ಸುದ್ದಿಗಳು

‘ಗಡ್ಡ’ ತೆಗೆಯೋಕೆ ಮುಹೂರ್ತ ಫಿಕ್ಸ್ ಮಾಡಿದ ‘ರಾಕಿಂಗ್ ಸ್ಟಾರ್’…!

ಬೆಂಗಳೂರು, ಆ.19:  ‘ನಾವ್ ಬರೋವರೆಗೂ ಮಾತ್ರ ಬೇರೆಯವ್ರ ಹವಾ, ನಾವು  ಬಂದ್ಮೇಲೆ ನಮ್ದೆ ಹವಾ’  ಅನ್ನೋ ಡೈಲಾಗ್ ಮೂಲಕ ಗಾಂಧಿನಗರದಲ್ಲಿ ಸುದ್ದಿಯಾದವರು ರಾಕಿಂಗ್ ಸ್ಟಾರ್ ಯಶ್. ಕಳೆದ ಎರಡು ವರ್ಷಗಳಿಂದ ‘ಕೆಜಿಎಫ್’ ಸಿನಿಮಾದಲ್ಲಿ ಯಶ್ ತಮ್ಮನ್ನು ತಾವು ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು.

ನಿನ್ನೆಯಷ್ಟೇ ‘ಕೆಜಿಎಫ್’ ಚಿತ್ರೀಕರಣ ಕೊನೆಗೊಂಡಿದ್ದು, ಇದರ ಸಲುವಾಗಿ ಇಡೀ ಚಿತ್ರತಂಡ ಸಂಭ್ರಮದಿಂದ, ಕೇಕ್ ಕತ್ತರಿಸಿದ್ದರು. ಈ ಮೂಲಕ  ‘ಕೆಜಿಎಫ್’ ಚಿತ್ರದಲ್ಲಿ ಹಗಲಿರುಳು ದುಡಿದ ಸಿಬ್ಬಂದಿಗಳಿಗೆ ಔತಣ ಕೂಟ ನೀಡಿ  ಚಿತ್ರೀಕರಣ ಕೊನೆಗೊಂಡಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು .

 

 

ಯಶ್ ‘ಕೆಜಿಎಫ್’ ಸಿನಿಮಾಗಾಗಿ ಸತತ ಎರಡು ವರ್ಷಗಳಿಂದ ತಮ್ಮ ಕೂದಲು ಮತ್ತು ಗಡ್ಡವನ್ನು ಬಿಟ್ಟಿದ್ದರು, ಈಗ ಆ ಗಡ್ಡವನ್ನು ತೆಗೆಯಲೂ ಕಾಲ ಕೂಡಿಬಂದಿದೆ. ಹೌದು, ಯಶ್ ತಮ್ಮ ಗಡ್ಡವನ್ನು ತೆಗೆಯಲು ನಿರ್ಧಾರ ಮಾಡಿದ್ದಾರಂತೆ. ಇದೇ ಸಮಯದಲ್ಲಿ ಮಾಧ್ಯಮಮಿತ್ರರು ಯಶ್ ನಿಮ್ಮ ಕೂದಲು ಮತ್ತು ಗಡ್ಡವನ್ನು ಯಾವಾಗ ತೆಗೆಯುತ್ತಿರಾ? ಎಂದು ಕೇಳಿದ ಪ್ರಶ್ನೆಗೆ , ‘ನಾಡಿದ್ದು ಗಡ್ಡ ಡಮಾರ್’ ಎನ್ನುವ ಮೂಲಕ  ಯಶ್ ನಗೆಯ ಉತ್ತರ ನೀಡಿ, ಅಭಿಮಾನಿಗಳಿಗೆ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

Tags

Related Articles