ಸುದ್ದಿಗಳು

ರಿಧಿಮಾ ಕಪೂರ್ ಮದುವೆಯ ನಂತರ ರಿಶಿ ಕಪೂರ್ ಪರಿಸ್ಥಿತಿಗೆ ಹೊಂದಿಕೊಂಡ ಬಗ್ಗೆ ವಿವರಿಸಿದ ಪತ್ನಿ

ಬಾಲಿವುಡ್ ಜನಪ್ರಿಯ ನಟ ರಿಷಿ ಕಪೂರ್

ಮುಂಬೈ, ನ.17: ಪ್ರತಿಯೊಬ್ಬ ತಂದೆಗೂ ತನ್ನ ಮಗಳು ಏಜೆಂಲ್. ಆಕೆ ಹೇಗೆ ಇರಲಿ. ಏನೇ ಮಾಡುತ್ತಿರಲಿ.. ಆತನಿಗದು ಹೆಮ್ಮೆಯ ವಿಚಾರ. ಆಕೆಯನ್ನು ಮದುವೆ ಮಾಡಿಕೊಡುವಾಗ ತಾಯಿಗಿಂತಲೂ ಹೃದಯ ಭಾರವಾಗುವುದು ತಂದೆಗೆ. ಇದೇ ಪರಿಸ್ಥಿತಿಯನ್ನು ನಟ ರಿಶಿಕಪೂರ್ ಕೂಡ ಎದುರಿಸಿದ್ದರಂತೆ. ರಿಶಿಕಪೂರ್ ಗೆ ಮಗಳು ರಿಧಿಮಾ ಕಪೂರ್ ಎಂದರೆ ಎಲ್ಲಿಲ್ಲದ ಅಕ್ಕರೆ. ಆಕೆಯನ್ನು ಮದುವೆ ಮಾಡಿಕೊಟ್ಟಾಗ ಸಂತಸ ಹಾಗೂ ದುಃಖವನ್ನು ಏಕಕಾಲಕ್ಕೆ ಅನುಭವಿಸಿದ್ದ ರಿಶಿ, ಪರಿಸ್ಥಿತಿಯನ್ನು ಹೇಗೆ ನಿಭಾಯಿಸಿದ್ದರು ಎಂಬುದನ್ನು ಇದೀಗ ಪತ್ನಿ ನೀತು ಕಪೂರ್ ಹೇಳಿಕೊಂಡಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ಭಾವನಾತ್ಮಕ ಸಂಬಂಧವನ್ನು ಬಿಚ್ಚಿಟ್ಟ ನೀತು ಕಪೂರ್

ತಂದೆ ರಿಶಿ ಕಪೂರ್ ಜೊತೆಗೆ ರಿಧಿಮಾ ಕಪೂರ್ ಇರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿರುವ ನೀತು ಕಪೂರ್. ‘ಮಕ್ಕಳಿಲ್ಲದಿದ್ದರೆ ನಮ್ಮ ಪರ್ಸ್ ಯಾವಾಗಲೂ ತುಂಬಿರುತ್ತದೆ, ಆಕ್ಸೈಟಿ ಲೆವೆಲ್ ಕಡಿಮೆಯಿರುತ್ತದೆ, ಆದರೆ ಮಕ್ಕಳಿಲ್ಲದ ಬದುಕು ಅಪೂರ್ಣ, ನಮ್ಮ ಜೀವನದಲ್ಲಿ ಬೆಳಕು ನೀಡಿದ್ದಕ್ಕೆ, ಬದುಕನ್ನು ಪರಿಪೂರ್ಣಗೊಳಿಸಿದ್ದಕ್ಕೆ ಧನ್ಯವಾದಗಳು’ ಎಂದು ಕ್ಯಾಪ್ಶನ್ ನೀಡಿದ್ದಾರೆ ನೀತು. ಅಂದಹಾಗೆ ನೀತು ಶೇರ್ ಮಾಡಿರುವುದು ಪೇಪರ್ ಕಟ್ಟಿಂಗ್ ಒಂದರ ಫೋಟೋವನ್ನು. ಈ ಪೇಪರ್ ನಲ್ಲಿ ರಿಶಿ ಕಪೂರ್ ಹಾಗೂ ರಿಧಿ ಕುರಿತಂತೆ ಆಸಕ್ತಿದಾಯಕ ಸ್ಟೋರಿಯೂ ಇದೆ. ರಿಶಿ ಕಪೂರ್ ಮುದ್ದಿನ ಮಗಳು ರಿಧಿ, ಭರತ್ ಶಾನಿಯನ್ನು ವಿವಾಹವಾಗುತ್ತಾರೆ. ಉದ್ಯಮಿಯಾಗಿರುವ ಭರತ್ ಅವರು ದೆಹಲಿಯಲ್ಲಿ ನೆಲೆಸಿರುವುದರಿಂದ ರಿಧಿಕೂಡ ಪತಿಯೊಂದಿಗೆ ರಾಜಧಾನಿಗೆ ಹೊರಟು ನಿಲ್ಲುತ್ತಾರೆ. ಮಗಳು ದೂರಹೋಗುತ್ತಾಳೆ ಎಂಬ ದುಃಖದಲ್ಲಿದ್ದ ರಿಶಿ, ಪ್ರತಿದಿನ ಮಗಳಿಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದರಂತೆ. ಒಂದು ವೇಳೆ ತಾನು ಕರೆ ಮಾಡಿದಾಗ ರಿಧಿ ಕರೆ ಸ್ವೀಕರಿಸಲಿಲ್ಲ ಎಂದರೆ ರಿಶಿ ಮೂಡ್ ಆಫ್ ಮಾಡಿಕೊಳ್ಳುತ್ತಿದ್ದರಂತೆ.ಇತ್ತೀಚೆಗೆ ಟ್ವೀಟ್ಟರ್ ನಲ್ಲಿ, ಟ್ವೀಟ್ ಮಾಡಿದ್ದ ರಿಧಿಮಾ, ತಂದೆಯ ಆರೋಗ್ಯದ ಕುರಿತಂತೆ ಹೇಳಿಕೊಂಡಿದ್ದರು. ರಿಶಿಕಪೂರ್ ಆರಾಮವಾಗಿದ್ದು, ಯಾವುದೇ ಚಿಂತೆ ಇಲ್ಲ ಎಂದು ಅಭಿಮಾನಿಗಳಿಗೆ ಮಾಹಿತಿ ನೀಡಿದ್ದರು. ಅಷ್ಟೇ ಅಲ್ಲದೆ ತನ್ನ ತಂದೆಯ ನೇರನುಡಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ರಿಧಿ, ರಿಶಿ ಕಪೂರ್ ಅಂತಹ ಹಲವು ಮಂದಿ ವ್ಯಕ್ತಿಗಳು ಈಗಿನ ಕಾಲಕ್ಕೆ ಅಗತ್ಯವಿದೆ. ಅವರು ಮನಸ್ಸಿಗೆ ಅಂದುಕೊಂಡಿದ್ದನ್ನು ನೇರವಾಗಿ ಹೇಳುತ್ತಾರೆ ಎಂದಿದ್ದರು.

Tags

Related Articles