ಸುದ್ದಿಗಳು

‘ಪಂಚತಂತ್ರ’ ಟ್ರೇಲರ್ ಲಾಂಚ್ ಮಾಡಲಿರುವ ರಾಕಿಂಗ್ ಸ್ಟಾರ್

ಬೆಂಗಳೂರು, ಮಾ.18:

‘ಪಂಚತಂತ್ರ’ ಸಿನಿಮಾ ಸದ್ಯ ಹಲವಾರು ವಿಚಾರಗಳಿಂದ ಸುದ್ದಿಯಲ್ಲಿದೆ. ಈಗಾಗಲೇ ಸಿನಿಮಾ ಹಾಡುಗಳು, ಪೋಸ್ಟರ್ ಗಳು ಸಕ್ಕತ್ ಸೌಂಡ್ ಮಾಡ್ತಾ ಇವೆ. ಅಷ್ಟೇ ಅಲ್ಲ ಸಿನಿಮಾ ಹಾಡುಗಳಂತೂ ಟ್ರೆಂಡಿಂಗ್ ನಲ್ಲಿ ಬಂದಿದ್ದೂ ಇದೆ.‌ ಇನ್ನೂ ಈ ಸಿನಿಮಾ ಬಿಡುಗಡೆಗೆ ಸಿದ್ದವಾಗಿರುವ ಬೆನ್ನಲ್ಲೇ ಟ್ರೇಲರ್ ಲಾಂಚ್ ಗೆ ಸಿದ್ದತೆ ಮಾಡಿಕೊಂಡಿದೆ ಚಿತ್ರತಂಡ.

‘ಪಂಚತಂತ್ರ’ ಟ್ರೇಲರ್ ಲಾಂಚ್ ಗೆ ಮುಹೂರ್ತ ಫಿಕ್ಸ್

ಯೋಗರಾಜ್ ಭಟ್ ಅವರ ಸಿನಿಮಾ ಅಂದರೆ ವಿಶೇಷ ಇದ್ದೇ ಇರುತ್ತದೆ. ಸಾಮಾನ್ಯವಾಗಿ ವಿಕಟ ಕವಿಯ ಸಿನಿಮಾಗಳಲ್ಲಿ ತರಲೆ, ಜೋಕ್ಸ್, ರೊಮ್ಯಾಂಟಿಕ್ ಹೀಗೆ ಎಲ್ಲವೂ ಒಂದೇ ಕಥೆಯಲ್ಲಿ ಬರುತ್ತದೆ. ಇದೀಗ ಅವರ ನಿರ್ದೇಶನದ ಪಂಚತಂತ್ರ ಸಿನಿಮಾದಲ್ಲೂ ಕೂಡ ಎಲ್ಲವೂ ಒಳಗೊಂಡಿದೆ ಅನ್ನೋದು ಬಿಡುಗಡೆಯಾದ ಹಾಡುಗಳು, ಪೋಸ್ಟರ್ ಗಳಿಂದಲೇ ತಿಳಿಯಬೇಕು.

ಯಶ್ ರಿಂದ ಟ್ರೇಲರ್ ಲಾಂಚ್

ಇನ್ನೂ ಸದ್ಯ ಬಿಡುಗಡೆಗೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಇದೀಗ ಈ ಸಿನಿಮಾ ಟ್ರೇಲರ್ ನನ್ನು ಇದೇ ಮಾರ್ಚ್ 19ರಂದು ಸಂಜೆ 7 ಗಂಟೆಗೆ ಯಶ್ ಲಾಂಚ್ ಮಾಡಲಿದ್ದಾರೆ. ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಯೋಗರಾಜ್ ಭಟ್, ಇದೇ ಮಾರ್ಚ್ 19 ರಂದು ಪಂಚತಂತ್ರದ ಟ್ರೇಲರ್ ನೋಡ್ತಾ ಒಂದು ಅದ್ಭುತ ಗೇಮ್ ಆಡವಾಡಬಹುದು. ಪ್ರೀತಿಯ ಯಶ್ ಜೊತೆ ಲೈವ್ ನಲ್ಲಿ ಜೊತೆಯಾಗಿರ್ತಾರೆ ಜೈ ಪಂಚತಂತ್ರ ಎಂದು ಬರೆದುಕೊಂಡಿದ್ದಾರೆ.

ಪ್ರಾನ್ಸ್ ಫಿಲಮ್ ಫೆಸ್ಟಿವಲ್ ನಲ್ಲಿ ಪ್ರಶಸ್ತಿ ಬಾಚಿಕೊಳ್ಳುತ್ತಾ ಕನ್ನಡದ ‘ಬಿಂಬ’

#balkaninews #sandalwood #panchatantrakannadamovie #kannadamovies #yash #trailer

Tags