ಸುದ್ದಿಗಳು

ಭಂಡನ ಮನೆಗೆ ಭೇಟಿ ನೀಡಿದ ರಣಧೀರ

ಬೆಂಗಳೂರು, ಏ.25:

ಕ್ರೇಜಿ ಸ್ಟಾರ್ ರವಿಚಂದ್ರನ್ ರವರ ಮನೆಯಲ್ಲಿ ಸಂತೋಷ ತುಂಬಿ ತುಳುಕಾಡುತ್ತಿದೆ. ಹೌದು, ಇದೇ 28 ಹಾಗೂ 29 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರವಿಚಂದ್ರನ್ ಪುತ್ರಿ ಗೀತಾಂಜಲಿ ವಿವಾಹ ನಡೆಯಿದೆ. ಈ ವಿಶೇಷ ದಿನದ ಸಲುವಾಗಿ ರವಿಚಂದ್ರನ್ ತಮ್ಮ ಗೆಳೆಯರು ಬಂಧು ಬಳಗದವರಿಗೆ ಆಮಂತ್ರಣ ಪತ್ರಿಕೆಯನ್ನು ನೀಡುತ್ತಿದ್ದಾರೆ. ರವಿಚಂದ್ರನ್ ತಮ್ಮ ಪುತ್ರನೊಂದಿಗೆ ಇಂದು ಜಗ್ಗೇಶ್ ರವರ ಮನೆಗೆ ಭೇಟಿ ನೀಡಿದ್ದಾರೆ.

ಹೌದು, ಇದಕ್ಕೆ ಸಾಕ್ಷಿ ಎಂಬಂತೆ ಜಗ್ಗೇಶ್ ಈ ಸಂತಸದ ಕ್ಷಣಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಏನಿದೆ ಈ ಪೋಸ್ಟ್ ನಲ್ಲಿ..?

ಣಧೀರ #ಭಂಡ ನನ್ನ ಗಂಡನ ಮನೆಗೆ  ಮಗಳ ಮದುವೆಯ ಮಮತೆಯ ಕರೆಯೋಲೆ ಗಾಗಿ ಬಂದಾಗ ಭಂಡನ ಮಡದಿ ಜೊತೆಯಾದಾಗ.. ರಣಧೀರನಿಗೆ ನನ್ನ ದೇವರಮನೆ ತೋರಿ ರಣಧೀರ ಭಂಡನಿಗೆ ಕಷ್ಟಕಾಲದಲ್ಲಿ ಕೊಟ್ಟ ಹಣದಿಂದ ಅಂದು ಕೊಂಡ ದೇವರವಿಗ್ರಹ ತೋರಿದಾಗ ಮೊಕವಿಸ್ಮಿತ ರಣಧೀರ.. ಹೆಮ್ಮೆಯಾಯಿತು ಸಂಬಳ ಪ್ರೀತಿ ಉತ್ಸಾಹ ನನ್ನಬದುಕಿಗೆ ಕೊಟ್ಟು ಭುಜತಟ್ಟಿದ ರಣಧೀರ ಮನೆಗೆ ಆತ್ಮೀಯವಾಗಿ ಬಂದಾಗ.. ಭವಿಷ್ಯ ನಾನು ರಣಧೀರ ಶಿವಣ್ಣ ಭಾವನಾತ್ಮಕವಾಗಿ ಬದುಕಿರುವ ಕಡೆಯ ತಲೆಮಾರು ಚಿತ್ರರಂಗಕ್ಕೆ ಅನ್ನಿಸಿತು ಮನ..! ಹತ್ತಿದ್ದ ಏಣಿನಾ ಒದಿಬ್ಯಾಡ..ನನ್ನ ಹಾಡಿನ ಸಾಲಿನಂತೆ ಬದುಕಿರುವೆ ಕೊನೆಯವರೆಗು.. ಶುಭಹಾರೈಸಿ ರಣಧೀರನ ಮಗಳಿಗೆ  ನೂರ್ಕಾಲ ಧೀರ್ಘಸುಮಂಗಲಿಯಾಗಿ ಬಾಳಿ ಎಂದು..
ಇಂತಿ ರಣಧೀರನ ಅನ್ನ ಉಂಡವ… ಎಂದು ಬರೆದಿದ್ದಾರೆ.

 

View this post on Instagram

 

#ರಣಧೀರ #ಭಂಡ ನನ್ನ ಗಂಡನ ಮನೆಗೆ ಮಗಳ ಮದುವೆಯ ಮಮತೆಯ ಕರೆಯೋಲೆ ಗಾಗಿ ಬಂದಾಗ ಭಂಡನ ಮಡದಿ ಜೊತೆಯಾದಾಗ.. ರಣಧೀರನಿಗೆ ನನ್ನ ದೇವರಮನೆ ತೋರಿ ರಣಧೀರ ಭಂಡನಿಗೆ ಕಷ್ಟಕಾಲದಲ್ಲಿ ಕೊಟ್ಟ ಹಣದಿಂದ ಅಂದು ಕೊಂಡ ದೇವರವಿಗ್ರಹ ತೋರಿದಾಗ ಮೊಕವಿಸ್ಮಿತ ರಣಧೀರ.. ಹೆಮ್ಮೆಯಾಯಿತು ಸಂಬಳ ಪ್ರೀತಿ ಉತ್ಸಾಹ ನನ್ನಬದುಕಿಗೆ ಕೊಟ್ಟು ಭುಜತಟ್ಟಿದ ರಣಧೀರ ಮನೆಗೆ ಆತ್ಮೀಯವಾಗಿ ಬಂದಾಗ.. ಭವಿಷ್ಯ ನಾನು ರಣಧೀರ ಶಿವಣ್ಣ ಭಾವನಾತ್ಮಕವಾಗಿ ಬದುಕಿರುವ ಕಡೆಯ ತಲೆಮಾರು ಚಿತ್ರರಂಗಕ್ಕೆ ಅನ್ನಿಸಿತು ಮನ..! ಹತ್ತಿದ್ದ ಏಣಿನಾ ಒದಿಬ್ಯಾಡ..ನನ್ನ ಹಾಡಿನ ಸಾಲಿನಂತೆ ಬದುಕಿರುವೆ ಕೊನೆಯವರೆಗು.. ಶುಭಹಾರೈಸಿ ರಣಧೀರನ ಮಗಳಿಗೆ ನೂರ್ಕಾಲ ಧೀರ್ಘಸುಮಂಗಲಿಯಾಗಿ ಬಾಳಿ ಎಂದು.. ಇಂತಿ ರಣಧೀರನ ಅನ್ನ ಉಂಡವ…

A post shared by Jaggesh Shivalingappa (@actor_jaggesh) on

ಹ್ಯಾಟ್ರಿಕ್ ಹೀರೋ ಎಂಟ್ರಿ!! ಆರ್ಸಿಬಿಗೆ ಹ್ಯಾಟ್ರಿಕ್ ಗೆಲುವು!!!

#balkaninews #jaggesh #ravichandran #jaggeshandravichandran #geetanjaliravichadnranwedding

Tags