರೆ. ಆದರೆ ತುಮಕೂರಿನ ಅಭಿಮಾನಿಗಳು ರಶ್ಮಿಕಾರ ಕಟೌಟ್ ಅನ್ನು ಹಾಕಿದ್ದಾರೆ.

ರಶ್ಮಿಕಾ ಕಟೌಟ್

‘ಯಜಮಾನ’ ಸಿನಿಮಾ ತೆರೆಕಂಡ ಪ್ರತಿಯೊಂದು ಚಿತ್ರಮಂದಿರಗಳ ಮುಂದೆ 60,70,80 ಅಡಿ ಎತ್ತರದ ಕಟೌಟ್ ಗಳು ರಾರಾಜಿಸುತ್ತಿವೆ. ವಿಶೇಷವೆಂದರೆ, ನರ್ತಕಿ ಥಿಯೇಟರ್ ಮುಂದೆ ದರ್ಶನ್ ರ ಮಗ ವಿನೀಶ್ ರ ಕಟೌಟ್ ಸಹ ಹಾಕಲಾಗಿದೆ. ಮತ್ತೊಂದು ವಿಶೇಷವೆಂದರೆ, ‘ಕಿರಿಕ್’ ಹುಡ್ಗಿ ರಶ್ಮಿಕಾ ಮಂದಣ್ಣರ ಕಟೌಟ್ ಸಹ ಹಾಕಲಾಗಿದೆ.

ಹೌದು, ಇದೇ ಮೊದಲ ಬಾರಿಗೆ ಬಿಗ್ ಸ್ಟಾರ್ ನಟರ ಚಿತ್ರದ ಬಿಡುಗಡೆಯ ದಿನ ಆ ಚಿತ್ರದ ನಾಯಕಿಯ ಕಟೌಟ್ ನಿಲ್ಲಿಸುವುದು ಕಡಿಮೆ. ಆದರೆ ‘ಯಜಮಾನ’ ಚಿತ್ರ ತೆರೆ ಕಂಡ ತುಮಕೂರಿನಲ್ಲಿ ರಶ್ಮಿಕಾರ ಅಭಿಮಾನಿಗಳು ಕಟೌಟ್ ನಿಲ್ಲಿಸಿದ್ದಾರೆ. ಈ ಚಿತ್ರದಲ್ಲಿ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದ್ದು, ತುಮಕೂರಿನ ಯಾವ ಚಿತ್ರಮಂದಿರವೆಂದು ತಿಳಿದು ಬಂದಿಲ್ಲ. ಆದರೆ ಇದೇ ಮೊದಲ ಬಾರಿಗೆ ಸ್ಟಾರ್ ನಟನ ಚಿತ್ರದಲ್ಲಿ ನಟಿಸಿದ ನಟಿಯ ಕಟೌಟ್ ಅನ್ನು ನಿಲ್ಲಿಸಿರುವುದು ವಿಶೇಷವೆಂದೇ ಹೇಳಬಹುದು.

ಇದಕ್ಕೂ ಮುನ್ನ ನಟಿಯರಾದ ಮಾಲಾಶ್ರೀ, ರಾಗಿಣಿ, ಪ್ರಿಯಾಂಕಾ ಉಪೇಂದ್ರ, ಹರ್ಷಿಕಾ ಪೂಣಚ್ಚ ಸೇರಿದಂತೆ ಅನೇಕ ನಟಿಯರ ಕಟೌಟ್ ಗಳನ್ನು ಚಿತ್ರಮಂದಿರದ ಮುಂದೆ ನಿಲ್ಲಿಸಲಾಗಿದ್ದು ಮತ್ತು ಅವುಗಳೆಲ್ಲಾ ಮಹಿಳಾ ಪ್ರಧಾನ ಚಿತ್ರಗಳಾಗಿದ್ದವು. ಆದರೆ ‘ಯಜಮಾನ’ ಚಿತ್ರವು ನಾಯಕಪ್ರಧಾನ ಚಿತ್ರವಾಗಿದೆ.

ಇನ್ನು ಚಿತ್ರದಲ್ಲಿ ದರ್ಶನ್, ರಶ್ಮಿಕಾ ಮಂದಣ್ಣ, ದೇವರಾಜ್, ಧನಂಜಯ್, ಶರತ್ ಲೋಹಿತಾಶ್ವ, ಸಾಧುಕೋಕಿಲ ಸೇರಿದಂತೆ ಅನೇಕರು ನಟಿಸಿದ್ದು, ವಿ.ಹರಿಕೃಷ್ಣ ಮತ್ತು ಪಿ.ಕುಮಾರ್ ಜಂಟಿಯಾಗಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ತ್ರಿಭಾಷೆಗಳಲ್ಲಿ ‘ಹಾರರ್’ ಸಿನಿಮಾ ಮಾಡಲು ತಯಾರಿ ಮಾಡಿಕೊಂಡ ಆರ್.ಜಿ.ವಿ

#rashmikamandanna, #balkaninews #yajamana, #darshan, #filmnews, #kannadasuddigalu, #rashmikacoutout

Tags