ಸುದ್ದಿಗಳು

ಮೂರನೇ ಚಿತ್ರದಲ್ಲಿ ಒಂದಾದ ಡಿ-ಬಾಸ್ ದರ್ಶನ್ ಹಾಗೂ ಅರ್ಜುನ್ ಜನ್ಯ

ಅರ್ಜುನ್ ಜನ್ಯ.. ಕನ್ನಡ ಚಿತ್ರರಂಗದಲ್ಲಿ ಮ್ಯಾಜಿಕಲ್ ಕಂಪೋಸರ್ ಆಗಿ 100 ಕ್ಕೂ ಹೆಚ್ಚಿನ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡುವುದರೊಂದಿಗೆ ಜನಪ್ರಿಯವಾದವರು. ಈಗಾಗಲೇ ಅನೇಕ ಯಶಸ್ವಿ ಚಿತ್ರಗಳಿಗೆ ಸಂಗೀತ ನೀಡಿರುವ ಇವರೀಗ ಮತ್ತೊಂದು ದೊಡ್ಡ ಚಿತ್ರಕ್ಕೆ ಸಂಗೀತ ಸಂಯೋಜಿಸುವ ಅವಕಾಶವನ್ನು ಪಡೆದಿದ್ದಾರೆ.

ಹೌದು, ಡಿ- ಬಾಸ್ ದರ್ಶನ್ ನಟಿಸುತ್ತಿರುವ ‘ರಾಬರ್ಟ್’ ಚಿತ್ರವು ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಆರಂಭವಾಗಿದ್ದರೂ ಸಹ ನಾಯಕಿ ಸೇರಿದಂತೆ ಉಳಿದ ತಾರಾಗಣದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಇದೇ ವೇಳೆ ಈ ಚಿತ್ರಕ್ಕೆ ಸಂಗೀತ ನಿರ್ದೇಶಕರು ಯಾರು ಎಂಬುದು ದೊಡ್ಡ ಚರ್ಚೆ ನಡೆದಿತ್ತು.

ಅಂದ ಹಾಗೆ ಸದ್ಯ ಕೇಳಿ ಬಂದಿರುವ ಮಾಹಿತಿಗಳ ಪ್ರಕಾರ ‘ರಾಬರ್ಟ್’ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಲಿದ್ದಾರೆ. ಈ ಮೂಲಕ ದರ್ಶನ್ ನಟನೆಯ ‘ಚಕ್ರವರ್ತಿ’ ಮತ್ತು ‘ತಾರಕ್’ ಬಳಿಕ ‘ರಾಬರ್ಟ್’ ಚಿತ್ರಕ್ಕೆ ಸಂಗೀತ ಸಂಯೋಜಿಸುವ ಅವಕಾಶವನ್ನು ಪಡೆದಿದ್ದಾರೆ. ಈ ಮೂಲಕ ಈ ಜೋಡಿ ಹ್ಯಾಟ್ರಿಕ್ ಆಗಲಿದೆ.

ಸಾಮಾನ್ಯವಾಗಿ ದರ್ಶನ್ ಚಿತ್ರಗಳಿಗೆ ವಿ. ಹರಿಕಷ್ಣ ಸಂಗೀತ ನೀಡುತ್ತಿದ್ದರು. ಆದರೆ, ಅವರೀಗ ‘ಯಜಮಾನ’ ಚಿತ್ರವು ಯಶಸ್ವಿ ಶತ ದಿನ ಪೂರೈಸಿರುವುದರಿಂದ ಹೊಸ ಚಿತ್ರದ ಸಿದ್ದತೆಯಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ಸಂಗೀತ ಸಂಯೋಜನೆಯೊಂದಿಗೆ ಕಥಾರಚನೆಯಲ್ಲಿ ಬ್ಯುಸಿಯಿದ್ದಾರೆ.

ಅಲ್ಲದೇ ತರುಣ್ ಸುಧೀರ್ ಮತ್ತು ಅರ್ಜುನ್ ಜನ್ಯ ನಡುವೆ ಒಳ್ಳೆಯ ನಂಟು ಇದೆ. ತರುಣ್ ಗೆ ಸಂಬಂಧ ಪಟ್ಟ ‘ರಾಂಬೋ’ ‘ವಿಕ್ಟರಿ’, ‘ರನ್ನ’, ‘ಚೌಕ’,’ವಿಕ್ಟರಿ 2′ ಇನ್ನು ಕೆಲವು ಸಿನಿಮಾಗಳಿಗೆ ಸಂಗೀತ ನೀಡಿದವರು ಅರ್ಜುನ್ ಜನ್ಯ. ಹೀಗಾಗಿ ‘ರಾಬರ್ಟ್’ ಚಿತ್ರಕ್ಕೂ ಅವರೇ ಸಂಗೀತ ನೀಡುತ್ತಿದ್ದಾರೆ.

ಪತ್ನಿ ಹಾಗೂ ಸ್ನೇಹಿತರ ಜೊತೆ ಕ್ರಿಕೆಟ್ ಆಡಲು ಲಂಡನ್ ಗೆ ತೆರಳಿದ ಸುದೀಪ್

#robert,#film, #arjunjanya, #balkaninews #filmnews, #kanandasuddigalu, #darshan

Tags