ಸುದ್ದಿಗಳು

ಗಾಯನಕ್ಕೂ ಸೈ, ನೃತ್ಯಕ್ಕೂ ಜೈ ಎಂದ ಆರ್ ಜೆ ದಿವ್ಯ ಶ್ರೀ

ಮುದಗೊಳಿಸುತ್ತಿರುವ 'ಭೋ ಶಂಭೋ ಶಿವ ಶಂಭೋ' ಹಾಡು

ಬೆಂಗಳೂರು, ಮಾ.13:

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಕೂಡ ಹಲವಾರು ಕಲೆಗಳನ್ನು ತಮ್ಮಲ್ಲಿ ಅಡಗಿಸಿಕೊಂಡಿರುತ್ತಾರೆ. ಆದರೆ ಸರಿಯಾದ ವೇದಿಕೆಗಳಿಲ್ಲದೆ ತಮ್ಮ ಪ್ರತಿಭೆಗಳನ್ನು ತಮಲ್ಲಿಯೇ ಅಡಿಗಿಕೊಂಡಿರುವವರು ಸಾವಿರಾರು ಮಂದಿ. ಅಂತಹುವುದರಲ್ಲಿ ಇಲ್ಲೊಬ್ಬರು ವೈಶಿಷ್ಟ್ಯವೆಂಬಂತೆ ತಾವು ನೃತ್ಯಕ್ಕೂ ಸೈ, ಗಾಯನಕ್ಕೂ ಸೈ, ಹರಳು ಹುರಿದಂತೆ ಮಾತನಾಡುವುದಕ್ಕೂ ಜೈ ಎನ್ನುತ್ತಿದ್ದಾರೆ ಆರ್ ಜೆ ದಿವ್ಯ ಶ್ರೀ.  ಹೌದು, ಇವರು ಸಕಲ ಕಲೆಗಳನ್ನು ಮೈಗೂಡಿಸಿಕೊಂಡಿದ್ದು, ಶಿವರಾತ್ರಿ ಹಬ್ಬದ ಪ್ರಯುಕ್ತ ಸ್ವತಃ ಹಾಡನ್ನು ಹಾಡಿ, ಈ ಹಾಡಿನಲ್ಲಿ ನೃತ್ಯವನ್ನು ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಶಿವನನ್ನು ಆರಾಧಿಸುವ ಭೋ ಶಂಭೋ ಶಿವ ಶಂಭೋ ಹಾಡು

ಆರ್ ಜೆ ದಿವ್ಯ ಶ್ರೀಯವರು ಗಾಯಕಿ ಹಾಗೂ ನೃತ್ಯಗಾರ್ತಿಯೂ ಹೌದು. ಅದರಂತೆ ಇವರು ಬಹಳಷ್ಟು ಸಮಾರಂಭಗಳಲ್ಲಿ ‘ಭೋ ಶಂಭೋ ಶಿವ ಶಂಭೋ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡನ್ನು ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣವೇನೆಂದರೇ, ಈ ಹಾಡಿನಲ್ಲಿರುವ ಸಾಹಿತ್ಯ, ಸಂಗೀತ ಹಾಗೂ ನೆನಪುಗಳ ಸಲುವಾಗಿ ಈ ಹಾಡನ್ನು ಆಯ್ಕೆ ಮಾಡಿಕೊಂಡೆ ಎನ್ನುತ್ತಾರೆ ಅವರು. ಈ ಜನಪ್ರಿಯ ಹಾಡು ಸಂಸ್ಕೃತ ಭಾಷೆಯಲ್ಲಿದ್ದು, ಕರುಣಾರಸವನ್ನು ಹೊಂದಿದೆ.

ಇದೀಗ ಈ ಹಾಡು ಶಿವರಾತ್ರಿ ಹಬ್ಬಕ್ಕೆ ಬಿಡುಗಡೆಯಾಗಿದ್ದು,  ಈ ಹಾಡಿನಲ್ಲಿ ಆರ್ ಜೆ ದಿವ್ಯಾ ನೃತ್ಯದ ಜೊತೆಗೆ ಗಾಯನವನ್ನು ಮಾಡಿದ್ದಾರೆ. ದಿವ್ಯ ಶ್ರೀಯವರ ಪ್ರಸ್ತುತ ಭರತನಾಟ್ಯ ಗುರುಗಳಾದ ಬೆಂಗಳೂರಿನ ಶ್ರೀಮತಿ ರಾಧಿಕಾ ರಾಮಾನುಜನ್ ರವರು ಈ ಹಾಡಿಗೆ  ನೃತ್ಯ  ನಿರ್ದೇಶನ ಮಾಡಿದ್ದಾರೆ. ಹಾಗೂ ಶ್ರೀ ದಯಾನಂದ ಸರಸ್ವತಿ ಸಂಗೀತ ನಿರ್ದೇಶನ ಮಾಡಿದ್ದು, ಸಾಹಿತ್ಯವನ್ನು ಸಹ ಬರೆದಿದ್ದಾರೆ.

