ಸುದ್ದಿಗಳು

ಮುಂದಿನ ಚಿತ್ರಕ್ಕಾಗಿ ಲುಕ್ ಬದಲಿಸಿಕೊಂಡ ರೋರಿಂಗ್ ಸ್ಟಾರ್

ಸತತ ನಾಲ್ಕು ಸೂಪರ್ ಹಿಟ್ ಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ರೋರಿಂಗ್ ಸ್ಟಾರ್ ಶ್ರೀ ಮುರುಳಿ ಮತ್ತೊಂದು ಹೈ ಬಜೆಟ್ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಸುದ್ದಿಯಾಗಿರುವಂತೆ ಅವರು ‘ಮದಗಜ’ ಚಿತ್ರದಲ್ಲಿ ನಟಿಸುತ್ತಿದ್ದು, ‘ಅಯೋಗ್ಯ’ ಖ್ಯಾತಿಯ ಮಹೇಶ್ ಗೌಡ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಈಗಾಗಲೇ ಚಿತ್ರಕ್ಕಾಗಿ ವಿದೇಶದಲ್ಲಿ ಲೊಕೇಶನ್ ನಡೆಸಲಾಗಿದ್ದು, ಸದ್ಯದಲ್ಲಿಯೇ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ. ಇನ್ನು ಚಿತ್ರದಲ್ಲಿ ಶ್ರೀಮುರುಳಿ ಭಾರತದ ದೊಡ್ಡ ಶ್ರೀಮಂತನ ವ್ಯಕ್ತಿಯ ಪಾತ್ರದಲ್ಲಿ ನಟಿಸಲಿದ್ದಾರೆ.

ಈ ಹಿಂದಿನ ಸಿನಿಮಾಗಳಲ್ಲಿ ಶ್ರೀಮುರುಳಿ ಉದ್ದನೆಯ ಗಡ್ಡ ಮತ್ತು ಕೂದಲು ಬಿಟ್ಟಿದ್ದರು. ‘ಮದಗಜ’ ಚಿತ್ರಕ್ಕಾಗಿ ಅವರು ಲುಕ್ ಬದಲಿಸಿಕೊಂಡಿದ್ದಾರೆ. ಈ ಚಿತ್ರವನ್ನು ಉಮಾಪತಿ ಶ್ರೀನಿವಾಸ್ ನಿರ್ಮಿಸುತ್ತಿದ್ದು, ಚಿತ್ರವನ್ನು ಬಹುತೇಕ ವಿದೇಶದಲ್ಲಿಯೇ ಚಿತ್ರೀಕರಣ ಮಾಡಲಾಗುತ್ತದೆ.

‘ಲಗ್ ಜಾ ಗಲೇ’ ಎಂದು ಹಾಡಿದ 2 ವರ್ಷದ ಪುಟ್ಟ ಬಾಲಕಿ

#RoaringStar #SriMurali #SriMuraliMovies #Madagaja

Tags