ಸುದ್ದಿಗಳು

ಶಂಕರ್ ನಾಗ್, ಹಿ ವಾಸ್ ಲೆಜೆಂಡ್, ನನಗೆ ಧೈರ್ಯ ತುಂಬಿದವರು: ಕ್ರೇಜಿಸ್ಟಾರ್ ವಿ. ರವಿಚಂದ್ರನ್

ಗೊತ್ತಿರುವವರೇ ಹತ್ತಿರ ಸುಳಿಯದಿದ್ದಾಗ ರವಿಚಂದ್ರನ್ ಗೆ ಧೈರ್ಯ ತುಂಬಿದವರು ಶಂಕರ್ ನಾಗ್

ಬೆಂಗಳೂರು.ಫೆ.26: ಶಂಕರ್ ನಾಗ್.. ಇವತ್ತಿಗೂ ಇವರನ್ನು ನೆನಪಿಸಿಕೊಳ್ಳದವರೇ ಇಲ್ಲ ಅಂತ ಹೇಳಬಹುದು. ಅವರೊಂದು ಸ್ಪೂರ್ತಿಯ ಚೆಲುಮೆ. ಅವರ ಹೆಸರು ಕೇಳಿದರೆ ಸಾಕು ವಿದ್ಯುತ್ ಸಂಚರಿಸಿದಂತಾಗುತ್ತದೆ. ಅವರು ಬದುಕಿರಬೇಕಿತ್ತು ಎಂದು ಎಲ್ಲರೂ ಹೇಳುತ್ತಾರೆ. ಇವರ ಬಗ್ಗೆ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಮಾತನಾಡಿದ್ದಾರೆ.

ನನಗೆ ಧೈರ್ಯ ತುಂಬಿದವರು

ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ‘ತಕದಿಮಿತ’ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ರವಿಚಂದ್ರನ್ ರವರು ದಿ.ಶಂಕರ್ ನಾಗ್ ಬಗ್ಗೆ ಮಾತನಾಡಿದ್ದಾರೆ. “ಶಂಕರ್ನಾಗ್ ಬಗ್ಗೆ ಮಾತನಾಡುವಾಗಲೆಲ್ಲಾ ನನ್ನ ಮೈಯೆಲ್ಲ ಜುಮ್ ಎನ್ನುತ್ತದೆ. ಆತ ಟೈಮ್ ಅನ್ನು ಚೇಸ್ ಮಾಡಿದ ವ್ಯಕ್ತಿ. ಅವರು ಆ ಥರ ಇದ್ರು. ಅವರನ್ನು ನೋಡಿ ಸಮಯ ಕೂಡ ಹೊಟ್ಟೆ ಉರಿದುಕೊಳ್ಳುತ್ತಿತ್ತು” ಎಂದಿದ್ದಾರೆ.

“ಒಂದು ದಿನ ನಾನೊಂದು ಸಮಸ್ಯೆಯಲ್ಲಿ ಸಿಲುಕಿದ್ದೆ. ಭಾಷೆ ಬಗ್ಗೆ ಮಾತನಾಡಿದ್ದೆ ಅಂತ ತುಂಬಾ ದೊಡ್ಡ ಗೊಂದಲ ಆಗಿತ್ತು. ನನಗೆ ಅದು ತುಂಬಾ ಡಿಸ್ಟರ್ಬಿಂಗ್ ಪೀರಿಯಡ್. ಎಲ್ಲೂ ಹೊರಗೆ ಹೋಗಲು ಆಗುತ್ತಿರಲಿಲ್ಲ. ಆ ತರಹ ಪರಿಸ್ಥಿತಿ ಉಂಟಾಗಿತ್ತು. ಆದರೆ ಸಮಸ್ಯೆ ಆದಾಗ ಪರಿಚಯದವರು ಕೂಡ ಹತ್ತಿರ ಬರಲ್ಲ. ಈ ಸಮಸ್ಯೆಯನ್ನು ಹೇಗಪ್ಪಾ ಬಗೆಹರಿಸುವುದು ಅಂತ ಯೋಚನೆಯಲ್ಲಿದೆ. ಆಗ ನಾನು ಮೈಸೂರಿನಲ್ಲಿ ಶೂಟಿಂಗ್ ನಲ್ಲಿದ್ದೆ. ಆಗ ಶಂಕರ್ ನಾಗ್ ನನ್ನನ್ನು ಹುಡುಕಿಕೊಂಡು ಬಂದು ಧೈರ್ಯ ತುಂಬಿದರು” ಎಂದು ಶಂಕರ್ ನಾಗ್ ಮನತುಂಬಿ ಮಾತನಾಡಿದ್ದಾರೆ ರವಿಚಂದ್ರನ್.

ಹೀಗೆ ಶಂಕರ್ ನಾಗ್ ಓರ್ವ ಚಿತ್ರ ನಟ ಹಾಗೂ ನಿರ್ದೇಶಕನಾಗಿ ಮಾತ್ರ ಅಲ್ಲದೇ ಸಮಾಜಕ್ಕೆ ಒಳಿತು ಮಾಡುವ ಹಲವಾರು ಯೋಜನೆಗಳನ್ನು ರೂಪಿಸಿದ್ದರು. ನಂದಿ ಹಿಲ್ಸ್ ಗೆ ಕೇಬಲ್ ಕಾರ್ ಕನೆಕ್ಷನ್ ಕೊಡಬೇಕು ಅಂತಿದ್ದರು. ಮೂವತ್ತು ಸಾವಿರದಲ್ಲಿ ಮನೆ ಕಟ್ಟುವ ಯೋಜನೆ ಮಾಡಿದ್ದರು, ಬೆಂಗಳೂರಿನ ಮೆಟ್ರೋ ಬಗ್ಗೆ ಕನಸ್ಸನ್ನು ಕಂಡಿದ್ದರು. ಹೀಗೆ ಶಂಕರ್ ನಾಗ್ ಅವರೊಂದಿಗಿನ ದಿನಗಳನ್ನು ರವಿಚಂದ್ರನ್ ಮೆಲುಕು ಹಾಕಿದ್ದಾರೆ.

ಬಾಡಿ ಶೇಮಿಂಗ್ ನಿಲ್ಲಿಸುವಂತೆ ಅಭಿಮಾನಿಗಳಿಗೆ ಅನುಷ್ಕಾ ಬೆಂಬಲಿಗರ ಮನವಿ

#ravichadran, #balkaninews #shankarnag, #filmnews, #kannadasuddigalu

Tags