ಸುದ್ದಿಗಳು

‘ಗ್ಲಾಡಿಯೇಟರ್’ ಉತ್ತರಭಾಗದಲ್ಲೂ ಕಾಣಿಸಿಕೊಳ್ಳಲಿರುವ ರಿಡ್ಲೆ ಸ್ಕಾಟ್

ನಿರ್ಮಾಪಕ ಮತ್ತು ನಿರ್ದೇಶಕ ರಿಡ್ಲೆ ಸ್ಕಾಟ್

ನವೆಂಬರ್, 03: ಚಿತ್ರ ನಿರ್ಮಾಪಕ ರಿಡ್ಲೆ ಸ್ಕಾಟ್ ಪ್ಯಾರಾಮೌಂಟ್ ಪಿಕ್ಚರ್ಸ್ ಜೊತೆಗೆ ನಿರಂತರ ಚರ್ಚೆಯ ನಂತರ ಹೊಸ ‘ಗ್ಲಾಡಿಯೇಟರ್’ ಚಿತ್ರದ ಕೆಲಸ ಪ್ರಾರಂಭಿಸಿದ್ದಾರೆ. ‘ದಿ ಟೌನ್’ ಖ್ಯಾತಿಯ ಪೀಟರ್ ಕ್ರೈಗ್ ಅವರು ಈ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ ಎಂದು ವೆರೈಟಿ ವರದಿ ಮಾಡಿದೆ.

2000ದ ಹಿಟ್ ಚಿತ್ರದ ಮುಂದಿನ ಭಾಗದ ಚಿತ್ರೀಕರಣಕ್ಕೆ ಸಿದ್ಧತೆ

2000ರಲ್ಲಿ ಬಿಡುಗಡೆಯಾದ ‘ಗ್ಲಾಡಿಯೇಟರ್’ ನಲ್ಲಿ, ರಸೆಲ್ ಕ್ರೋವ್ ರೋಮನ್ ಸೈನ್ಯದ ಜನರಲ್ ಆಗಿ ಮ್ಯಾಕ್ಸಿಮಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈತನ ಕುಟುಂಬಕ್ಕೆ ಚಕ್ರವರ್ತಿಯಿಂದ ದ್ರೋಹವಾಗುತ್ತದೆ. ಇದೇ ವೇಳೆ ಕುಟುಂಬವು ಕ್ರೂರವಾಗಿ ಕೊಲೆಗೀಡಾಗುತ್ತದೆ. ಆದರೆ ಸತ್ತವರಿಗೆ ಸಂಸ್ಕಾರ ಮಾಡದೇ ಬಿಟ್ಟು ಹೋಗಲಾಗುತ್ತದೆ. ಗುಲಾಮ ವ್ಯಾಪಾರಿಗಳನ್ನು ವಶಪಡಿಸಿಕೊಂಡ ನಂತರ ಅಂತಿಮವಾಗಿ ಗ್ಲಾಡಿಯೇಟರ್ ಆಗಲು ಬಲವಂತ ಮಾಡಲಾಗುತ್ತದೆ. ಚಕ್ರವರ್ತಿಯ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಬೇಕೆಂದು ಕತ್ತಿವರಸೆಯಲ್ಲಿ ಪಾರಂಗತನಾಗಿ, ಹೋರಾಟ ಮಾಡುವ ಉದ್ದೇಶ ಇಟ್ಟುಕೊಂಡು ರೋಮ್ ಗೆ ವಾಪಸ್ಸಾಗುತ್ತಾನೆ.

ಈ ಚಿತ್ರವು ಆಸ್ಕರ್ಸ್ ಪ್ರಶಸ್ತಿ ಪಡೆದುಕೊಂಡಿದ್ದಲ್ಲದೇ, ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದಿತು. ವಿಶ್ವದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ 460 ದಶಲಕ್ಷ ಡಾಲರ್ ಆದಾಯವನ್ನು ಗಳಿಸಿತ್ತು.

Tags

Related Articles