ಸುದ್ದಿಗಳು

ರಿವೇಂಜ್ ಚಿತ್ರದ ಫಸ್ಟ್ ಲುಕ್ ಟ್ರೈಲರ್ ಬಂತು

ಹೊಸಬರ ತಂಡದ ರಿವೇಂಜ್ ಚಿತ್ರದ ಫಸ್ಟ್ ಲುಕ್ ಟ್ರೈಲರ್ ಬಿಡುಗಡೆಯಾಗಿದೆ . ಈಗಾಗಲೇ ಹಾಡುಗಳ ಮೂಲಕ ಗಮನ ಸೆಳೆದಿದೆ ಚಿತ್ರತಂಡ

ಬೆಂಗಳೂರು, ಜು.27: ಚಿತ್ರರಂಗಕ್ಕೆ ದಿನದಿಂದ ದಿನಕ್ಕೆ ಹೊಸಬರು ಬರುತ್ತಿದ್ದಾರೆ. ಅವರಂತೆಯೇ ಇಲ್ಲೊಂದು ಹೊಸಬರ ತಂಡ ರಿವೇಂಜ್ ಕಥೆಯೊಂದಿಗೆ ಬರುತ್ತಿದೆ. ಹೌದು, ರಿವೇಂಜ್ ಎಂಬುದು ಚಿತ್ರದ ಹೆಸರು.

ತಿಳಿನೀರು ತಂಡ

ಎರಡು ವರ್ಷಗಳ ಹಿಂದೆಯಷ್ಟೇ ತಿಳಿನೀರು ಎಂಬ ಚಿತ್ರ ಬಿಡುಗಡೆಗೊಂಡಿತ್ತು, ಅದರ ನಂತರ ಮುಂದುವರೆದ ತಂಡವೇ ಇಲ್ಲಿಯೂ ಮುಂದುವರೆದಿದ್ದು, ರಿವೇಂಜ್ ಚಿತ್ರವನ್ನು ಡಿ. ಯೋಗ ರಾಜ್ ಎಂಬುವವರು ನಿರ್ದೇಶನ ಮಾಡಿದ್ದಾರೆ.

ತಾರಾಬಳಗ

ಸಾಕಷ್ಟು ಹೊಸ ಕಲಾವಿದರೇ ಈ ಚಿತ್ರದಲ್ಲಿದ್ದು, ನಾಗಾರ್ಜುನ ಸಿನಿ ಕ್ರಿಯೇಶನ್ಸ್ ಲಾಂಛನದಲ್ಲಿ ಈ ಚಿತ್ರವು ಮೂಡಿ ಬರುತ್ತಿದೆ. ಈ ಚಿತ್ರದ ಮೂಲಕ ನಾಗಾರ್ಜುನ್ ಜಿ.ಎಸ್ ಅವರು ನಾಯಕರಾಗಿ ಅನು ಎಂಬುವವರು ನಾಯಕಿಯಾಗಿ ಚಿತ್ರರಂಗಕ್ಕೆ ಪರಿಚಯಗೊಳ್ಳುತ್ತಿದ್ದಾರೆ. ನವೀನ್ ಕುಮಾರ್ ಜಿ.ಎನ್ ಎಂಬುವವರು ಚಿತ್ರದ ಕಥೆ ಬರೆದಿದ್ದಾರೆ. ಚಿತ್ರದ ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣ, ಸಂಕಲನ, ವಿ.ಎಫ್ ಎಕ್ಸ್, ಡಿ.ಐ, ಮತ್ತು ನಿರ್ದೇಶನವನ್ನು ಡಿ. ಯೋಗರಾಜ್ ಅವರೇ ನಿರ್ವಹಿಸಿಕೊಂಡಿದ್ದಾರೆ.

 

@ sunil Javali

Tags

One Comment