ಸುದ್ದಿಗಳು

ಕೈರಂಗಳ ಸರಕಾರಿ ಶಾಲೆಗೆ ರಿಷಭ್ ಕೊಟ್ರು ಹೊಸ ತಿರುವು!!

ಮುಡಿಪು,ಏ.25: ಎಲ್ಲ ಸೌಲಭ್ಯಗಳಿದ್ದರೂ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಏನೇ ಇದ್ದರೂ ಶಿಕ್ಷಕರ ಕಡೆಗೆ ಬೆಟ್ಟು ಮಾಡುವ ಪ್ರವೃತ್ತಿ ಸಮಾಜದಲ್ಲಿದೆ. ಆದ್ದರಿಂದ ಕನ್ನಡ ಶಾಲೆಗಳನ್ನು ಉಳಿಸುವ ಜವಾಬ್ದಾರಿಯನ್ನು ಶಿಕ್ಷಕರು ಹೊತ್ತುಕೊಳ್ಳಬೇಕು.. ಇತ್ತೀಚಿನ ಆಂಗ್ಲ ಮಾಧ್ಯಮದ ಪ್ರಭಾವದಿಂದಾಗಿ ಕನ್ನಡ ಶಾಲೆಗಳು ಅಳಿವಿನಂಚಿರುವುದಂತೂ ಸತ್ಯ…

ಶಾಲೆಯ ಉಳಿವಿಗಾಗಿ ರಿಷಭ್ ಹೊಸ ನಿರ್ಧಾರ

ಕನ್ನಡ ಶಾಲೆಯ ಉಳಿವು ಗಾಗಿ  ಕನ್ನಡದಲ್ಲಿ ಇ್ತತೀಚೆಗೆ ಒಂದು ಸಿನಿಮಾವು ಮೂಡಿ ಬಂದಿತ್ತು.. “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ”. ರಿಷಭ್ ಶೆಟ್ಟಿ ನಿರ್ದೇಶನದಲ್ಲಿ ಅನಂತ್ ನಾಗ್​ ಮುಖ್ಯ ಭೂಮಿಕೆಯಲ್ಲಿ ಈ ಸಿನಿಮಾ ಶತದಿನ ಪೂರೈಸಿ ಚಂದನವನದಲ್ಲಿ ಹೊಸ ದಾಖಲೆ ಬರೆದಿತ್ತು. ಈ ಚಿತ್ರದ ಚಿತ್ರೀಕರಣವನ್ನು  ಕಾಸರಗೋಡು ಹಾಗೂ ಕರಾವಳಿ ಭಾಗದ ಕೈರಂಗಳ ಗ್ರಾಮದ ಶಾಲೆಯಲ್ಲಿ ನಡೆಸಿದ್ದ ಚಿತ್ರತಂಡ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಮಾಡುವುದಾಗಿ ಹೇಳಿದ್ದರು. ಈಗ ರಿಷಭ್ ಅದರಂತೆಯೇ ಮಾತು ಉಳಿಸಿಕೊಂಡಿದ್ದಾರೆ.. ಶಾಲೆಯ ಗೋಡೆಯ ತುಂಬೆಲ್ಲಾ ಕಲೆ, ಸಾಹಿತ್ಯ, ಪರಿಸರಕ್ಕೆ ಸಂಬಂಧಿಸಿದ ಬಣ್ಣ ಬಣ್ಣದ ಆಕರ್ಷಕ ಚಿತ್ರಗಳನ್ನು ಬಿಡಿಸುವ ಮೂಲಕ ಹೊಸ ರೂಪ ನೀಡಿದೆ..

ರಿಷಭ್ ಟ್ವೀಟ್

“ರಜೆ ಮುಗಿಸಿ ಬರುವ ಮಕ್ಕಳಿಗೆ ಹೊಸ ವರ್ಷಕ್ಕೆ ಹೊಸ ಶಾಲೆ, ಹೊಸ ಕಲಿಕೆ, ಹೊಸ ಜೀವನವನ್ನು ನೀಡುವ ಪ್ರಯತ್ನದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದೇವೆ. ಆ ಮಕ್ಕಳ ಭವಿಷ್ಯಕ್ಕೂ, ನಮ್ಮ ಈ ಪ್ರಯತ್ನಕ್ಕೂ ನಿಮ್ಮ ಸಹಕಾರವಿರಲಿ”  ಎಂದು ಟ್ವೀಟ್ ಮಾಡಿದ್ದಾರೆ

ಎಲ್ಲೆಡೆ ಸದ್ದು ಮಾಡ್ತಿವೆ ಝಾನ್ಸಿಯ ವರ್ಕೌಟ್ ಫೋಟೋಸ್…!

#rishabshetty #kanandamovie #kannadasuddi

Tags