ಸುದ್ದಿಗಳು

ರಕ್ಷಿತ್ ಶೆಟ್ಟಿಯನ್ನು ಉರಿಸುವುದಕ್ಕೆ ‘ಕಿರಿಕ್’ ರಶ್ಮಿಕಾ ಹೀಗ್ಮಾಡಿದ್ರಾ..?

‘ಡಿಯರ್ ಕಾಮ್ರೆಡ್’ ಚಿತ್ರದ ಕುರಿತಂತೆ

ಬೆಂಗಳೂರು.ಮಾ.20: ಮೊನ್ನೆ ತಾನೇ ಬಿಡುಗಡೆಯಾಗಿದ್ದ ‘ಡಿಯರ್ ಕಾಮ್ರೆಡ್’ ಚಿತ್ರದ ಟೀಸರ್ ಬೇರೆಯದ್ದೇ ವಿಷಯಕ್ಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೌದು, ಇಲ್ಲಿ ನಾಯಕ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ನಡುವಿನ ಲಿಪ್ ಲಾಕ್ ದೃಶ್ಯವನ್ನು ಕಂಡು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಸಿಟ್ಟಿಗೆದ್ದಿದ್ದಾರೆ.

ಯಾರನ್ನು ಉರಿಸುವುದಕ್ಕೆ ಹೀಗೆಲ್ಲಾ ಮಾಡ್ತಿದ್ದೀರಿ ಎಂದು ಎಂದು ಅಭಿಮಾನಿಗಳು ಕಿರಿಕ್ ರಶ್ಮಿಕಾರನ್ನು ಪ್ರಶ್ನಿಸಿದ್ದಾರೆ.!!! ಒಂಧು ಸಿನಿಮಾಗಾಗಿ ಹೀಗೆಲ್ಲ ಮಾಡುತ್ತಿರುವುದು ಎಷ್ಟು ಸರಿ..? ಯೋಚಿಸಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಿ ಎಂದೆಲ್ಲ ಬುದ್ದಿ ಹೇಳುತ್ತಿದ್ದಾರೆ. ಜೊತೆಗೆ ರಕ್ಷಿತ್ ಶೆಟ್ಟಿ ಅವ್ರನ್ನು ಉರಿಸೋಕೆ ರಶ್ಮಿಕಾ ಹೀಗೆಲ್ಲಾ ಮಾಡ್ತಿದ್ದಾರೆ ಎನ್ನುವ ಊಹಾಪೋಹಗಳು ಸಹ ಹರಿದಾಡುತ್ತಿವೆ.

ಏಳು ಸೆಂಕೆಂಡ್ ನ ಈ ಟೀಸರ್ ನಲ್ಲಿ ನಟ ವಿಜಯ್ ಮಾಸ್ ಹಾಗೂ ರೊಮ್ಯಾಂಟಿಕ್ ಎರಡೂ ಶೇಡ್ ನಲ್ಲಿ ಕಾಣಿಸಿದ್ದರೆ ನಟಿ ರಶ್ಮಿಕಾ ಸಖತ್ ಬೋಲ್ಡ್ ಆಗಿ ಮಿಂಚಿದ್ದಾರೆ. ಈ ಹಿಂದಿನ ಚಿತ್ರ ಗೀತಾ ಗೋವಿಂದಂ ನಂತೆಯೇ ಇಲ್ಲಿಯೂ ರಶ್ಮಿಕಾ ಹಾಗೂ ವಿಜಯ್ ಲ್ಕಿಪ್ ಲಾಕ್ ಸೀನ್ ಇದ್ದು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

ಟೀಸರ್ ಸದ್ದು ಮಾಡುತ್ತಿರುವಂತೆಯೇ ರಕ್ಷಿತ್ ಶೆಟ್ಟಿಯ ಪರವಾಗಿ ಅನೇಕರು ಮಾತನಾಡುತ್ತಿದ್ದಾರೆ. ಕೊನೆಗೂ ಪ್ರೀತಿಗೆ ಮೋಸ ಮಾಡಿದರು ಎನ್ನುತ್ತಿದ್ದಾರೆ. ಹೀಗಾಗಿ ಇದು ಎಷ್ಟರ ಮಟ್ಟಿಗೆ ಸತ್ಯ ಅಂತ ಗೊತ್ತಿಲ್ಲಾ..? ಒಟ್ನಲ್ಲಿ ರಶ್ಮಿಕಾ ಮತ್ತೊಮ್ಮೆ ಟಾಕ್ ಆಫ್ ಟೌನ್ ಆಗಿರೋದು ಮಾತ್ರ ನಿಜ.

ಇನ್ನು ಈ ಸಿನಿಮ ತಮಿಳು, ತೆಲುಗು, ಕನ್ನಡ ಸೇರಿದಂತೆ ಒಟ್ಟು 4 ಭಾಷೆಗಳಲ್ಲಿ ತೆರೆಯ ಮೇಲೆ ಬರುತ್ತಿದೆ. ಭರತ್ ಕಾಮಾ ನಿದೇಶನದ ಈ ಚಿತ್ರದ ಟೀಸರ್ ಲಿಂಕ್ ಗಳನ್ನು ಸ್ವತಃ ರಶ್ಮಿಕಾ ಟ್ವೀಟ್ ಮೂಲಕ ಹಂಚಿಕೊಂಡಿದ್ದು “ಡಿಯರ್ ಕಾಮ್ರೆಡ್ ಟೀಸರ್ ಇದು, ಹೆಚ್ಚು ಬಯಸುವಿರಾ? ಶೀಘ್ರದಲ್ಲೇ ಬರಲಿದೆ!” ಎಂದು ಬರೆದುಕೊಂಡಿದ್ದಾರೆ.

ಕೂದಲಿಗೆ ಕತ್ತರಿ ಹಾಕಿದ ‘ಕಿರಿಕ್’ ರಶ್ಮಿಕಾ ಮಂದಣ್ಣ

#rashmikamandanna, #dearcombred, #balkaninews #rashmikamandanna, #raskhithshetty, #vijaydevarakonda

Tags