ಸುದ್ದಿಗಳು

ಡಾ. ಶಿವಣ‍್ಣ ಬಿಡುಗಡೆ ಮಾಡಿದ ‘‘ರತ್ನಮಂಜರಿ’’ ಲಿರಿಕಲ್ ಹಾಡು

ಎನ್ ಆರ್ ಐ ಕನ್ನಡಿಗರು ಸೇರಿ ನಿರ್ಮಿಸುತ್ತಿರುವ ಸಿನಿಮಾ

ಬೆಂಗಳೂರು, ನ.21: ರಾಜ್ ಚರಣ್ ಮತ್ತು ಅಖಿಲಾ ಪ್ರಕಾಶ್ ತಾರಾಗಣದ ‘ರತ್ನಮಂಜರಿ’ ಚಿತ್ರದ ಮೋಷನ್ ಪೋಸ್ಟರ್ ಗೆ ಯೂಟ್ಯೂಬ್ ನಲ್ಲಿ ಒಳ್ಳೆಯ ಪ್ರತ್ರಿಕ್ರಿಯೆ ವ್ಯಕ್ತವಾಗಿತ್ತು. ಈಗ ಚಿತ್ರದ ‘ಫ್ಯಾಶನ್’ ಸಾಂಗ್ ಬಿಡುಗಡೆಯಾಗಿದೆ.

ಡಾ. ಶಿವಣ್ಣರಿಂದ ಬಿಡುಗಡೆ

ಇಂದು ಬೆಳಿಗ್ಗೆ ‘ರತ್ನಮಂಜರಿ’ ಚಿತ್ರದ ‘ಫ್ಯಾಶನ್’ ಸಾಲಿನ ಲಿರಿಕಲ್ ವಿಡಿಯೋವನ್ನು ನಟ ಶಿವರಾಜ್ ಕುಮಾರ್ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಆನಂದ್ ಆಡಿಯೋ ಸಂಸ್ಥೆಯವರು ಈ ಹಾಡನ್ನು ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ.

“ಈ ಹಾಡನ್ನು ವಿಜಯ್ ಈಶ್ವರ್ ಬರೆದಿದ್ದು, ಸಂಜಿತ್ ಹೆಗ್ಡೆ ಧ್ವನಿಯಾಗಿದ್ದಾರೆ. ಈ ಚಿತ್ರವು ನೈಜ ಘಟನೆಯನ್ನು ಆಧರಿಸಿ ಮಾಡಲಾಗಿದೆ. ಈಗಾಗಲೇ ಅಪ್ಪು ಹಾಡಿದ ಹಾಡು ಹಿಟ್ ಆಗಿದೆ. ಚಿತ್ರದ ಇಡೀ ತಂಡಕ್ಕೆ ಶುಭವಾಗಲಿ” ಎಂದು ಶಿವಣ‍್ಣ ಮಾತನಾಡಿದ್ದಾರೆ.

ಚಿತ್ರದ ಬಗ್ಗೆ

ಇದೊಂದು ಮರ್ಡರ್ ಮಿಸ್ಟ್ರಿ ಕಥೆಯನ್ನು ಒಳಗೊಂಡಿದ್ದು, ನಾರ್ವೆಯಲ್ಲಿ ನೆಲೆಸಿರುವ ಕನ್ನಡಿಗ ಪ್ರಸಿದ್ಧ್ ಚೊಚ್ಚಲ ಬಾರಿಗೆ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಮೊದಲಾರ್ಧ ಯುಎಸ್ ನಲ್ಲಿ, ಧ್ವಿತಿಯಾರ್ಧ ಕೂರ್ಗ್ ನಲ್ಲಿ ನಡೆಯುತ್ತದೆ. ಹರ್ಷವರ್ಧನ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಇನ್ನು ಶರಾವತಿ ಫಿಲಂಸ್ ಬ್ಯಾನರ್ ಅಡಿ ಎನ್.ಆರ್.ಐಗಳೇ ಕೂಡಿಕೊಂಡು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನು ನಮ್ಮ ಕನ್ನಡದ ಮೇಲಿನ ಪ್ರೇಮದಿಂದಲೇ ‘ರತ್ನಮಂಜರಿ’ ಎಂಬ ಚಿತ್ರವನ್ನು ನಿರ್ಮಿಸಿರುವ ಇವರುಗಳ ಈ ಪ್ರಯತ್ನವನ್ನು ಪ್ರೇಕ್ಷಕರು ಮೆಚ್ಚಿಕೊಂಡು ಹರಸುವಂತಾಗಲಿ.

Tags

Related Articles