ಸುದ್ದಿಗಳು

ತಂಗಿಯೊಂದಿಗೆ ಸಖತ್ ಸ್ಟೆಪ್ ಹಾಕಿದ ‘ಕಿರಿಕ್’ ರಶ್ಮಿಕಾ ಮಂದಣ್ಣ

#16YearsChallenge  ಚಾಲೆಂಜ್ ಸ್ವೀಕರಿಸಿದ ರಶ್ಮಿಕಾ

ಬೆಂಗಳೂರು.ಜ.29

‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಜಯಭೇರಿ ಬಾರಿಸಿ, ಸದ್ಯ ಟಾಲಿವುಡ್ ನಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ. ಇನ್ನು ಕೆಲವು ವಾರಗಳ ಹಿಂದೆಯಷ್ಟೇ #10 ಇಯರ್ಸ್ ಚಾಲೆಂಜ್ ಎಂಬ ಸವಾಲು ಎಲ್ಲಾ ಕಡೆ ವೈರಲ್ ಆಗಿತ್ತು. ಎಲ್ಲರೂ ಈ ಸವಾಲನ್ನು ಸ್ವೀಕರಿಸಿ, ತಮ್ಮ 10 ವರ್ಷದ ಹಿಂದಿನ ಫೋಟೋದೊಂದಿಗೆ, ಪ್ರಸ್ತುತ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದರು. ಈಗ #10YearsChallenge ಬಂದಿದೆ.

ಸವಾಲು ಸ್ವೀಕರಿಸಿದ ರಶ್ಮಿಕಾ

ಹೌದು, ಸದ್ಯ ‘ಯಜಮಾನ’ ಚಿತ್ರದ ಬಿಡುಗಡೆಯಲ್ಲಿ ಬ್ಯೂಸಿಯಾಗಿರುವ ರಶ್ಮಿಕಾ,  ಪವರ್ ಸ್ಟಾರ್ ನಟಿಸಿರುವ ‘ಯಾರೇ ಕೂಗಾಡಲಿ’ ಚಿತ್ರದ ಹಾಡಿಗೆ ತನ್ನ 6 ವರ್ಷದ ತಂಗಿಯೊಂದಿಗೆ  ಕುಣಿದು ಕುಪ್ಪಳಿಸಿದ್ದಾರೆ, ಇದಕ್ಕೆ ಕಾರಣ #16YearsChallenge..!!!

ಈಗ ತನ್ನ ತಂಗಿಯೊಂದಿಗೆ ಮಾಡಿದ ಡ್ಯಾನ್ಸ್ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ರಶ್ಮಿಕಾ ಅಪ್ಲೋಡ್ ಮಾಡಿದ್ದು, ಸಖತ್ ಸುದ್ದಿ ಮಾಡುತ್ತಿದೆ. ಅವರು ತಮಗಿಂತ 16 ವರ್ಷದ ಕಿರಿಯ ತಂಗಿಯೊಂದಿಗೆ ಡ್ಯಾನ್ಸ್ ಮಾಡಿ, ಅದಕ್ಕೆ #16YearsChallenge ಎಂಬ ಹ್ಯಾಷ್ ಟ್ಯಾಗ್ ನೀಡಿದ್ದಾರೆ.

“#16YearsChallenge… ನೀವು ನೋಡುತ್ತಿರುವುದು 6 ವರ್ಷದ ಒಲ್ಡ್ ಮಿ ಆ್ಯಂಡ್ 22 ವರ್ಷದ ಒಲ್ಡ್ ಮೀ, ಇಬ್ಬರೂ ಒಟ್ಟಾಗಿ ಕುಣಿಯುತ್ತಿರುವುದು. ನಾನು ಟಿವಿಯಲ್ಲಿ ಬರುತ್ತಿದ್ದ ಹಾಡೊಂದನ್ನು ನೋಡುತ್ತಲೇ ಡ್ಯಾನ್ಸ್ ಕಲಿತೆ ಹಾಗೂ ಈಗಲೂ ಅದನ್ನು ಮಾಡುತ್ತೇನೆ. ನಾನು ಮಾಡಿದ್ದನ್ನೇ ನನ್ನ ತಂಗಿಯೂ ಮಾಡುತ್ತಿದ್ದಾಳೆ,’ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.

#rashmikamandanna, #balkaninews #filmnews, #kannadasuddigalu

 

Tags