ಯಾರು ಈ ದಿವ್ಯ ಶ್ರೀ…?

ಮೂಲತಃ ಚಿತ್ರದುರ್ಗದವರಾದ ದಿವ್ಯ ಶ್ರೀಯವರು ಪ್ರಸ್ತುತ 92.7 ಬಿಗ್ ಎಫ್ ಎಮ್ ನಲ್ಲಿ ರೇಡಿಯೋ ಜಾಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ದಿನ ಮುಂಜಾನೆ 5 ರಿಂದ 7ರವರೆಗೆ ಸುಪ್ರಭಾತ ಕಾರ್ಯಕ್ರಮದಲ್ಲಿ ಹರಳು ಹುರಿದಂತೆ ಮಾತನಾಡಿ ರೆಡಿಯೋ ಕೇಳುಗರಿಗೆ ತಮ್ಮ ಸವಿನಯ ಮಾತುಗಳ ಜೊತೆಗೆ ಭಕ್ತಿಗೀತೆಗಳನ್ನು ಸಿಂಪಡಿಸಿ ಮುಂಜಾನೆಯನ್ನು ಸ್ವಾಗತ ಮಾಡಿಸುತ್ತಾರೆ. ಇವರ ಕಾರ್ಯ ವೈಖರಿಗೆ ಇದೀಗ ನಾಲ್ಕು ವರ್ಷಗಳ ಸಂಭ್ರಮ.

 

ದಿವ್ಯ ಶ್ರೀಯವರು ಕೇವಲ ಆರ್ ಜೆ ಮಾತ್ರವಲ್ಲದೇ ಗಾಯಕಿ ಹಾಗೂ ನೃತ್ಯಗಾರ್ತಿಯೂ ಹೌದು. ಇವರು ಸತತ ಹತ್ತು ವರ್ಷಗಳ ಕಾಲ ಶ್ರೀ ಅಂಜನಾ ನೃತ್ಯ ಕಲಾಕೇಂದ್ರದಲ್ಲಿ ಭರತನಾಟ್ಯ ಅಭ್ಯಾಸ ಮಾಡಿದ್ದಾರೆ. ಇಷ್ಟೇ ಅಲ್ಲದೇ ಇವರ ತಂದೆ ಗಣಪತಿ ಭಟ್ ಮತ್ತು ಶ್ರೀಮತಿ ಮೀನಾಕ್ಷಿ ಭಟ್ ರವರ ಮುದ್ದು ಮಗಳು ಕೂಡ. ಇವರ ತಾಯಿಯೂ ಸಹ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರಾಗಿದ್ದು, ಹಲವಾರು ಮಕ್ಕಳಿಗೆ ಸಂಗೀತ ಶಿಕ್ಷಣವನ್ನು ನೀಡುವ ಇವರೇ ತಮ್ಮ ಗುರುಗಳು ಎನ್ನುತ್ತಾರೆ ದಿವ್ಯ ಶ್ರೀ.

ಇಂತಹ  ಪ್ರತಿಭಾವಂತೆಯಾಗಿರುವ ಇವರಿಗೆ ಮುಂದಿನ ದಿನಗಳಲ್ಲಿ ಉತ್ತಮವಾದ ಅವಕಾಶಗಳನ್ನು ದೊರೆಯಲೆಂದು ಬಾಲ್ಕನಿ ನ್ಯೂಸ್ ಶುಭಹಾರೈಸುತ್ತದೆ.

 

 

ನಿರ್ದೇಶನದತ್ತ ಪುಟ್ಟ ಗೌರಿಯ ರಂಜನಿ

#rjdivyashree #balkaninews #rjdivyashreefacebook #92.7bigfm #radiojackey

Tags