ಸುದ್ದಿಗಳು

ಕಾಸರಗೋಡು ಶಾಲೆ ಅಭಿವೃದ್ಧಿಗೆ ಮುಂದಾದ ರಿಷಬ್

ಬೆಂಗಳೂರು, ಫೆ.21:

‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾ ಸದ್ಯ ತೆರೆ ಕಂಡು ಯಶಸ್ವಿ ಪ್ರದರ್ಶನ ನೀಡಿತ್ತು. ಅಷ್ಟೇ ಅಲ್ಲ ವಿಭಿನ್ನ ಕಾನ್ಸೆಪ್ಟ್, ಕೆಲವೊಂದು ನೈಜ ಘಟನೆಗಳು, ಆ ಭಾಗದ ಕನ್ನಡ ಶಾಲೆಗಳ ಸ್ಥಿತಿ ಹೀಗೆ ಎಲ್ಲವನ್ನು ವಿಚಾರಗಳನ್ನಿಟ್ಟುಕೊಂಡು ರಿಷಭ್ ವಿಭಿನ್ನವಾಗಿ ಸಿನಿಮಾ ಮಾಡಿದ್ದರು. ಇನ್ನು ಈ ಸಿನಿಮಾ ಕೂಡ ಅಭಿಮಾನಿಗಳಿಗೆ ತಲುಪುವುಲ್ಲಿ ಯಶಸ್ವಿಯಾಗಿತ್ತು. ಇದೀಗ ಈ ಸಿನಿಮಾದಲ್ಲಿ ಚಿತ್ರೀಕರಣ ಮಾಡಿದ್ದ ಶಾಲೆಯ ಅಭಿವೃದ್ದಿಗೆ ಮುಂದಾಗಿದ್ದಾರೆ ರಿಷಬ್.

ಕಾಸರಗೋಡು ಕನ್ನಡ ಶಾಲೆ ಅಭಿವೃದ್ದಿ ಕಡೆ

ಹೌದು, ದುರಸ್ಥಿಯಲ್ಲಿದ್ದ ಈ ಶಾಲೆಗೆ ಅಭಿವೃದ್ದೀಯ ಭಾಗ್ಯ ದೊರಕಿರಲಿಲ್ಲ. ಈಗಾಗಲೇ ಸಿನಿಮಾದಲ್ಲೂ ಕೆಲವೊಂದಿಷ್ಟು ನೈಜ ಘಟನೆಗಳನ್ನು ಕೂಡ ತೋರಿಸಲಾಗಿತ್ತು. ಇನ್ನು ಈ ಸಿನಿಮಾ ಗಳಿಕೆಯಲ್ಲೂ ಯಶಸ್ವಿಯಾಗಿತ್ತು ಅನ್ನೋದು ಕೂಡ ಗೊತ್ತಿರುವ ವಿಚಾರವೇ. ಇದೀಗ ಈ ಸಿನಿಮಾದಲ್ಲಿ ಉಪಯೋಗಿಸಿದ್ದ ಶಾಲೆಗೆ ನಟ ರಿಷಬ್ ಇದೀಗ ಈ ಶಾಲೆ ಕೊಠಡಿಗಳು ಹಾಗೂ ಬೆಂಚುಗಳನ್ನು ಹಾಕಿಸುತ್ತಿದ್ದಾರೆ. ಇನ್ನು ಈ ಖುಷಿಯ ವಿಚಾರವನ್ನು ರಿಷಬ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊ‌ಡಿದ್ದಾರೆ.

ದುರಸ್ಥಿ ಕಾರ್ಯದ ಬಗ್ಗೆ ಹಂಚಿಕೊಂಡ ರಿಷಬ್

ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ರಿಷಬ್, ಸರ್ಕಾರಿ. ಹಿ. ಪ್ರಾ. ಶಾಲೆ ಕಾಸರಗೋಡು ಚಿತ್ರದ ಕೊನೆಯಲ್ಲಿ ಮಕ್ಕಳೇ ಶಾಲೆ ಉಳಿಸಿಕೊಂಡಾಗ, ರಾಮಣ್ಣ ರೈ ಶಾಲೆಗೆ ಪೈಂಟು ಮಾಡಿಸಿ ಹೊಸ ಬೋರ್ಡು ಕೊಡುಗೆ ನೀಡಿದ್ದು ನೆನಪಿರಬಹುದು. ಆದರೆ ಸರಿಯಾದ ಸೌಲಭ್ಯಗಳಿರದೇ ಹೆಚ್ಚು ಕಡಿಮೆ ಕಥೆಯಲ್ಲಿನ ಶಾಲೆಯದ್ದೇ ಸ್ಥಿತಿಯಲ್ಲಿದ್ದ ಚಿತ್ರೀಕರಣಕ್ಕೆ ಬಳಸಿದ ಕೈರಂಗಳ ಶಾಲೆಗೂ ಏನಾದರೂ ಪುಟ್ಟ ಕೊಡುಗೆಯನ್ನು ನೀಡಬೇಕೆಂದು ‘ಸರ್ಕಾರಿ ಶಾಲೆ ಉಳಿಸಿ’ ಕಾರ್ಯಕ್ರಮದಡಿ ಅದರ ದುರಸ್ತಿ ಕಾರ್ಯಕ್ಕೆ ಕೈ ಹಾಕಿದ್ದೆವು. ಚಿತ್ರ ತೆರೆ ಕಂಡು 125 ದಿನಗಳಾದ ಈ ಸಂದರ್ಭದಲ್ಲಿ ಆ ಕೆಲಸ ಯಶಸ್ವಿಯಾಗಿ ಸಾಗುತ್ತಿದೆಯೆಂಬ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ಎಂದು ಬರೆದುಕೊಂಡಿದ್ದಾರೆ.

#rishabshetty #rishabhshettytwitter #balkaninews #sarkarihiriyaprathamikashalekannadamovie #kasaragodu

Tags

Related Articles