ಸುದ್ದಿಗಳು

ಮಳೆಯಲ್ಲಿ ನೆನೆಯುತ್ತಾ ಹಾಡಿಗೆ ನೃತ್ಯ ಮಾಡಿದ ಅಖಿಲಾ ಪ್ರಕಾಶ್

18 ಟೂ 20 ಮತ್ತು ಓಳ ಮುನ್ಸಾಮಿ ಚಿತ್ರಗಳಲ್ಲಿ ನಟಿಸಿದ ನಟಿ ಅಖಿಲಾ ಪ್ರಕಾಶ್ ಇದೀಗ ‘ರತ್ನಮಂಜರಿ’ ಚಿತ್ರದಲ್ಲಿ ನಟಿಸುತ್ತಿದ್ದು, ಇತ್ತಿಚೆಗೆ ಈ ಚಿತ್ರದ ಹಾಡಿಗಾಗಿ ಮಳೆಯಲ್ಲಿ ನೆನೆದು ಕುಣಿದಿದ್ದಾರೆ.

ಬೆಂಗಳೂರು, ಅ. 03: ದಿವಂಗತ ನರಸಿಂಹರಾಜು ಅವರ ನಟನೆಯಲ್ಲಿ ಈ ಹಿಂದೆ ‘ರತ್ನಮಂಜರಿ’ ಎನ್ನುವ ಸಿನಿಮಾ ಬಂದಿತ್ತು. ಇದೀಗ ಅದೇ ಹೆಸರಿನಲ್ಲೊಂದು ಚಿತ್ರ ಬರುತ್ತಿದೆ. ಪ್ರಸಿದ್ ಎಂಬುವವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಇದೀಗ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಮಳೆಯಲ್ಲಿ ಮಿಂದೆದ್ದ ಅಖಿಲಾ ಪ್ರಕಾಶ್

18 ಟೂ 20 ಮತ್ತು ಓಳ ಮುನ್ಸಾಮಿ ಚಿತ್ರಗಳಲ್ಲಿ ನಟಿಸಿದ್ದ ನಟಿ ಅಖಿಲಾ ಪ್ರಕಾಶ್ ಈ ಚಿತ್ರದಲ್ಲೂ ನಟಿಸಿದ್ದಾರೆ. ಇತ್ತಿಚೆಗೆ ನಾಯಕ ರಾಜ್ ಚರಣ್ ಹಾಗೂ ನಾಯಕಿ ಅಖಿಲಾ ಅವರನ್ನು ಒಳಗೊಂಡ ಚಿತ್ರದ ಪ್ರೇಮಮಯ ಹಾಡನ್ನು ಮಳೆಯಲ್ಲಿ ಚಿತ್ರೀಕರಿಸಲಾಗಿದೆ.

ದಿವಂಗತ ನಟ ಕಾಶೀನಾಥ್ ಅವರ ಅಭಿನಯದ ಕೊನೆಯ ಚಿತ್ರ ‘ಓಳ ಮುನ್ಸಾಮಿ’ ಯಲ್ಲಿ ನಟಿಸಿದ್ದ ಅಕಿಲಾ ಅವರು “’ಓಳ್ ಮುನ್ಸಾಮಿ’ ಚಿತ್ರದಲ್ಲಿ ನಟಿಸಿ, ಬಹಳಷ್ಟು ಅನುಭವವನ್ನು ಕಲಿತೆ. ಈಗ ನಟಿಸುತ್ತಿರುವ ರತ್ಮಮಂಜರಿಯಲ್ಲಿ ನನಗೆ ವಿಶೇಷ ರೀತಿಯ ಪಾತ್ರವಿದೆ” ಎನ್ನುತ್ತಾರೆ.

ವಿಭಿನ್ನ ಕಥಾಹಂದರದ ‘ರತ್ನ ಮಂಜರಿ’

ಅಮೇರಿಕಾದಲ್ಲಿ ಭಾರತೀಯರೊಬ್ಬರು ಕೊಲೆಯಾಗಿದ್ದರು. ಅದರ ಒಂದು ಏಳೆಯ ಸತ್ಯ ಘಟನೆಯನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ‘ರತ್ನ ಮಂಜರಿ’ ಚಿತ್ರವನ್ನು ಮಾಡಲಾಗುತ್ತಿದೆ. ಈಗಾಗಲೇ ಮಡಿಕೇರಿಯಲ್ಲಿ ಕೆಲವು ಭಾಗಗಳ ಚಿತ್ರೀಕರಣ ಮಾಡಲಾಗಿದೆ. ಚಿತ್ರದ ಮೊದಲರ್ಧ ಅಮೇರಿಕಾದಲ್ಲಿ ನಡೆಯಲಿದೆ. ದ್ವಿತಿಯಾರ್ಧ ಮಡಿಕೇರಿಯಲ್ಲಿ ನಡೆಯುತ್ತದೆ.  ಇನ್ನು ಈ ಚಿತ್ರವನ್ನು ಶರಾವತಿ ಫಿಲಂಸ್ ಬ್ಯಾನರ್ ನ ಅಡಿ ಎನ್.ಆರ್.ಐ ಗಳೇ ಕೂಡಿಕೊಂಡು ನಿರ್ಮಿಸುತ್ತಿದ್ದಾರೆ.

 

@ sunil Javali

Tags