ಸುದ್ದಿಗಳು

ಎರಡು ವಿಭಿನ್ನ ಗೆಟಪ್ ನಲ್ಲಿ ಕಮಾಲ್ ಮಾಡಲು ಬಂದ ಕ್ರೇಜಿಸ್ಟಾರ್…!!!

ನಟ ಕ್ರೇಜಿಸ್ಟಾರ್ ರವಿಚಂದ್ರನ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬರೀ ಪೋಷಕ ಪಾತ್ರ ಮಾತ್ರವಲ್ಲದೇ ನಾಯಕನಟರಾಗಿಯೂ ಮಿಂಚಲು ರೆಡಿಯಾಗುತ್ತಿದ್ದಾರೆ. ಈ ವರ್ಷ ‘ಪಡ್ಡೆಹುಲಿ’, ‘ದಶರಥ’, ‘ಕುರುಕ್ಷೇತ್ರ’ ಮಾತ್ರವಲ್ಲದೇ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಅವರು ಇತ್ತಿಚೆಗೆ ‘ರವಿ ಬೋಪಣ್ಣ’ ಸಿನಿಮಾ ಅನೌನ್ಸ್ ಮಾಡಿದ್ದರು, ಇದೀಗ ‘ಆ ದೃಶ್ಯ’ದ ಮತ್ತೆ ಕಮಾಲ್ ಮಾಡಲು ಸಿದ್ದಗೊಂಡಿದ್ದಾರೆ.

ರೋಚಕ ಕಥೆಯ ‘ಆ ದೃಶ್ಯ’

2014 ರಲ್ಲಿ ಪಿ. ವಾಸು ನಿರ್ದೇಶನದಲ್ಲಿ ಮೂಡಿ ಬಂದಿದ್ದ ‘ದೃಶ್ಯ’ ಚಿತ್ರವು ಭರ್ಜರಿ ಯಶಸ್ಸನ್ನು ಗಳಿಸಿತ್ತು. ಸಸ್ಪೆನ್ಸ್ ಕಮ್ ಥ್ರಿಲ್ಲರ್ ಕಥಾಹಂದರವಿದ್ದ ಈ ಚಿತ್ರವು ಪ್ರೇಕ್ಷಕರಿಗೆ ಬಹಳ ಇಷ್ಟವಾಗಿತ್ತು. ಇದೀಗ ಅದೇ ಮಾದರಿಯಲ್ಲಿ ‘ಆ ದೃಶ್ಯ’ ಹೆಸರಿನ ಸಿನಿಮಾವೊಂದು ತೆರೆ ಕಾಣಲು ಸಿದ್ದವಾಗಿದೆ.

ವಿಶೇಷವೆಂದರೆ, ಈ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದ್ದು, ನೋಡುಗರಿಂದ ಬಾರೀ ಮೆಚ್ಚುಗೆ ಪಡೆಯುತ್ತಿದೆ. ಇಲ್ಲಿ ಕೊಲೆಯ ರಹಸ್ಯವನ್ನು ಭೇದಿಸುವ ಕ್ರೈಂ ಅಧಿಕಾರಿಯಾಗಿ ರವಿಚಂದ್ರನ್ ನಟಿಸಿದ್ದು, ಚಿತ್ರದಲ್ಲಿ ಜಯರಾಮ್ ಕಾರ್ತಿಕ್, ಅಚ್ಚುತ್ ಕುಮಾರ್, ರಮೇಶ್ ಭಟ್ ಸೇರಿದಂತೆ ಅನೇಕರು ನಟಿಸಿದ್ದಾರೆ.

ಅಂದಹಾಗೆ ರವಿಚಂದ್ರನ್ ಎರಡು ವಿಭಿನ್ನ ಪಾತ್ರದಲ್ಲಿ ಅಂದರೆ, 30 ವರ್ಷದ ಯುವಕ ಹಾಗೂ 50 ವರ್ಷದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ತಮಿಳಿನ ಡಿ-16(ದ್ರುವಂಗಲ್ ಪಡಿನಾರು)ವಿನಿಂದ ಪ್ರೇರಣೆಗೊಂಡಿದೆ. ಈ ಚಿತ್ರವು ಸದ್ಯದಲ್ಲಿಯೇ ತೆರೆಗೆ ಬರಲಿದೆ.

ಸುದೀಪ್ ತಂಟೆಗೆ ಬಂದರೆ ನಾನು ಸುಮ್ಮನಿರಲ್ಲ: ಜಗ್ಗೇಶ್

#Ravichandran #Ravichandranmovies #aadrushya #kannadafilm, #kannadamovie,

Tags