ಸುದ್ದಿಗಳು

‘ರಿಲ್ಯಾಕ್ಸ್ ಸತ್ಯ’ ಚಿತ್ರದ ‘ಕ್ಷಣ ಕ್ಷಣ’ ಹಾಡು

‘ಕೆಂಡಸಂಪಿಗೆ’ ಮಾನ್ವಿತಾ ನಟಿಸಿರುವ ಸಿನಿಮಾ ’ರಿಲ್ಯಾಕ್ಸ್ ಸತ್ಯ’

ವಿಭಿನ್ನ ಟ್ರೈಲರ್ ಮೂಲಕ ಚಂದನವನದಲ್ಲಿ ಕುತೂಹಲ ಹುಟ್ಟಿಸಿರುವ ‘ರಿಲ್ಯಾಕ್ಸ್ ಸತ್ಯ’ ಚಿತ್ರ ‘ಕ್ಷಣ ಕ್ಷಣ’ ಹಾಡು ಸದ್ಯ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ.

ಬೆಂಗಳೂರು, ಸ. 05: ಅನೀಶ್ ತೇಜೇಶ್ವರ್ ಅಭಿನಯದಲ್ಲಿ ಮೂಡಿ ಬಂದಿದ್ದ ‘ಅಕೀರಾ’ ಚಿತ್ರದ ನಿರ್ದೇಶಕ ನವೀನ್ ರೆಡ್ಡಿ ಇದೀಗ ‘ರಿಲ್ಯಾಕ್ಸ್ ಸತ್ಯ’ ಎನ್ನುತ್ತಿದ್ದಾರೆ. ಹೌದು, ಇದು ಅವರು ನಿರ್ದೇಶನ ಮಾಡುತ್ತಿರುವ ಚಿತ್ರದ ಹೆಸರು.

ಮಾನ್ವಿತಾ ಮಾತು

ಈ ಚಿತ್ರದಲ್ಲಿ ಮಾನ್ವಿತಾ ಅವರು ಮಾಯಾ ದೇವತೆಯಾಗಿ ನಟಿಸುತ್ತಿದ್ದಾರೆ. ಜೊತೆಗೆ ಪಾತ್ರದ ಹೆಸರು ಕೂಡ ಮಾಯಾ. ಆದುದರಿಂದ ಕೂದಲನ್ನು ಸುರಳಿ ಸುತ್ತಿಕೊಂಡಿದ್ದಾರಂತೆ. ಚಿತ್ರದ ಟ್ರೈಲರ್ ಅನ್ನು ಗಮನಿಸಿ ನೋಡಿದಾಗ ಮಾನ್ವಿತಾ ಮುದ್ದಾಗಿ ಕಾಣುತ್ತಾರೆ. ಜೊತೆಗೆ ಉಗ್ರಂ ಮಂಜು ಅವರು ಸಹ ವಿಶೇಷ ಪಾತ್ರದಲ್ಲಿ ನಟಿಸಿರುವುದರಿಂದ ಚಿತ್ರವು ವಿಭಿನ್ನವಾಗಿ ಮೂಡಿ ಬಂದಿದೆ ಎನ್ನುತ್ತಾರೆ ಅವರು.

ಚಿತ್ರದ ಬಗ್ಗೆ

‘ಉರ್ವಿ’ ಚಿತ್ರದ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದ ನಾಯಕ ನಟ ಪ್ರಭು ಮುಂಡ್ಕೂರ್ ‘ರಿಲ್ಯಾಕ್ಸ್ ಸತ್ಯ’ ಚಿತ್ರದಲ್ಲಿ ಹೀರೋ ಆಗಿ ಅಭಿನಯ ಮಾಡಿದ್ದಾರೆ. ಮಾನ್ವಿತಾ ಹರೀಶ್ ನಾಯಕಿಯಾಗಿ ಅಭಿನಯಿಸಿದ್ದು ‘ಉಗ್ರಂ’ ಮಂಜು ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಈ ಮೂರು ಪಾತ್ರಗಳ ನಡುವೆ ಸುತ್ತುತ್ತದೆ.ಈ ಚಿತ್ರವನ್ನು ಪ್ರಕಾಶ್ ರೆಡ್ಡಿ ಚಿತ್ರವನ್ನು ನಿರ್ಮಾಣ ಮಾಡಿದ್ದು ಆನಂದ್ ರಾಜ ವಿಕ್ರಂ ಸಂಗೀತ ನೀಡಿದ್ದಾರೆ.

ಕ್ಷಣ ಕ್ಷಣ ಹಾಡು

ಸದ್ಯ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಈ ಚಿತ್ರದ ಹಾಡು ಎಲ್ಲರ ಗಮನ ಸೆಳೆಯುತ್ತಿದೆ. ಈ ಹಾಡನ್ನು ಧನಂಜಯ್ ರಂಜನ್ ಬರೆದಿದ್ದು, ಆನಂದ್ ರಾಜಾವಿಕ್ರಮ್ ಸಂಗೀತ ನೀಡಿದ್ದಾರೆ. ಈ ಹಾಡನ್ನು ಸುಪ್ರಿಯಾ ಲೋಹಿತ್, ಸಂಜಿತ್ ಹೆಗ್ಡೆ ಹಾಡಿದ್ದಾರೆ. ಸದ್ಯದಲ್ಲಿಯೇ ಚಿತ್ರವು ತೆರೆಗೆ ಬರಲಿದೆ.

Tags