ಸುದ್ದಿಗಳು

ಆರ್.ಕೆ ಸ್ಟೂಡಿಯೋ ಹರಾಜಿಗೆ!!

ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಇದರ ಬಗ್ಗೆ ಅದೇ ವ್ಯಾಮೋಹ ಇದೆಯೋ, ಇಲ್ಲವೋ ಗೊತ್ತಿಲ್ಲ..

ಆರ್.ಕೆ ಸ್ಟುಡಿಯೋ ಎಂದರೆ ಅದು ಬಾಲಿವುಡ್ಸಿನಿಮಾಗಳ ತವರು ಮನೆ ಎಂದೇ ಕರೆಸಿಕೊಳ್ಳುತ್ತದೆ.

ಮುಂಬೈ,ಆ.30: ಬಾಲಿವುಡ್​ ನ ಕಪೂರ್​ ಕುಟುಂಬದ ಪ್ರತಿಷ್ಠೆಯಾಗಿರುವ ಪ್ರಸಿದ್ಧಿ ಪಡೆದಿರುವ ಆರ್​.ಕೆ ಸ್ಟುಡಿಯೋವನ್ನು ಈಗ  ಹರಾಜಿಗೆ ಹಾಕಲು ನಿರ್ಧರಿಸಲಾಗಿದೆ. ಕಪೂರ್ ಫ್ಯಾಮಿಲಿ ಈ ನಿರ್ಧಾರಕ್ಕೆ ಒಪ್ಪಿಗೆ ನೀಡಿದ್ದಾರೆ.

 ಮೂವರು ಸೋದರರಿಗೆ ಭಾವನಾತ್ಮಕ ಸಂಬಂಧ

ಬಾಲಿವುಡ್ ​ಗೆ ಏಳು ದಶಕಗಳಿಗೂ ಹೆಚ್ಚಿನ ಕಾಲ ಜನಪ್ರಿಯ ಸಿನಿಮಾಗಳನ್ನು ನೀಡಿದ ಆರ್.​ಕೆ ಸ್ಟುಡಿಯೋ ಮಾರಾಟಕ್ಕಿರುವುದನ್ನು ಹಿರಿಯ ನಟ ಮತ್ತು ರಾಜ್​ಕಪೂರ್ ಪುತ್ರ ರಿಷಿ ಕಪೂರ್ ಖಚಿತ ಪಡಿಸಿದ್ದಾರೆ. ‘ಈ ಸ್ಟುಡಿಯೋ ಬಗ್ಗೆ ನಾವು ಮೂವರು ಸೋದರರಿಗೆ ಭಾವನಾತ್ಮಕ ಸಂಬಂಧ ಇದೆ. ಆದರೆ, ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಇದರ ಬಗ್ಗೆ ಅದೇ ವ್ಯಾಮೋಹ ಇದೆಯೋ, ಇಲ್ಲವೋ ಗೊತ್ತಿಲ್ಲ. ಮುಂಬೈನಲ್ಲಿ ಅನೇಕ ಜವಳಿ ಮಿಲ್ ​ಗಳು ಎದುರಿಸಿದಂತೆ ಈ ಸ್ಟುಡಿಯೋ ಕೂಡ ಕಾನೂನು ಸಂಘರ್ಷಕ್ಕೆ ಒಳಗಾಗುವುದು ಬೇಡ. ನನ್ನಪ್ಪ ಕೂಡ ಇದನ್ನು ಬಯಸುತ್ತಿರಲಿಲ್ಲ’ ಎಂದು ರಿಷಿ ಹೇಳಿದ್ದಾರೆ.

ಹೌದು, ಆರ್.ಕೆ ಸ್ಟುಡಿಯೋ ಎಂದರೆ ಅದು ಬಾಲಿವುಡ್​ ಸಿನಿಮಾಗಳ ತವರು ಮನೆ ಎಂದೇ ಕರೆಸಿಕೊಳ್ಳುತ್ತದೆ. ಕಪೂರ್​ ಫ್ಯಾಮಿಲಿಯ ಸಿನಿಮಾ ಮಾತ್ರವಲ್ಲದೇ ಇತರ ನಟರ ಸಿನಿಮಾಗಳೂ ಈ ಸ್ಟುಡಿಯೋದಲ್ಲಿ ಚಿತ್ರೀಕರಣವಾಗಿದೆ. ಮುಂಬೈನ ಚೆಂಬೂರ್ ಪ್ರದೇಶದಲ್ಲಿರುವ ಆರ್​.ಕೆ ಸ್ಟುಡಿಯೋದಲ್ಲಿ 1970 ಹಾಗೂ 80ರ ದಶಕದಲ್ಲಿ ನೂರಾರು ಚಿತ್ರಗಳು ಇಲ್ಲಿ ಶೂಟಿಂಗ್​ ನಡೆಸಿವೆ.

Related image
ಇದರ ಬೆಲೆ 500 ಕೋಟಿ!!

ಕೆಲ ತಿಂಗಳ ಹಿಂದೆ ಆರ್​.ಕೆ ಸ್ಟುಡಿಯೋದಲ್ಲಿ ‘ಸೂಪರ್ ಡ್ಯಾನ್ಸರ್ 2’ ಎನ್ನುವ ರಿಯಾಲಿಟಿ ಶೋ ನಡೆಯುವ ಸಂದರ್ಭದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿತ್ತು. ಇದರಿಂದ ಸ್ಟುಡಿಯೋದ ಹಲವು ಭಾಗಗಳು ಹಾನಿಗೊಳಗಾಗಿದೆ. ಅಷ್ಟೇ ಅಲ್ಲದೆ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದೆ.
ಯಾವುದೇ ಚಿತ್ರತಂಡ ಆರ್.ಕೆ. ಸ್ಟುಡಿಯೋದತ್ತ ತೆರಳಲು ಮನಸು ಮಾಡುತ್ತಿಲ್ಲ. ಪರಿಣಾಮ ಸ್ಟುಡಿಯೋ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ರಂಧೀರ್ ಕಪೂರ್ ಹೇಳಿದ್ದಾರೆ.  1948ರಲ್ಲಿ ರಾಜ್​ ಕಪೂರ್ ನಿರ್ಮಾಣ ಮಾಡಿದ್ದ ಆರ್​.ಕೆ. ಸ್ಟುಡಿಯೋವನ್ನ ಹರಾಜಿಗೆ ಇಡಲಾಗುತ್ತಿದ್ದು ಮೂಲ ಬೆಲೆಯನ್ನು 500 ಕೋಟಿ ಎಂದು ನಿಗದಿಪಡಿಸಲಾಗಿದೆ.

 

Tags

Related Articles