ಸುದ್ದಿಗಳು

ನಿಶ್ಚಿತಾರ್ಥವಾದ ಸಂಭ್ರಮದಲ್ಲಿ ‘ಕವಲುದಾರಿ’ ರಿಷಿ

ಡಬಲ್ ಖುಷಿಯಲ್ಲಿ ರಿಷಿ

ಬೆಂಗಳೂರು.ಏ.20: ‘ಆಪರೇಷನ್ ಅಲುಮೇಲಮ್ಮ’ ಹಾಗೂ ‘ಕವಲುದಾರಿ’ ಚಿತ್ರಗಳ ಖ್ಯಾತಿಯ ನಟ ರಿಷಿ ಕೆಲವು ದಿನಗಳ ಹಿಂದೆಯಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಒಂದೆಡೆ ರಿಷಿ ಅಭಿನಯದ ‘ಕವಲುದಾರಿ’ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರೊಂದಿಗೆ ನಿಶ್ಚಿತಾರ್ಥ ಆದ ಸಂಭ್ರಮದಲ್ಲಿದ್ದಾರೆ. ಈ ಖುಷಿಯ ಜೊತೆಗೆ ಈಗ ಬಾಳ ಸಂಗಾತಿ ಸಿಕ್ಕಿದ ಸಂತಸ ಕೂಡ ಸೇರಿಕೊಂಡು ಡಬಲ್ ಖುಷಿಯಲ್ಲಿ ತೇಲುತ್ತಿದ್ದಾರೆ.

ಸದ್ಯ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿರುವ ರಿಷಿ ಕಳೆದ ವಾರ ಹೈದರಾಬಾದ್ ನ ಖಾಸಗಿ ಹೋಟೆಲ್ ವೊಂದರಲ್ಲಿ ಗುರು-ಹಿರಿಯರ ಆಶೀರ್ವಾದದಲ್ಲಿ ತನ್ನ ಗರ್ಲ್ ಫ್ರೆಂಡ್ ಸ್ವಾತಿ ಜೊತೆಗೆ ನಿಶ್ವಿತಾರ್ಥ ಮಾಡಿಕೊಂಡಿದ್ದರು.

ಅಂದ ಹಾಗೆ ಸ್ವಾತಿ ವೃತ್ತಿಯಲ್ಲಿ ಬರಹಗಾರ್ತಿ ಹಾಗೂ ರಿಷಿ ಜೀವನದಲ್ಲಿ ಬೆನ್ನೆಲುಬಾಗಿ ನಿಂತ ಸಂಗಾತಿ ಎಂದು ಹೇಳಿಕೊಂಡಿರುವ ರಿಷಿ, ‘ನೀವೆಲ್ಲರೂ ನನ್ನ ಕೆಲಸವನ್ನು ನೋಡಿ ಮೆಚ್ಚಿ ಪ್ರೋತ್ಸಾಹಿಸಿದ್ದೀರಿ. ನಿಮ್ಮ ಈ ಪ್ರೀತಿ ನನಗೆ ಇನ್ನಷ್ಟು ಒಳ್ಳೆ ಕೆಲಸಗಳ ಮೂಲಕ ನಿಮ್ಮೆಲ್ಲರನ್ನು ರಂಜಿಸಲು ಸ್ಫೂರ್ತಿ ಕೊಟ್ಟಿದೆ.

ಈ ಗೆಲುವಿನ ಬೆನ್ನಲ್ಲೇ ನನ್ನ ವೈಯಕ್ತಿಕ ಜೀವನದಲ್ಲೂ ಒಂದು ಮಹತ್ತರ ಮೈಲಿಗಲ್ಲನ್ನು ಮುಟ್ಟಿದ್ದೇನೆಂದು ನಿಮ್ಮ ಬಳಿ ಹಂಚಿಕೊಳ್ಳಲು ನನಗೆ ಬಹಳ ಸಂತಸವಿದೆ. ನನ್ನ ಸಂಗಾತಿ ನನಗೆ ಸಿಕ್ಕಿದ್ದಾಳೆ. ನಮ್ಮಿಬ್ಬರ ಕುಟುಂಬದವರ ಆಶೀರ್ವಾದದಿಂದ, ಹೈದರಾಬಾದ್ ನಲ್ಲಿ ಒಂದು ಚಿಕ್ಕ ಸಮಾರಂಭದಲ್ಲಿ ನಮ್ಮಿಬ್ಬರ ನಿಶ್ಚಿತಾರ್ಥ ನೆರವೇರಿದೆ. ಸಿನಿಮಾ ಕೆಲಸಗಳಲ್ಲಿ ತೊಡಗಿದ್ದರಿಂದ ನಿಶ್ಚಿತಾರ್ಥದ ವಿಚಾರವನ್ನು ಈಗ ತಿಳಿಸುತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಶುಭ ಹಾರೈಕೆ ನಮ್ಮ ಮೇಲೆ ಸದಾ ಹೀಗೆ ಇರಲಿ’ ಎಂದು ಹಂಚಿಕೊಂಡಿದ್ದಾರೆ.

ಸದ್ಯಕ್ಕೆ ಎರಡು ಹಿಟ್ ಚಿತ್ರಗಳನ್ನು ನೀಡುವ ಮೂಲಕ ಯಶಸ್ವಿನಟನಾಗಿರುವ ರಿಷಿ ‘ರಾಮನ ಅವತಾರ’, ‘ಗಾಳಿಪಟ-2’, ‘ಸಾರ್ವಜನಿಕರಿಗೆ ಸುವರ್ಣಾವಕಾಶ’, ‘ಸಿಲ್ಕ್ ಸಿದ್ದ’ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

‘ಯರ್ರಾಬಿರ್ರಿ’ ಚಿತ್ರಕ್ಕೆ ನಾಯಕಿಯಾದ ಬಿಗ್ ಬಾಸ್ ಖ್ಯಾತಿಯ ಸೋನು ಪಾಟೀಲ್

#rishi, #engegementtoswathi, #balkaninews #kavaludaari, #filmnews, #kannadasuddigalu

Tags