ಸುದ್ದಿಗಳು

ಕ್ರೇಜಿಸ್ಟಾರ್ ರವಿಚಂದ್ರನ್ ಹೊಸ ಚಿತ್ರದಲ್ಲಿ ಕಿಚ್ಚ ಸುದೀಪ್ ಗೆಸ್ಟ್ ರೋಲ್…!!!

‘ಮಾಣಿಕ್ಯ’, ‘ಹೆಬ್ಬುಲಿ’ ಹಾಗೂ ‘ಅಪೂರ್ವ’ ಚಿತ್ರಗಳ ಬಳಿಕ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಕಿಚ್ಚ ಸುದೀಪ್ ಒಟ್ಟಿಗೆ ತೆರೆಮೇಲೆ ಬರ್ತಿದ್ದಾರೆ. ರವಿಚಂದ್ರನ್ ನಾಯಕರಾಗಿ ಮತ್ತು ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ‘ರವಿ ಬೋಪಣ್ಣ’ ಚಿತ್ರದಲ್ಲಿ ಸುದೀಪ್ ಗೆ ವಿಶೇಷ ಪಾತ್ರವಿದೆ. ಈಗಾಗಲೇ ಅವರ ಸ್ಪೆಷಲ್ ಎಂಟ್ರಿ ಕುರಿತು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

ಕೆಲವು ತಿಂಗಳ ಹಿಂದೆಯಷ್ಟೇ ರವಿಚಂದ್ರನ್ ರವರು ಸದ್ದಿಲ್ಲದೇ “ರವಿ’ ಎಂಬ ಹೆಸರಿನಲ್ಲಿ ಸಿನಿಮಾ ಶುರು ಮಾಡಿದ್ದರು. ಅದಕ್ಕಾಗಿ ಏಳು ದಿನಗಳ ಕಾಲ ಚಿತ್ರೀಕರಣ ಕೂಡಾ ಮಾಡಿದ್ದರು. ಆದರೆ, ಅದು ಅವರಿಗೆ ತೃಪ್ತಿಯಾಗಲಿಲ್ಲ. ಜೊತೆಗೆ ಅವರ ಗಡ್ಡದ ಗೆಟಪ್ ನೋಡಿದ ನಿರ್ಮಾಪಕರು, ‘ಈ ಗೆಟಪ್ ತುಂಬಾ ಚೆನ್ನಾಗಿದೆ. ಇದರಲ್ಲೇ ಮುಂದುವರೆಯುವ’ ಎಂಬ ಸಲಹೆ ಕೂಡಾ ಕೊಟ್ಟರಂತೆ. ಹಾಗಾಗಿ, ಈಗ “ರವಿ ಬೋಪಣ್ಣ’’ ಎಂಬ ಹೆಸರಿನೊಂದಿಗೆ ಹೊಸದಾಗಿ ಚಿತ್ರೀಕರಣ ಮಾಡಲು ಮುಂದಾಗಿದ್ದಾರೆ.

ಇದೊಂದು ಸೈಬರ್ ಕ್ರೈಮ್ ಸುತ್ತ ನಡೆಯುವ ಕಥೆಯಾಗಿದ್ದು, ರವಿಚಂದ್ರನ್ ಇಲ್ಲಿ ಸೈಬರ್ ಸೆಲ್ನ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ಕಾವ್ಯ ಶೆಟ್ಟಿ ನಟಿಸುತ್ತಿದ್ದಾರೆ.

ಅಂದಹಾಗೆ, ಇದು ಮಲಯಾಳಂ ಭಾಷೆಯ ಜೋಸೆಫ್ ಸಿನಿಮಾದ ರೀಮೇಕ್. ಈ ಚಿತ್ರದಲ್ಲಿ ಇಬ್ಬರು ನಾಯಕಿರಿದ್ದು, ಸದ್ಯಕ್ಕೆ ಕಾವ್ಯ ಶೆಟ್ಟಿ ಆಯ್ಕೆಯಾಗಿದ್ದಾರೆ. ಮತ್ತೊಬ್ಬ ನಾಯಕಿಗಾಗಿ ಹುಡುಕಾಟ ನಡೆಯುತ್ತಿದೆ. ಸರ್ಕಾರ್ ಅಜಿತ್ ಹಾಗೂ ಜಗದೀಶ್ ಈ ಚಿತ್ರದ ನಿರ್ಮಾಪಕರು. ನಿರ್ದೇಶಕ ಮೋಹನ್ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ.

‘ರಣರಂಗಂ’ ಚಿತ್ರದಲ್ಲಿ ಕಾಜಲ್ ಅಗರ್ವಾಲ್ ಪಾತ್ರ ರಿವೀಲ್

#ravichandranandsudeep  #ravibopannamovie #kannadafilm, #kannadamovie,

Tags