ಸುದ್ದಿಗಳು

ರಿಷಿಗೆ ದೇವರು ದಾರಿ ತಪ್ಪಿಸಿದ

ಬಿ. ಎಸ್ ಲಿಂಗದೇವರು ನಿರ್ದೇಶನದ ಚಿತ್ರದಲ್ಲಿ ರಿಷಿ

ಬೆಂಗಳೂರು, ಸೆ.26: ಸುನಿ ನಿರ್ದೇಶನದ ‘ಆಪರೇಷನ್ ಅಲುಮೇಲಮ್ಮ’ ಖ್ಯಾತಿಯ ರಿಷಿ ಮೂರನೇಯ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಸದ್ಯ ಪುನೀತ್ ರಾಜ್ ಕುಮಾರ್ ನಿರ್ಮಾಣದ ‘ಕವಲು ದಾರಿ’ಯಲ್ಲಿ ನಟಿಸುತ್ತಿರುವ ಅವರು ಬಿ. ಎಸ್ ಲಿಂಗದೇವರು ನಿರ್ದೇಶನದ ಚಿತ್ರದಲ್ಲೂ ಅಭಿನಯಿಸಲಿದ್ದಾರೆ.

ದಾರಿ ತಪ್ಪಿಸು ದೇವರೇ

ಈಗಾಗಲೇ ‘ನಾನು ಅವನಲ್ಲ ಅವಳು’ ಚಿತ್ರದ ಮೂಲಕ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದವರು ನಿರ್ದೇಶಕ ಬಿ ಎಸ್ ಲಿಂಗದೇವರು. ಆ ಚಿತ್ರದ ನಂತರ ‘ದಾರಿ ತಪ್ಪಿಸು ದೇವರೇ’ ಎಂಬ ಚಿತ್ರವನ್ನು ಮಾಡುತ್ತಿದ್ದಾರೆ. ವಿಶೇಷವೆಂದರೆ ಈ ಚಿತ್ರದಲ್ಲಿ ರಿಷಿ ನಟಿಸಲಿದ್ದಾರೆ. ಈ ಚಿತ್ರಕ್ಕೆ ಮಂಜುನಾಥ್ ಕಾಮತ್ ಬರೆದಿರುವ ‘ದಾರಿ ತಪ್ಪಿಸು ದೇವರೇ’ ಎಂಬ ಪುಸ್ತಕವು ಸ್ಪೂರ್ತಿಯಾಗಿದೆ.

ರಸ್ತೆಯ ಸಿನಿಮಾ

ಇದೊಂದು ರೋಡ್ ಸಿನಿಮಾ, ಅಂದರೆ ಇಡೀ ಚಿತ್ರವು ಪಯಣದಲ್ಲಿಯೇ ಮುಗಿಯುತ್ತದೆ. ಈಗಿನ ಕಾಲದ ಕೆಲವು ಹುಡುಗರು ಬೈಕ್ ರೈಡ್ ಹೋಗುತ್ತಾರೆ. ಅದರಂತೆ ಚಿತ್ರದ ನಾಯಕನು ಸಹ ಕಾರ್ಕಳದಿಂದ ಚಿಕ್ಕಮಗಳೂರಿಗೆ ಸವಾರಿ ಹೊರಡುತ್ತಾನೆ. ಆಗ ಎದುರಾಗುವ ಸಂಗತಿಗಳೇ ಚಿತ್ರದ ಜೀವಾಳ’ ಎಂದು ನಿರ್ದೇಶಕರು ಹೇಳುತ್ತಾರೆ.

ಭಿನ್ನವಾದ ನೋಟ

ನಟ ರಿಷಿಗೆ ಈ ಚಿತ್ರದ ಕುರಿತಂತೆ ಸಂಸತ ವ್ಯಕ್ತಪಡಿಸುತ್ತಾರೆ. ಕಾರಣ , ಅಭಿನಯಿಸಿದ ಮೊದಲ ಚಿತ್ರದಲ್ಲಿ ಕಳ್ಳನಾಗಿ, ಅಂದರೆ ಜವಾಬ್ದಾರಿ ಇಲ್ಲದ ಹುಡುಗನಾಗಿ ನಟಿಸಿದ್ದರೆ, ಎರಡನೇ ಚಿತ್ರದಲ್ಲಿ ಪೋಲಿಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ಮೂರನೇಯ ಚಿತ್ರದಲ್ಲಿ ಪಯಣಿಗನಾಗಿ, ಹೀಗೆ ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರಕ್ಕೆ ಶೃತಿ ನಾಯಕಿ !?!

ಎಲ್ಲವೂ ಅಂದುಕೊಂಡತಾದರೆ ಈ ಚಿತ್ರಕ್ಕೆ ಶೃತಿ ಹರಿಹರನ್ ನಾಯಕಿಯಾಗಿ ನಟಿಸುವ ಸಾಧ್ಯತೆಗಳಿವೆ. ಈಗಾಗಲೇ ಇವರಿಗೆ ಕಥೆಯನ್ನು ಹೇಳಿದ್ದಾರೆ ನಿರ್ದೇಶಕರು. ಆದರೆ ಯಾವುದೇ ಅಧೀಕೃತ ಸುದ್ದಿಗಳು ತಿಳಿದು ಬಂದಿಲ್ಲ. ಇನ್ನೇನು ಸದ್ಯದಲ್ಲಿಯೇ ಈ ಚಿತ್ರವು ಶುರುವಾಗಲಿದ್ದು, ಚಿತ್ರಕ್ಕೆ ಮಹೇಶ್ ಮತ್ತು ಕಿಶೋರ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

Tags