ಸುದ್ದಿಗಳು

ಪ್ರೇಮಲೋಕದ ರಣಧೀರನಿಗೆ ಇವತ್ತು ಡಬಲ್ ಸಂಭ್ರಮ

ಇಂದು ಪ್ರೇಮಿಗಳ ದಿನವೂ ಹೌದು, ರವಿಚಂದ್ರನ್ ವಿವಾಹ ವಾರ್ಷಿಕೋತ್ಸವದ ದಿನವೂ ಹೌದು

ಬೆಂಗಳೂರು.ಫೆ.14

‘ಸಿಂಪಲ್ ಆಗಿ ಒಂದು ಲವ್ ಸ್ಟೋರಿ’ ಚಿತ್ರದಲ್ಲೊಂದು ಡೈಲಾಗ್ ಇದೆ. ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ ಎಂದವರು ಲವ್ ಮ್ಯಾರೇಜ್ ಆದ್ರು, ಅದೇ ಪ್ರೀತಿ ಪ್ರೇಮದ ಬಗ್ಗೆ ಮಾತನಾಡುತ್ತಿದ್ದ ರವಿಚಂದ್ರನ್ ಅರೆಂಜ್ ಮ್ಯಾರೇಜ್ ಆದ್ರು ಅಂತ..!!!

ಯೆಸ್, ಹೌದು, ಈ ಡೈಲಾಗ್ ಗಳನ್ನು ನೆನಪಿಸಿಕೊಳ್ಳಲು ಕಾರಣವಿದೆ. ಇಂದು ಪ್ರೇಮಲೋಕದ ರಣಧೀರ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅಭಿಮಾನಿಗಳಿಗೆ ಡಬಲ್ ಸಂಭ್ರಮ. ಯಾಕೆಂದರೆ, ಇಂದು ಪ್ರೇಮಿಗಳ ದಿನ ಹಾಗೆಯೇ ರವಿಚಂದ್ರನ್ ದಂಪತಿಗಳಿಗೆ ವಿವಾಹ ವಾರ್ಷಿಕೋತ್ಸವದ ದಿನವೂ ಹೌದು.

ವಿವಾಹ ವಾರ್ಷಿಕೋತ್ಸವ

1986 ಫೆಬ್ರವರಿ 14 ರಂದು ರವಿಚಂದ್ರನ್ ಹಾಗೂ ಸುಮತಿ ಅವರ ಮದುವೆ ನೆರವೇರಿತ್ತು. ಇದೀಗ 31 ವರ್ಷಗಳು ಯಶಸ್ವಿಯಾಗಿ, ಸಂತೋಷವಾಗಿ ಜೀವನ ಇವರಿಬ್ಬರು ನಡಸಿದ್ದಾರೆ. ಈ ದಂಪತಿಗಳಿಗೆ ವಿಕ್ರಂ, ಮನೋರಂಜನ್ ಮತ್ತು ಗೀತಾಂಜಲಿ ಮೂವರು ಮಕ್ಕಳಿದ್ದಾರೆ.

ಸಿನಿಮಾಗಳು

ರವಿಚಂದ್ರನ್ ಬರೀ ನಟರಾಗಿಲ್ಲಾ, ನಿರ್ದೇಶಕರಾಗಿ, ನಿರ್ಮಾಪಕರಾಗಿ, ಸಂಕಲನಕಾರರಾಗಿ, ಸಂಗೀತ ಸಂಯೋಜಕರಾಗಿ.. ಹೀಗೆ ಒಂದು ಸಿನಿಮಾದ ಛಾಯಾಗ್ರಹಣದ ಕೆಲಸವನ್ನು ಹೊರತು ಪಡಿಸಿ ಮಿಕ್ಕೆಲ್ಲಾ ಕೆಲಸಗಳನ್ನು ಒಬ್ಬರೇ ನಿರ್ವಹಿಸುವ ಒನ್ ಮ್ಯಾನ್ ಆರ್ಮಿ..

ಅವರು ನಿರ್ದೇಶನ ಮಾಡುವ ಚಿತ್ರಗಳಿಗಾಗಿ ಸಿನಿಪ್ರೇಮಿಗಳು ಸಾಕಷ್ಟು ಕುತೂಹಲದಿಂದ ಕಾಯುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ‘ಅಪೂರ್ವ’ ಸಿನಿಮಾವನ್ನು ನಟನೆಯೊಂದಿಗೆ ನಿರ್ದೇಶನ ಮಾಡಿರುವ ಅವರು , ಸದ್ಯ ನಟರಾಗಿ ಹಾಗೂ ಪೋಷಕ ನಟರಾಗಿಯೂ ನಟಿಸುತ್ತಿದ್ದಾರೆ.

ಇನ್ನು ಅವರ ನಿರ್ದೇಶನದ ‘ರಾಜೇಂದ್ರ ಪೊನ್ನಪ್ಪ’ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸುತ್ತಿದೆ. ಖಂಡಿತಾ ಇದೊಂದು ‘ಮಲ್ಲ’ನಾಗುವ ಸೂಚನೆ ಸಿಕ್ಕಿದ್ದು, ಅವರಿಗೆ ಜೋಡಿಯಾಗಿ ರಾಧಿಕಾ ಕುಮಾರಸ್ವಾಮಿ ನಟಿಸಿದ್ದಾರೆ.

ಇನ್ನು ರವಿಚಂದ್ರನ್-ಸುಮತಿ ದಂಪತಿಗಳ ವಿವಾಹ ವಾರ್ಷಿಕೋತ್ಸವದ ಈ ದಿನದಂದು ಚಿತ್ರರಂಗದ ಅನೇಕರು ಶುಭಾಶಯಗಳನ್ನು ತಿಳಿಸಿದ್ದಾರೆ. ಒಟ್ಟಿನಲ್ಲಿ, ಸತತ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ರವಿಚಂದ್ರನ್ ದಂಪತಿಗಳಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು.

ಜೂನ್ 5ರಂದು ‘ಹ್ಯಾಂಡ್ ಮೇಡ್ ಟೇಲ್’ ಸೀಸನ್ ಮೂರರ ಪ್ರದರ್ಶನ

#ravichandran, #balkaninews #kannadasuddigalu, #filmnews, #sumathi, #loversday

Tags