ಸುದ್ದಿಗಳು

‘ರಥಾವರ’ ಚಿತ್ರದಲ್ಲಿವೆ ಬೆಚ್ಚಿ ಬೀಳಿಸುವ ಅಸಲಿ ಸತ್ಯಗಳು..!!!

ರೋರಿಂಗ್ ಸ್ಟಾರ್ ಶ್ರೀಮುರುಳಿ ಖಾತೆಯಲ್ಲಿನ ಸೂಪರ್ ಹಿಟ್ ಸಿನಿಮಾಗಳಲ್ಲಿ ‘ರಥಾವರ’ ಕೂಡಾ ಒಂದು. ಈ ಚಿತ್ರವನ್ನು ನೋಡಿದ ಕೂಡಲೇ ಅರೇ.. ವ್ಹಾವ್.. ಎಂದು ಅಚ್ಚರಿ ಪಡುವವರೇ ಹೆಚ್ಚು.

ಮಂಗಳ ಮುಖಿಯವರ ಜೀವನದ ಕುರಿತಂತೆ ಸಾಮಾನ್ಯವಾಗಿ ಯಾರೂ ಸಿನಿಮಾ ಮಾಡಲು ಮುಂದಾಗುವುದಿಲ್ಲ. ಆದರೆ. ‘ರಥಾವರ’ ಚಿತ್ರವು ಮಂಗಳಮುಖಿಯರ ಕಥೆಯನ್ನು ಅದರಲ್ಲೂ ಅವರ ಜೀವನದ ಕುರಿತಂತೆ ವಿವರವಾಗಿ ತೋರಿಸುತ್ತದೆ.

ಅಂದಹಾಗೆ ಈ ಚಿತ್ರದ ಕುರಿತಂತೆ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಹೇಗೆಲ್ಲಾ ತಯಾರಿ ಮಾಡಿಕೊಂಡರು, ಹಾಗೆಯೇ ಎಷ್ಟೆಲ್ಲಾ ಕಷ್ಟಪಟ್ಟರು ಎಂಬುದನ್ನು ತಿಳಿಸಿದ್ದಾರೆ. ಅಚ್ಚರಿಯೆಂದರೆ, ಈ ಸಿನಿಮಾ ಯಾರಿಗೋ ಮಾಡಬೇಕಾಗಿದ್ದು, ಕೊನೆಗೆ ಶ್ರೀಮುರುಳಿ ಪಾಲಾಯಿತು.

ಈ ಸಿನಿಮಾವನ್ನು ಶ್ರೀಮುರುಳಿ ಒಪ್ಪಿಕೊಂಡಿದ್ದರ ಹಿಂದೆಯೂ ಅಚ್ಚರಿಯಿದೆ. ಏಕೆಂದರೆ, ಅವರು ‘ಉಗ್ರಂ’ ಎಂಬ ಬ್ಲಾಕ್ ಬ್ಲಸ್ಟರ್ ಹಿಟ್ ಸಿನಿಮಾ ಕೊಟ್ಟಿದ್ದರು. ಆ ಚಿತ್ರದ ಬಳಿಕ ಅವರು ಏನಿಲ್ಲವೆಂದರೂ 60 ರಿಂದ 70 ಕಥೆಗಳನ್ನು ಕೇಳಿದ್ದರು. ಅವುಗಳಲ್ಲಿ ಅವರಿಗೆ ಇಷ್ಟವಾಗಿದ್ದು ‘ರಥಾವರ’ನ ಕಥೆ.

‘ಆನೆಪಟಾಕಿ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದ ಚಂದ್ರಶೇಖರ್ ಬಂಡಿಯಪ್ಪ ಖಾತೆಗೆ ಮೊದಲ ಹಿಟ್ ನೀಡಿದ್ದು ‘ರಥಾವರ’.. ಈ ಚಿತ್ರದ ಕಥೆಯನ್ನು ಶ್ರೀ ಮುರುಳಿ ಒಪ್ಪಿಕೊಂಡಿದ್ದೇ ಒಂದು ಅಚ್ಚರಿಯ ಜೊತೆಗೆ, ಜೊತೆಗೆ ಯಾರೋ ಮಾಡಬೇಕಿದ್ದ ಮಂಗಳಮುಖಿಯ ಪಾತ್ರವನ್ನು ‘ಭಜರಂಗಿ’ ಲೋಕಿ ಮಾಡಬೇಕಾಯಿತು. ಈ ಎಲ್ಲಾ ಅಸಲಿ ಸತ್ಯಗಳನ್ನು ನಿರ್ದೇಶಕರು ಬಿಚ್ಚಿಟ್ಟಿದ್ದಾರೆ.

ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಎಂ.ಡಿ ಪಲ್ಲವಿ

#rathavara #movie #preparation #news #balkaninews #kannadafilm, #kannadamovie, #kannadanews, #kannadanewmovie, #kannadacine, #latestkannadamovie, #sandalwoodmovies  ‍#kannadasuddigalu #chandrashekharbandiyappa, #rachitharam, #srimuruli

Tags