ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುವ ‘ರತ್ನಮಂಜರಿ’

ಬೆಂಗಳೂರು.ಮೇ.18:ರತ್ನಮಂಜರಿ’.. ಇದು ಎನ್.ಆರ್.ಐ ಕನ್ನಡಿಗರ ಪ್ರಾಮಾಣಿಕ ಪ್ರಯತ್ನ.. ಎಂಬ ಹೇಳಿಕೆಯೊಂದಿಗೆ ತೆರೆಗೆ ಬಂದ ಈ ಚಿತ್ರಕ್ಕೆ ಪ್ರೇಕ್ಷಕರು ಪುಲ್ ಮಾರ್ಕ್ಸ್ ನೀಡಿದ್ದಾರೆ. ಚಿತ್ರವು ಸಹ ಅಷ್ಟೇ, ಪ್ರತಿಯೊಂದು ದೃಶ್ಯಗಳು ಥ್ರಿಲ್ಲರ್ ಅನುಭವವನ್ನು ನೀಡುತ್ತವೆ.

ಅಂದ ಹಾಗೆ ಈ ಸಿನಿಮಾ ಇಷ್ಟವಾಗುವುದಕ್ಕೆ ಮುಖ್ಯ ಕಾರಣ ಥ್ರಿಲ್ಲಿಂಗ್ ಕಥೆ. ಅಮೇರಿಕಾದಿಂದ ಆರಂಭಗೊಳ್ಳುವ ಕಥೆ ಕ್ರಮೇಣ ಭಾರತದತ್ತ, ಅದರಲ್ಲೂ ಕರ್ನಾಟಕದ ಕೊಡಗು, ಕೂರ್ಗ್ ನತ್ತ ಸಾಗುತ್ತದೆ. ಈ ಹಂತವು ಥ್ರಿಲ್ಲಿಂಗ್ ಅಂಶಗಳನ್ನು ಒಳಗೊಂಡಿದ್ದು, ನವ ನಿರ್ದೇಶಕರಾದ ಪ್ರಸಿದ್ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಹೇಳಬಹುದು.

Image result for kannada new ratnamanjari

ಚಿತ್ರದ ನಾಯಕ ಸಿದ್ಧಾರ್ಥ್(ರಾಜ್ ಚರಣ್) ಹಾಗೂ ನಾಯಕಿ ಗೌರಿ (ಅಖಿಲಾ ಪ್ರಕಾಶ್) ಇಬ್ಬರೂ ಎನ್.ಆರ್.ಐ ಕನ್ನಡಿಗರು. ಅಮೇರಿಕಾದಲ್ಲಿ ಒಂದೊಳ್ಳೆ ಉದ್ಯೋಗ ಗಿಟ್ಟಿಸಿ, ಸುಖಿ ಜೀವನ ನಡೆಸುತ್ತಿರುತ್ತಾರೆ. ಮದುವೆ ನಂತರ ಇಬ್ಬರೂ ಹೊಸ ಮನೆ ಖರೀದಿಸುತ್ತಾರೆ.

ಈ ದಂಪತಿಗಳ ಮನೆ ಪಕ್ಕದಲ್ಲಿಯೇ ಕೊಡಗು ಮೂಲದ ದಂಪತಿಯೂ ವಾಸವಾಗಿರುತ್ತಾರೆ. ಆದರೆ ಅದೊಂದು ದಿನ ಆ ದಂಪತಿ ಕೊಲೆಯಾಗಿ ಬಿಡುತ್ತಾರೆ. ಸಸ್ಯಶಾಸ್ತ್ರಜ್ಞನಾಗಿರುವ ನಾಯಕ ಸಿದ್ದಾರ್ಥ್ ಈ ಕೊಲೆಯ ಹಿಂದೆ ಬಿದ್ದು, ನಂತರ ಕೊಡಗಿಗೆ ಬಂದಿಳಿಯುತ್ತಾನೆ. ಇಲ್ಲಿಂದ ಚಿತ್ರಕ್ಕೊಂದು ವೇಗ, ತಿರುವು ಆರಂಭವಾಗುತ್ತದೆ.

ಆ ದಂಪತಿಗಳ ಕೊಲೆಯ ಹಿಂದೆ ಯಾರಿದ್ದಾರೆ ಎಂದು ಸಿದ್ದಾರ್ಥ್ ಹುಡುಕುವ ರೀತಿ, ವಿಧಾನ, ಹಾಗೂ ದೃಶ್ಯಗಳು ಥ್ರಿಲ್ಲಿಂಗ್ ಅನುಭವವನ್ನು ನೀಡುತ್ತವೆ. ಹಾಗಾದರೆ, ಚಿತ್ರದಲ್ಲಿ ಯಾರು ನಿಜವಾದ ರತ್ನಮಂಜರಿ..? ಹಾಗೂ ಕೊಲೆಗಾರ..? ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಗುತ್ತವೆ. ಅವುಗಳನ್ನು ನೀವು ತೆರೆಯ ಮೇಲೆ ನೋಡಿದರೇನೆ ಚಂದ.

ಚಿತ್ರದಲ್ಲಿ ನಟಿಸಿರುವ ರಾಜ್ ಚರಣ್, ಅಖಿಲಾ ಪ್ರಕಾಶ್, ಪಲ್ಲವಿ ರಾಜು, ಕನ್ನಿಕಾ, ರಾಜು ವೈವಿಧ್ಯ ಸೇರಿದಂತೆ ಅನೇಕರು ಗಮನ ಸೆಳೆಯುತ್ತಾರೆ. ಉಳಿದಂತೆ ಹರ್ಷವರ್ಧನ್ ಸಂಗೀತದಲ್ಲಿ ಮಾಧುರ್ಯವಿದ್ದು, ಪ್ರೀತಮ್ ತೆಗ್ಗಿನಮನೆ ಕ್ಯಾಮೆರಾದಲ್ಲಿ ಕೊಡಗಿನ ಪರಿಸರ ಸೊಗಸಾಗಿ ಮೂಡಿ ಬಂದಿದೆ.

ವಿದೇಶದ ಕಾರ್ಪೋರೇಟ್ ಜಗತ್ತಿನಲ್ಲಿ ಸುತ್ತಾಡಿಸಿ ಕೊಡಗಿನ ನಿಗೂಢದಲ್ಲಿ ಕಥೆ ಸಾಗುವ ಈ ಚಿತ್ರ ಪ್ರತಿ ವರ್ಗದ ಪ್ರೇಕ್ಷಕರಿಗೂ ಮಜವಾದ ಅನುಭವ ನೀಡುವಂತೆ ಮೂಡಿ ಬಂದಿದೆ. ನಾರ್ಮಲ್ ಪ್ರೇಮಮಯ ಕಥೆಗಳನ್ನು ನೋಡಿ ಬೇಸರಗೊಂಡವರು, ಈ ಚಿತ್ರವನ್ನು ನೋಡಿ ಎಂಜಾಯ್ ಮಾಡಬಹುದು.

ಇಂದು ಪುಟ್ಟಣ್ಣ ಕಣಗಾಲ್ ಸಂಗೀತ ಸಂಜೆ

#rathnamanjri, #review, #balkaninews #filmnews, #kannadasuddigalu,

Tags