ಸುದ್ದಿಗಳು

ಸ್ವಾತಂತ್ರ್ಯ ದಿನಾಚರಣೆಗೆ ‘ಪೊಗರು’

ಧ್ರುವ ಸರ್ಜಾ ನಟನೆಯ ನಾಲ್ಕನೆಯ ಸಿನಿಮಾ

ಬೆಂಗಳೂರು.ಮಾ.17: ಸದ್ಯ ಚಿತ್ರೀಕರಣ ಮುಗಿಯುವ ಹಂತದಲ್ಲಿರುವ ‘ಪೊಗರು’ ಚಿತ್ರವು ಇದೀಗ ಬಿಡುಗಡೆಗೆ ಸಿದ್ದವಾಗಿದ್ದು, ಡೇಟ್ ಫಿಕ್ಸ್ ಆಗಿದೆ. ಹೌದು, ಈ ಸಿನಿಮಾ ಸ್ವಾತಂತ್ರ್ಯ ದಿನಾಚರಣೆಗೆ ರಿಲೀಸ್ ಆಗುತ್ತಿದೆ.

ನಟ ಧೃವ ಸರ್ಜಾ ಅಭಿನಯದ ‘ಪೊಗರು’ ಸಿನಿಮಾವನ್ನು ಅಭಿಮಾನಿಗಳು ಕಾಯ್ತಾ ಇದ್ದಾರೆ. ಈಗಾಗಲೇ ಈ ಸಿನಿಮಾದ ಪೋಸ್ಟರ್ ಗಳು ಸಹ ಅಭಿಮಾನಿಗಳನ್ನು ನಿರೀಕ್ಷೆ ಮಾಡುವಂತೆ ಮಾಡಿವೆ. ಯಾವಾಗಪ್ಪಾ ಸಿನಿಮಾ ತೆರೆ ಕಾಣುತ್ತದೆ ಅಂತಾ ಕಾಯ್ತಾ ಇದ್ದ ಅಭಿಮಾನಿಗಳಿಗೆ ಸಿನಿಮಾ ತಂಡ ಖುಷಿಯ ವಿಚಾರವೊಂದನ್ನು ನೀಡಿದೆ.

ಅಬ್ಬರಿಸಲು ರೆಡಿಯಾದ ಪೊಗರು

ಹೌದು, ಕೆಲವೊಂದು ಕಾರಣಾಂತರಗಳಿಂದ ‘ಪೊಗರು’ ಸಿನಿಮಾ ಚಿತ್ರೀಕರಣ ತಡವಾಗಿತ್ತು. ಕಳೆದ 2 ವರ್ಷಗಳಿಂದಲೂ ‘ಪೊಗರು’ ಬಗ್ಗೆ ಮಾತು ಇದ್ದದ್ದೇ. ಅಷ್ಟೆ ಅಲ್ಲ ಈ ಸಿನಿಮಾದಲ್ಲಿ ನಟ ಧೃವ ಸರ್ಜಾ ಬಾಲಕನಾಗಿ ಕಾಣಿಸಿಕೊಳ್ಳುವ ಹಿನ್ನಲೆಯಲ್ಲಿ ಸಮಯಾವಕಾಶ ಪಡೆದಿತ್ತು. ಇದೀಗ ಈ ಸಿನಿಮಾ ಚಿತ್ರಕರಣ ಮುಗಿಯುವ ಹಂತಕ್ಕೆ ಬಂದಿದ್ದು, ಬಿಡುಗಡೆ ದಿನಾಂಕ ಪ್ರಕಟ ಮಾಡಿದೆ ಚಿತ್ರತಂಡ.

ಸ್ವತಂತ್ರ ದಿನಕ್ಕೆ ಪೊಗರು

ನಂದ ಕಿಶೋರ್ ನಿರ್ದೇಶಿಸಿ ಬಿ.ಕೆ ಗಂಗಾಧರ್ ನಿರ್ಮಾಣದ ಪೊಗರು ಚಿತ್ರವು ಸ್ವಾತಂತ್ರ್ಯ ದಿನಾಚರಣೆಗೆ ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ ಹೈದ್ರಾಬಾದ್ ನಲ್ಲಿ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ವಾಪಸ್ಸಾಗಿದೆ.

ಚಿತ್ರದಲ್ಲಿ ನಟ ಧೃವ ಸರ್ಜಾ ಜೊತೆ ನಟಿ ರಶ್ಮಿಕಾ ಮಂದಣ್ಣ ಸ್ಕ್ರೀನ್ ಶೇರ್ ಮಾಡಿದ್ದಾರೆ. ಹಾಗಾಗಿ ಸಿನಿಮಾ ಮೇಲಿನ ನಿರೀಕ್ಷೆ ಕೂಡ ಹೆಚ್ಚಾಗಿದ್ದು, ಚಿತ್ರದಲ್ಲಿ ಜಗಪತಿಬಾಬು, ಡಾಲಿ, ರವಿಶಂಕರ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ.

ಮತ್ತೆ ಸಿನಿಮಾ ಮಾಡಲಿರುವ ‘ಸ್ವಯಂಕೃಷಿ’ ವೀರೇಂದ್ರ

#readytorelased, #pogaru, #balkaninews #kannadasuddigalu, #filmnews, #dhruvasarja, #rashmikamandanna

Tags