ಸುದ್ದಿಗಳು

ಕೊನೆಗೂ ತಮ್ಮ ಅದೃಷ್ಟದ ಮನೆ ಖಾಲಿ ಮಾಡಿದ ರಾಕಿಂಗ್ ಸ್ಟಾರ್ ಯಶ್…!!!

ನಟ ಯಶ್ ಸಿನಿಮಾಗಳಿಂದ ಬಹಳಷ್ಟು ಸುದ್ದಿಯಾದವರು. ಇತ್ತೀಚೆಗೆ ಬಿಡುಗೆಯಾದ ‘ಕೆಜಿಎಫ್’ ಸಿನಿಮಾ ಯಶ್‌ ರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಇದೆಲ್ಲದರ ನಡುವೆ ಕಪ್ಪು ಚುಕ್ಕಿ ಎಂಬಂತೆ ಯಶ್ ಮನೆ ವಿವಾದ ಒಂದು ಅಂಟಿಕೊಂಡಿತ್ತು. ಸದ್ಯ ಈ ಮನೆ ವಿವಾದಕ್ಕೆ ಯಶ್ ತೆರೆ ಎಳೆದಿದ್ದಾರೆ.

ಮನೆ ವಿವಾದಕ್ಕೆ ಮಂಗಳ ಹಾಡಿದ ಯಶ್

ಬನಶಂಕರಿಯ ಮೂರನೇ ಹಂತದ ಮೂರನೇ ಬ್ಲಾಕ್‌ನ ಆರನೇನೇ ಅಡ್ಡರಸ್ತೆಯಲ್ಲಿರುವ ಮನೆಯಲ್ಲಿ ಯಶ್ ಅವರ ಕುಟುಂಬ ಬಾಡಿಗೆಗೆ ಇತ್ತು. ಆದರೆ ಈ ಹಿಂದೆ ಮನೆಯ ಮಾಲೀಕರು ಯಶ್ ಅವರ ಕುಟುಂಬ ಬಾಡಿಗೆ ನೀಡುತ್ತಿಲ್ಲ, ಬಾಡಿಗೆ ಹಣವನ್ನೂ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಕೋರ್ಟ್ ಮೆಟ್ಟಿಲೇರಿದ್ದರು. ಈ ಹಿಂದೆ ನ್ಯಾಯಾಲಯ ಜನವರಿ ಒಳಗೆ ಮನೆ ಮಾಲೀಕರಿಗೆ 23 ಲಕ್ಷ ನೀಡಿ, ಮನೆ ಖಾಲಿ ಮಾಡುವಂತೆ ಯಶ್ ಅವರಿಗೆ ಆದೇಶ ನೀಡಿತ್ತು. ಆದೇಶದಂತೆ ಯಶ್ ಕುಟುಂಬ ಮಾರ್ಚ್ ಒಳಗೆ ಮನೆ ಖಾಲಿ ಮಾಡಬೇಕಿತ್ತು. ಆದರೆ ಯಶ್ ತಾಯಿ ಪುಷ್ಪಾ ಅವರು ಮತ್ತೊಂದು ಅರ್ಜಿಯ ಮೂಲಕ ಹಾಸನದಲ್ಲಿ ಹೊಸ ಮನೆ ನಿರ್ಮಾಣ ಮಾಡಲಾಗುತ್ತಿದ್ದು, ಇಡೀ ಕುಟುಂಬ ಅಲ್ಲಿಗೆ ಹೋಗಲು ನಿರ್ಧರಿಸಿದ್ದೇವೆ. ಮನೆ ನಿರ್ಮಾಣ ಕಾರ್ಯ ಮುಗಿಯಲು 6 ತಿಂಗಳು ಬೇಕು. 6 ತಿಂಗಳಿಗೆ ಬಾಡಿಗೆ ಮನೆ ಹುಡುಕಲು ಕಷ್ಟ. ಹೀಗಾಗಿ ಮನೆ ಖಾಲಿ ಮಾಡಲು 6 ತಿಂಗಳು ಕಾಲಾವಕಾಶ ಬೇಕು ಎಂದಿದ್ದರು. ಅದರಂತೆ 6 ತಿಂಗಳ ಕಾಲಾವಕಾಶ ನೀಡಲಾಗಿತ್ತು.

ಮಾಲಿಕರ ಕೈಗೆ ಮನೆ ಕೀ

ಇನ್ನೂ ಕೋರ್ಟ್ ಮತ್ತೆ ಮೇ 31 ರವರೆಗೆ ಕಾಲಾವಕಾಶ ನೀಡಿತ್ತು. ಆದರೆ ಮೇ ತಿಂಗಳು ಕಳೆದರೂ ಯಶ್ ಮನೆ ಕಾಲಿ ಮಾಡಿರಲಿಲ್ಲ. ಇದೀಗ ಮನೆ ಮಾಲೀಕರು ಮತ್ತೆ ಕೋರ್ಟ್ ಮೆಟ್ಟಿಲೇರಲು ಸಜ್ಜಾಗಿದ್ದರು ಎನ್ನಲಾಗಿದೆ. ಅಷ್ಟರಲ್ಲಿ, ಇಂದು ಯಶ್ ಕುಟುಂಬ ಮನೆ ಖಾಲಿ ಮಾಡಿ ಕೀಯನ್ನು ಮನೆ ಮಾಲೀಕರಿಗೆ ಹಸ್ತಾಂತರಿಸಿದೆ. ಸದ್ಯ ಪತ್ರದ ಮೂಲಕ ಮನೆ ವಿವಾದ ಅಂತ್ಯ ಗೊಂಡಿದೆ. ಇಂದು ಯಶ್ ಪರ ವಕೀಲರು ಕೋರ್ಟ್ ಆದೇಶದ ಪ್ರಕಾರ ಎರಡು ತಿಂಗಳು ಬಾಡಿಗೆ 80 ಸಾವಿರ ರೂಪಾಯಿಗಳ ಡಿಡಿಯನ್ನು ಮನೆ ಮಾಲೀಕರಿಗೆ ನೀಡಿದ್ದಾರೆ. ಇದರ ಜೊತೆಗೆ  ಮನೆಯ ಕೀ ಕೂಡ ಮನೆ ಮಾಲೀಕರಿಗೆ ಹಸ್ತಾಂತರ ಮಾಡಿದ್ದಾರೆ. ಈ ಮೂಲಕ ಮನೆ ವಿವಾದಕ್ಕೆ ಮಂಗಳ ಹಾಡಿದ್ದಾರೆ ನಟ ಯಶ್.

Image result for yash house

‘ದಂಡುಪಾಳ್ಯಂ 4’ ರಲ್ಲಿ ಯಂಗ್ ಕಿಚ್ಚ ಸುದೀಪ್

#balkaninews #yashmovies #yashhits #yashtwitter #yashinstagram

Tags