ಸುದ್ದಿಗಳು

2020 ರ ಬೇಸಿಗೆಗೆ ಬರಲಿದ್ದಾನೆ ‘ರಾಬರ್ಟ್’ !!

ಬೆಂಗಳೂರು,ಮಾ.21

: ಪ್ರಸ್ತುತ ದರ್ಶನ್ ‘ಒಡೆಯಾ’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರೂ ಸಹ, ಮುಂದಿನ ಚಿತ್ರದಲ್ಲಿ ನಟಿಸಲು ರೆಡಿಯಾಗುತ್ತಿದ್ದಾರೆ ದರ್ಶನ್, ತರುಣ್ ಸುಧೀರ್ ಜತೆಯಾಗಿ ತಯಾರಿಸುತ್ತಿರುವ ಚಿತ್ರ “ರಾಬರ್ಟ್ ನಲ್ಲಿ ಸಹ ತಾವು ಅಭಿನಯಿಸುವುದು ಖಾತ್ರಿ ಪಡಿಸಿದ್ದಾರೆ.. ಏಪ್ರಿಲ್ 19 ರಂದು ಈ ಚಿತ್ರದ ಸೆಟ್ಟೇರಲಿದ್ದು ನಿರ್ದೇಶಕ ಈಗಾಗಲೇ ಚಿತ್ರ ಬಿಡುಗಡೆ ದಿನಾಂಕವನ್ನು ನಿಗದಿಪಡಿಸಿದ್ದಾರೆ. ರಾಬರ್ಟ್ 2020 ರ ಬೇಸಿಗೆಯಲ್ಲಿ ತೆರೆ ಕಾಣಲಿದೆ ಎಂದಿದ್ದಾರೆ

ಯುಗಾದಿ ಮುಗಿದ ನಂತರ ದರ್ಶನ್ ಫೋಟೋ ಶೂಟ್

ಪ್ರಸ್ತುತ, ನಟ –ನಟಿಯರ ಆಯ್ಕೆ ನಡೆದಿದೆ.. ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್ ಗಳಿಂದ ಈಗಾಗಲೇ ಸದ್ದು ಮಾಡಿದೆ..  ಯುಗಾದಿ ಮುಗಿದ ನಂತರ ದರ್ಶನ್ ಫೋಟೋ ಶೂಟ್ ಮಾಡಲು ಯೋಜಿಸಿದ್ದಾರೆ ನಿರ್ದೇಶಕರು..

Related image

ಮೊದಲ ವೇಳಾಪಟ್ಟಿ ಬೆಂಗಳೂರಿನಿಂದ

ಚಿತ್ರದ ಮೊದಲ ವೇಳಾಪಟ್ಟಿ ಬೆಂಗಳೂರಿನಿಂದ ಆರಂಭವಾಗಲಿದ್ದು, 45 ದಿನಗಳ ವಿಸ್ತಾರವಾಗಲಿದೆ ಚೆನ್ನೈ, ಹೈದರಾಬಾದ್ ಮತ್ತು ವಿಶಾಖಪಟ್ಟಣಂನಲ್ಲಿ ಚಿತ್ರೀಕರಣಗೊಳ್ಳಲಿದೆ. ಉಮಾಪತಿ ಫಿಲ್ಮ್ಸ್ ನಿರ್ಮಾಣದ “ರಾಬರ್ಟ್” ಚಿತ್ರಕ್ಕೆ ಚಂದ್ರಮೌಳಿ ಹಾಗೂ ಕೆ.ಎಲ್. ರಾಜಶೇಖರ್ ಸಂಬಾಷಣೆ ಬರೆಯಲಿದ್ದಾರೆ. ಸುಧಾಕರ್ ಜೈನ್ ಛಾಯಾಗ್ರಹಣ, ಮೋಹನ್ ಬಿ. ಕೆರೆ ಕಲಾ ನಿರ್ದೇಶನ, ಕೀಂ ಪ್ರಕಾಶ್ ಸಂಕಲನ ಈ ಚಿತ್ರಕ್ಕಿದ್ದು ಚಿತ್ರಕ್ಕೆ ಸಂಗೀತ ನಿರ್ದೇಶಕರನ್ನು ಇನ್ನೂ ಆಯ್ಕೆ ಅಂತಿಮವಾಗಬೇಕಿದೆ.

ಇವರೇ 777 ಚಾರ್ಲಿ’ ಯ ಎರಡು ಮುಗ್ಧ ಮನಸ್ಸುಗಳು !!

 

Tags