ಸುದ್ದಿಗಳು

ಮಹಾರಾಷ್ಟ್ರ ಸಿಎಂ ಪರಿಹಾರ ನಿಧಿಗೆ 25 ಲಕ್ಷ ರೂ ನೀಡಿದ ಸೆಲೆಬ್ರಿಟಿ ಜೋಡಿ

ಮಹಾರಾಷ್ಟ್ರದಲ್ಲಿ ಮೇಘಸ್ಫೋಟದಿಂದ ಉಕ್ಕಿದ ನದಿಗಳು ಉತ್ತರ ಕರ್ನಾಟಕ ಸೇರಿದಂತೆ ಬಹಳಷ್ಟು ಜಿಲ್ಲೆಗಳಲ್ಲಿ ಜಲಪ್ರಳಯ ತಂದಿವೆ. ಇಷ್ಟೇ ಅಲ್ಲದೇ ಇದರಿಂದ ಜನರ ಜೀವನ ಅಸ್ತವ್ಯಸ್ತವಾಗಿದ್ದು, ರೈಲ್ವೆ ಮಾರ್ಗವೂ ಸೇರಿದಂತೆ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗಳೂ ಸಹ ಜಲಾವೃತಗೊಂಡಿವೆ.

ಇದೀಗ ಸರ್ಕಾರದ ಜೊತೆಗೆ ಬಾಲಿವುಡ್ ಕ್ಯೂಟ್ ಕಪಲ್ಸ್ ಗಳಾಗಿರುವ ರಿತೇಶ್ ದೇಶ್ ಮುಖ್ ಜೆನಿಲಿಯಾ ಮಹಾರಾಷ್ಟ್ರ ಪ್ರವಾಹದಲ್ಲಿ ನೊಂದವರಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಬರೋಬ್ಬರಿ 25 ಲಕ್ಷರೂ ನನ್ನು ಧನಸಹಾಯವಾಗಿ ನೀಡಿದ್ದಾರೆ.

ಈಗಾಗಲೇ ಬಹಳಷ್ಟು ನಟ ನಟಿಯರು, ಗಣ್ಯರು, ಸಂಘ ಸಂಸ್ಥೆಗಳು ಪ್ರವಾಹದಲ್ಲಿ ನೊಂದವರಿಗೆ ಸಹಾಯ ಮಾಡುತ್ತಿದ್ದಾರೆ. ಇದೀಗ ರಿತೇಶ್ ಹಾಗೂ ಜೆನೆಲಿಯಾ ನೆರೆಸಂತ್ರಸ್ಥರಿಗೆ ನೆರವಾಗುವ ಸಲುವಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರವರಿಗೆ 25 ಲಕ್ಷ ರೂ ಚೆಕ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಚಿತ್ರದುರ್ಗ ಬದಲು ಬೆಂಗಳೂರಿನಲ್ಲಿ “ಪೈಲ್ವಾನ್” ಆಡಿಯೋ ಲಾಂಚ್…!!!

#maharashtraflood #devendrafadnavis #riteishdeshmukhandgenelia #riteishdeshmukh #genelia

Tags