ಸುದ್ದಿಗಳು

ಪ್ರೇಕ್ಷಕರ ಮನಗೆದ್ದ ‘ಮಾಂಗಲ್ಯಂ ತಂತುನಾನೇನಾ’ ತೇಜಸ್ವಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ!!

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ ‘ಮಾಂಗಲ್ಯಂ ತಂತುನಾನೇನಾ’  ಧಾರಾವಾಹಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ?? ಎಲ್ಲರ ಮನಗೆದ್ದಿರುವ ಈ ಧಾರಾವಾಹಿ ಅತೀ ಹೆಚ್ಚು ಟಿ ಆರ್ ಪಿ ಪಡೆದಿದೆ..

ಇಂದು ಧಾರಾವಾಹಿ ನಾಯಕ ‘ತೇಜಸ್ವಿ’ ಅಕಾ ‘ಆರ್ ಕೆ ಚಂದನ್’ ಹುಟ್ಟುಹಬ್ಬ.. ಚೊಚ್ಚಲ ಧಾರಾವಾಹಿಯ ಮೂಲಕ ಎಲ್ಲರ ಮನಗೆದ್ದಿರುವ ಈ ಚೆಲುವನಿಗೆ ಅತೀ ಹೆಚ್ಚು ಫ್ಯಾನ್ ಫಾಲೋವಿಂಗ್ಸ್ ಇದ್ದಾರೆ.. ತೇಜಸ್ವಿಯ ಅಭಿನಯಕ್ಕೆ ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧೆಯವರೆಗೂ ಫಿದಾ ಆಗಿದ್ದಾರೆ…. ಇಂದು ಚಂದನ್ ಅವರ ಹುಟ್ಟು ಹಬ್ಬಕ್ಕೆ ಅನೇಕ ಅಭಿಮಾನಿಗಳು ಶುಭಕೋರುತ್ತಿದ್ದಾರೆ..


ಈಗಿನ ಧಾರಾವಾಹಿಗಳಲ್ಲಿ ತೇಜಸ್ವಿ ಹಾಗೂ ಶ್ರಾವಣಿ ಜೋಡಿ ಎಲ್ಲರ ಫೇವರೇಟ್ ಪೇರ್ ಆಗಿದೆ.. ಇದು ಕಲರ್ಸ್ ಸೂಪರ್ ಹಾಗೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮಾಂಗಲ್ಯಂ ತಂತುನಾನೇನಾ’ ಧಾರಾವಾಹಿಯ ಸದ್ಯದ ಕಥೆ-ವ್ಯಥೆ. ಕಿರುತೆರೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎರಡೂ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಮಾಂಗಲ್ಯಂ ತಂತುನಾನೇನಾ’ ಪ್ರೇಕ್ಷಕರ ಮನಸ್ಸನ್ನು ಗೆದ್ದು ಮುನ್ನುಗ್ಗುತ್ತಿದೆ..

Related image

ಪ್ರತಿ ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 7.30ಕ್ಕೆ ಕಲರ್ಸ್ ಸೂಪರ್ ಕನ್ನಡ ವಾಹಿನಿಯಲ್ಲಿ ‘ಮಾಂಗಲ್ಯಂ ತಂತುನಾನೇನಾ’ ಪ್ರಸಾರವಾಗುತ್ತಿದೆ. ರಾಜಶ್ರೀ ಕ್ಯಾಂಪಸ್ ನಿರ್ಮಾಣದಲ್ಲಿ ರಘುಚರಣ್ ಕಥೆ, ಚಿತ್ರಕಥೆ ಹಾಗೂ ಪ್ರಧಾನ ನಿರ್ದೇಶನವಿರುವ ಈ ಧಾರಾವಾಹಿಗೆ ಯಶವಂತ್ (ಪಾಂಡು) ಸಂಚಿಕೆ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ..

ಕಡಲ ತೀರದಲ್ಲಿ ವಿದ್ಯಾ ಬಾಲನ್ ಹಾಟ್ ಲುಕ್ ಫೋಟೋ ವೈರಲ್

#mangalyamtantunanena #rkchandanbirthday #mangalyamtantunanenaserialyesterdayepisode

Tags