ಸುದ್ದಿಗಳು

ಸ್ನೇಹಿತರೊಂದಿಗೆ ವನಸಂಚಾರ ಮಾಡುತ್ತಿರುವ ರಿಯಲ್ ಸ್ಟಾರ್

ಬೆಂಗಳೂರು, ಜ.12: ನಟ ಉಪೇಂದ್ರ ಸದ್ಯ ಐ ಲವ್ ಯು ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಫೆಬ್ರವರಿ ೧೪ ರಂದು ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಇದರ ನಡುವೆ ಉಪ್ಪಿಗೆ ಬಿಡುವು ಸಿಕ್ಕಿದ್ದು, ಕಾಡು ಸುತ್ತಿದ್ದಾರೆ.

ಕಾಡಿನ ಸೊಬಗನ್ನು ಸವಿದ ರಿಯಲ್ ಸ್ಟಾರ್

ಹೌದು, ನಟ ಉಪೇಂದ್ರ ಮತ್ತೆ ಫೀಲ್ಡಿಗೆ ಇಳಿದಿದ್ದು, ಅಭಿಮಾನಿಗಳನ್ನು ರಂಜಿಸಲು ರೆಡಿಯಾಗಿದ್ದಾರೆ. ಇನ್ನೇನು ಅವರ ಸಿನಿಮಾ ಕೂಡ ಬಿಡುಗಡೆಗೆ ರೆಡಿಯಾಗಿದೆ. ಅಷ್ಟೆ ಅಲ್ಲ ಈ ಸಿನಿಮಾ ಸಾಕಷ್ಟು ನಿರೀಕ್ಷೆಯನ್ನು ಕೂಡ ಹೊತ್ತಿದೆ. ಇವೆಲ್ಲದರ ನಡುವೆ ಉಪೇಂದ್ರ ಅವರಿಗೆ ಬ್ಯುಸಿ ಶೆಡ್ಯೂಲ್ ಆಗಿದ್ದೂ ಉಂಟು, ಯಾಕಂದ್ರೆ ಸಿನಿಮಾ ಹಾಗೂ ರಾಜಕೀಯ ಎರಡಲ್ಲೂ ಸಕ್ರೀಯರಾಗಿದ್ದಾರೆ ಉಪೇಂದ್ರ. ಇದೀಗ ಇವೆಲ್ಲದರ ನಡುವೆ ಕಾಡಿನಲ್ಲಿ ಸುತ್ತಾಟ ನಡೆಸಿದ್ದಾರೆ ಈ ನಟ.

ಅರ್ಜುನನನ್ನು ಮಾತನಾಡಿಸಿದ ಉಪೇಂದ್ರ

ಹೌದು, ನಾಗರಹೊಳೆ, ಕಬಿನಿ ಸೇರಿದಂತೆ ಕಾಡು ಮೇಡುಗಳನ್ನು ಸುತ್ತಿದ್ದಾರೆ ಈ ನಟ. ತಮ್ಮ ಸ್ನೇಹಿತರ ಜೊತೆ ಚಿಕ್ಕದೊಂದು ರಿಲ್ಯಾಕ್ಸ್ ಆಗಲು ಕಾಡಿಗೆ ಭೇಟಿ ನೀಡಿದ್ದಾರೆ. ಕಾಡಿನ ಪ್ರಕೃತಿ ಸೌಂದರ್ಯ, ಕಾಡು ಪ್ರಾಣಿಗಳ ಒಡನಾಟ ಹೀಗೆ ಎಲ್ಲವನ್ನು ಸವಿದಿದ್ದಾರೆ. ಈ ಕಾಡಿನಲ್ಲಿ ಸುತ್ತುವಾಗ ಅವರಿಗೆ ಸಿಕ್ಕಿದ್ದೇ ಅರ್ಜುನ ಹಾಗೂ ಸರಳ. ಇವರ‍್ಯಾರು ಅಂತೀರಾ, ಅವರೇ ಮೈಸೂರು ಅಂಬಾರಿ ಹೊರುವ ನಮ್ಮ ಆನಗಳು.

ಚಳಿಗೆ ನಡುಗಿದ ಉಪ್ಪಿ

ಇದೀಗ ಕಾಡಿನಲ್ಲಿ ಈ ಆನೆಗಳನ್ನು ವಿಚಾರಿಸಿ ಅವುಗಳೊಟ್ಟಿಗೆ ಕಾಲ ಕಳೆದಿದ್ದಾರೆ ನಟ ಉಪೇಂದ್ರ. ಇದೀಗ ಈ ವೇಳೆ ತೆಗೆದ ಕೆಲವೊಂದು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇನ್ನು ಈ ವೇಳೆ ಅವರಿಗೆ ಚಳಿಯ ಅನುಭವ ಕೂಡ ಹೆಚ್ಚಾಗಿದೆ. ಹೀಗಾಗಿ ಈ ನಟ ಹಾಗೂ ಅವರ ಸ್ನೇಹಿತರು ಬೆಂಕಿ ಹಾಕಿ ಚಳಿ ಕಾಯಿಸಿಕೊಂಡಿದ್ದಾರೆ.

#realstar #upendra #sandalwood #upendrafriends #balkaninews

Tags