ಸುದ್ದಿಗಳು

ಅಂಬಿ ಇಲ್ಲದ ಆ ನಾಲ್ಕು ತಿಂಗಳು

ಬೆಂಗಳೂರು, ಮಾ.25:

ಮನೆ ಹಾಗೂ ಅಭಿಮಾನಿಗಳ ಪಾಲಿನ ‘ಯಜಮಾನ’, ಮಂಡ್ಯದ ಗಂಡು ಅಂಬರೀಶ್ ಸದ್ಯ ನಮ್ಮ ಜೊತೆ ಇಲ್ಲ. ಅವರ ನೆನಪುಗಳು ಮಾತ್ರ ಯಾವಾಗಲೂ ಅಜರಾಮರ. ಇಂದಿಗೂ ಅಂಬಿ ಮಾಡಿದ ಕೆಲಸಗಳನ್ನು ಅಭಿಮಾನಿಗಳು ಮರೆಯೋದಿಲ್ಲ. ಯಾಕಂದ್ರೆ ಅವರ ಜೊತೆಯಲ್ಲಿ ಆ ರೀತಿ ಒಡನಾಟ ಇಟ್ಟುಕೊಂಡಿದ್ದರು ಒಭಿಮಾನಿಗಳು. ಇದೀಗ ಅಂಬಿ ಮರಣಹೊಂದಿ ನಾಲ್ಕು ತಿಂಗಳು ಕಳೆದಿವೆ. ಇದೀಗ ಅಂಬಿ ನಾಲ್ಕು ತಿಂಗಳ ಪುಣ್ಯ ಸ್ಮರಣೆ ಮಾಡಿದೆ. ಇದೇ ವೇಳೆ ಅಂಬಿ ಪತ್ನಿ, ಸುಮಲತ ಭಾವುಕ ಟ್ವಿಟ್ ಮಾಡಿದ್ದಾರೆ.

ನನ್ನೊಳಗೆ ನೀವಿದ್ದೀರಾ

ಹೌದು, ಅಂಬಿ ನಮ್ಮನ್ನೆಲ್ಲಾ ಅಗಲಿ ಸುಮಾರು ನಾಲ್ಕು ತಿಂಗಳು‌ ಕಳೆದಿವೆ. ಈ ಹಿನ್ನೆಲೆಯಲ್ಲಿ ನಟಿ ಸುಮಲತ ಅಂಬಿ ಅಗಲಿಕೆ ನೋವನ್ನು ಅಕ್ಷರಗಳ ಮೂಲಕ ಹೊರ ಹಾಕಿದ್ದಾರೆ. ನನ್ನೊಳಗಿನ ಶಕ್ತಿ ನೀವು, ನನ್ನನ್ನು ಮುನ್ನೆಡೆಸುವ ಬೆಳಕು ನೀವು, ನಿಮ್ಮ ಪ್ರೀತಿ ಯಾವಾಗಲು ನನ್ನನ್ನು ಜೀವಂತವಾಗಿ ಇರುತ್ತದೆ. ನೀವು ಎಂದೆಂದಿಗೂ. ನಾವು ಎಂದೆಂದಿಗೂ. ನೀವಿಲ್ಲದೆ ನಾಲ್ಕು ತಿಂಗಳು, ಆದರೆ, ನೀವಿಲ್ಲದ ಒಂದು ಕ್ಷಣವಿಲ್ಲ ಎಂದು ಭಾವುಕವಾಗಿ ನುಡಿದಿದ್ದಾರೆ.

ನಾಲ್ಕು ತಿಂಗಳ ಪುಣ್ಯತಿಥಿ

ಇನ್ನೂ ಅಂಬಿಯ ನಾಲ್ಕು ತಿಂಗಳ  ಪುಣ್ಯತಿಥಿ ಅಂಗವಾಗಿ ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಸಮಾಧಿಗೆ ಹಾಗೂ ಫೋಟೋಗೆ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು.  ಸುಮಲತ, ಅಭಿಷೇಕ್ ಅಂಬರೀಷ್​​ ಹಾಗೂ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಅಂಬಿಗೆ ಇಷ್ಟವಾದ ಇಡ್ಲಿ- ವಡೆ, ಉಪ್ಪಿಟ್ಟು ಮುಂತಾದ ತಿಂಡಿ ತಿನಿಸುಗಳನ್ನು ಸಮಾಧಿ ಮುಂದೆ ಇಟ್ಟು ಪೂಜಿಸಲಾಯ್ತು. ಇನ್ನು  ಅಂಬಿ ಸಮಾಧಿಗೆ ಆಗಮಿಸುವ ಅಭಿಮಾನಿಗಳಿಗೆ ಉಪಹಾರ ಹಾಗೂ ಮಜ್ಜಿಗೆ ಮತ್ತು ಪಾನಕ ವ್ಯವಸ್ಥೆ ಮಾಡಲಾಗಿತ್ತು.

ಅಪ್ಪು ಈ ಚಿತ್ರಕ್ಕೆ ಬರೋಬ್ಬರಿ 2 ವರ್ಷ !!

#balkaninews #sandalwood #kannadamovies #sumalathaambareesh #4thmonthdeathanniversery #mandyapolitics

Tags