ಸುದ್ದಿಗಳು

ತೈ ತೈ, ಕುಣಿಯುತ್ತೆ ನಿರ್ದೇಶಕ ಸಾಕಿದ ಹಂದಿಮರಿ!!

ನಿಲ್ಲು ಅಂದರೆ ನಿಲ್ಲುತ್ತೆ ನೀವು ಕೂರು ಅಂದ್ರೆ ಕೂರುತ್ತೆ ಈ ಹಂದಿ ಮರಿ!!

ಹೈದರಾಬಾದ್,ಸೆ.09: ಹಂದಿ ಮರಿ ಅಂದರೆ ಕೆಲವರಿಗೆ ಅದೇನೋ ಒಂಥರಾ ಅಸಹ್ಯ. ಆದರೆ ಇಲ್ಲೊಂದು ಹಂದಿ ಮರಿ ಇದೆ .. ಈ ಹಂದಿಮರಿಗೆ ಏನೇ ಹೇಳಿ ಅದು ಹೇಳಿದ ಹಾಗೆ ಕೇಳುತ್ತೆ, ಕುಣಿ ಅಂದ್ರೆ ಕುಣಿಯುತ್ತೆ, ನಿಲ್ಲು ಅಂದರೆ ನಿಲ್ಲುತ್ತೆ ನೀವು ಕೂರು ಅಂದ್ರೆ ಕೂರುತ್ತೆ, ಈ ಹಂದಿ ಮರಿಗೆ ಯಾರಪ್ಪಾ ಇಷ್ಟು ಒಳ್ಳೆ ಬುದ್ದಿ ಹೇಳಿ ಕೊಟ್ಟರು ಅಂತ ಅಂದುಕೊಂಡಿರಾ? ಈ ಹಂದಿ ಸಾಕಿದ್ದು ಒಬ್ಬ ನಿರ್ದೇಶಕ..

ಹಂದಿಗೂ ಒಂದು ಸಿನಿಮಾ      

ಅಂದಹಾಗೆ ನಾವು ಹೇಳ ಹೊರಟಿರುವುದು ‘ಅಧುಗೋ‘ ಸಿನಿಮಾ ಬಗ್ಗೆ. ಈ ಸಿನಿಮಾದಲ್ಲಿ ಹಂದಿಮರಿಯೇ ಮುಖ್ಯಪಾತ್ರ ​ ಎನ್ನಲಾಗಿದೆ. ಇದರ ಹೆಸರು ಬಂಟಿ. ನಟನೆಯಿಂದ ನಿರ್ದೇಶನಕ್ಕೆ ಇಳಿದಿರುವ ನಿರ್ದೇಶಕ ರವಿಬಾಬು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಸಿನಿಮಾ ಟೀಸರ್ ಬಿಡುಗಡೆಯಾಗಿದ್ದು, 3 ಡಿ ಅನಿಮೇಶನ್ ಸಹಾಯದಿಂದ ಈ ಟೀಸರ್ ತಯಾರಿಸಲಾಗಿದೆ. ತೆಲುಗಿನಲ್ಲಿ ‘ಈಗ‘ ಬಳಿಕ ‘ಅಧುಗೋ‘ ಬಹುನಿರೀಕ್ಷಿತ ಚಿತ್ರ ಎನ್ನಲಾಗುತ್ತಿದೆ.

ಸುಮಾರು 150 ಹಂದಿಮರಿ

ಸಿನಿಮಾದಲ್ಲಿ ಸುಮಾರು 150 ಹಂದಿಮರಿಗಳನ್ನು ಬಳಸಿಕೊಳ್ಳಲಾಗಿದೆ ಎಂದು ರವಿಬಾಬು ಹೇಳಿದ್ದಾರೆ. ಸುರೇಶ್​​​​ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಸುರೇಶ್ ಬಾಬು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ನೋಟು ಅಮಾನ್ಯೀಕರಣದ ವೇಳೆ ಎಟಿಎಂನಲ್ಲಿ ಹಣಕ್ಕಾಗಿ ಜನರು ಕ್ಯೂ ನಿಲ್ಲುತ್ತಿದ್ದಾಗ ರವಿಬಾಬು ಕೂಡಾ ಕ್ಯೂನಲ್ಲಿ ಹಂದಿಮರಿಯೊಂದಿಗೆ ನಿಂತು ಎಲ್ಲರ ಗಮನ ಸೆಳೆದಿದ್ದರು.

Tags