ಸುದ್ದಿಗಳು

ಸ್ಕ್ರಿಪ್ಟ್ ಹಾಕಿ ನಿಮ್ಮ ನೆಚ್ಚಿನ ಡೈಲಾಗ್ ಯಾವುದು ಎಂದ ರಿಷಭ್ ಶೆಟ್ಟಿ

‘ಕಿರಿಕ್‌ ಪಾರ್ಟಿ’ ಮಾಡಿ ಗೆದ್ದ ರಿಷಬ್‌ ಶೆಟ್ಟಿ ‘ಸರ್ಕಾರಿ ಹಿ. ಪ್ರಾ.ಶಾಲೆ, ಕಾಸರಗೋಡು’ ಮೂಲಕ ಮತ್ತೊಮ್ಮೆ ತಮ್ಮ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ರಂಜಿಸಿದ್ರು. ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳಲು ಕಾಸರಗೋಡು ಜನರು ಏನು ಮಾಡುತ್ತಾರೆ ಎನ್ನುವುದನ್ನು ಪ್ರೇಕ್ಷಕರಿಗೆ ಇಷ್ಟವಾಗುವಂತೆ ತೆರೆಗೆ ತಂದಿದ್ದರು.

ಶಾಲೆಯಲ್ಲಿ ಮಕ್ಕಳ ಆಟ, ಪಾಠ, ತುಂಟಾಟ. ಈ ನಡುವೆ ಮೂರು ವರ್ಷಗಳಿಂದ ಪಾಸ್ ಆಗದೇ ಒಂದೇ ಕ್ಲಾಸ್ ನಲ್ಲಿ ಓದುತ್ತಿರುವ ‘ದಡ್ಡ ಪ್ರವೀಣ’ನ ‘ಕ್ರಷ್’ ಸ್ಟೋರಿ. ಇನ್ನು ಹಿರಿಯ ನಟ ಅನಂತ್ ನಾಗ್ ಈ ಚಿತ್ರಕ್ಕೆ ಪ್ಲಸ್ ಪಾಯಿಂಟ್.

Image result for ಸರ್ಕಾರಿ ಹಿ ಪ್ರಾ ಶಾಲೆ ಕಾಸರಗೋಡು

ಈಗ ರಿಷಭ್ ಶೆಟ್ಟಿ ಟ್ವಿಟರ್ ನಲ್ಲಿ ಪೂರ್ತಿ ಸಿನಿಮಾ ಸ್ಕ್ರಿಪ್ಟ್ ಹಾಕಿದ್ದು, ಡೌನ್ ಲೋಡ್ ಮಾಡಿ ಇದರಲ್ಲಿ ನಿಮಗಿಷ್ವಾದ ಡೈಲಾಗ್ ಹೇಳಿ ಎಂದು ಬರೆದುಕೊಂಡಿದ್ದಾರೆ.

ಅನೇಕರು ಕಾಮೆಂಟ್ ಮಾಡಿದ್ರು.’ ಪ್ರವೀಣಾ ನೀನೆಂತಕ್ಕೆ ಅವಳಿಗೆ ಪುಸ್ತಕ ಕೊಟ್ಟಿದ್ದು. ‘ಹೇ ಭುಜಂಗ ಬಾರಾ ಉಗ್ರ ಹೋರಾಟ ಉಂಟು’, ‘ಸಿನಿಮಾ ಸ್ಕ್ರಿಪ್ಟ್ ಈ ರೀತಿ ಇರುತ್ತೆ ಅಂತ ಇವತ್ತೇ first ಟೈಂ ನೋಡಿದ್ದು. ಥ್ಯಾಂಕ್ಸ್ ರಿಷಬಣ್ಣ’ ಎಂದೆಲ್ಲಾ ಬರೆದಿದ್ದಾರೆ.

ಅಂತು ಸ್ಕ್ರಿಪ್ಟ್ ಹಾಕುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿದ್ದಾರೆ ರಿಷಭ್ ಶೆಟ್ಟಿ.

Tags