ಸುದ್ದಿಗಳು

‘ಭಾಯಿ ಈಸ್ ಬಾಯ್’ ಎಂದು ರೋಹಿತ್ ಗೆ ಹೇಳಿದ್ದು ಯಾರು?

ರೋಹಿತ್ ಶೆಟ್ಟಿಗೆ ಅಭಿನಂದನೆ ...!

ಬೆಂಗಳೂರು,ನ,23: ಈಗಾಗಲೇ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗಿದೆ. ಮದುವೆಗಿಂತ ಮೊದಲು ರಣವೀರ್ ಸಿಂಗ್ ‘ಸಿಂಬಾ’ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಿದ್ದರು. ಸಿಂಬಾ ಚಿತ್ರಕ್ಕಾಗಿ ತೂಕ ಹೆಚ್ಚಿಸಿದ್ದ ರಣವೀರ್ ಮದುವೆಗಾಗಿ ತೂಕ ಇಳಿಸಿದ್ರು.

ಫಿಟ್ ಅಂಡ್ ಸ್ಮಾರ್ಟ್ ರಣವೀರ್….!

ಪ್ರತಿ ಫೋಟೋದಲ್ಲಿ ಫಿಟ್ ಎಂಡ್ ಸ್ಮಾರ್ಟ್ ಆಗಿ ಕಾಣ್ತಿದ್ದಾರೆ ರಣವೀರ್. ಚಿತ್ರಕ್ಕೊಂದೇ ಅಲ್ಲ ಪರ್ಸನಲ್ ಲೈಫ್ ಗೆ ಹೆಚ್ಚು ಮಹತ್ವ ನೀಡುವ ರಣವೀರ್, ಮದುವೆ ಶುಭ ಸಂದರ್ಭದಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ದೀಪಿಕಾ ಪಡುಕೋಣೆ ಜೊತೆಗೆ ಆರತಕ್ಷತೆ ಕಾರ್ಯಕ್ರಮ ಮುಗಿಸಿದ ಬಾಲಿವುಡ್ ನಟ ರಣವೀರ್ ಸಿಂಗ್ , ತಾವೂ ಅಭಿನಯಿಸಿರುವ  ‘ಸಿಂಬಾ’ ಚಿತ್ರದ ನಿರ್ದೇಶಕ ರೋಹಿತ್ ಶೆಟ್ಟಿ ಜೊತೆಗಿನ ಅನುಭವವನ್ನು ಹಂಚಿಕೊಂಡಿದ್ದಾರೆ.

Related image

ರೋಹಿತ್ ಶೆಟ್ಟಿಗೆ ಅಭಿನಂದನೆ …!

ಹೌದು,’ ಭಾಯಿ ಈಸ್ ಬಾಯ್’ ಎಂಬ ಅಡಿಬರಹದಲ್ಲಿ ರೋಹಿತ್ ಶೆಟ್ಟಿಗೆ ಅಭಿನಂದನೆ ಸಲ್ಲಿಸಿ ವಿಡಿಯೋ ಶೇರ್ ಮಾಡಿದ್ದಾರೆ.ರೋಹಿತ್ ಶೆಟ್ಟಿ ನಿರ್ದೇಶನದ ‘ಸಿಂಬಾ’ ಸಿನಿಮಾ ಚಿತ್ರೀಕರಣದ ಕೊನೆಯ ದಿನ ಹೇಗೆ ಕಾಣಿಸಿಕೊಳ್ಳುತ್ತಿದ್ದರು ಎಂಬುದನ್ನು ಈ ವಿಡಿಯೋದಲ್ಲಿ ರಣವೀರ್ ಹೇಳಿಕೊಂಡಿದ್ದಾರೆ. ರೋಹಿತ್ ಶೆಟ್ಟಿ ಅವರೊಂದಿಗೆ ಕೆಲಸ ಮಾಡುವ ಅವಕಾಶಕ್ಕಾಗಿ ಕಾಯುತ್ತಿದ್ದೆ.  ಆ ಸುರ್ವಣಕಾಶವನ್ನು ಅಂತಿಮವಾಗಿ ಪಡೆದೆ. ನಾನು ಏನು ನಿರೀಕ್ಷೆ ಮಾಡಿದ್ದೇನೂ ಅದಕ್ಕಿಂತಲೂ ಸಾವಿರ ಪಟ್ಟು ಹೆಚ್ಚಿಗೆ ಸಿಕ್ಕಿತು. ರೋಹಿತ್ ಶೆಟ್ಟಿ ಅವರ ಅತ್ಯಂತ ದೊಡ್ಡ ಅಭಿಮಾನಿಯಂತೆ  ರಣ್ವೀರ್ ಮುಂಬೈಯಲ್ಲಿ ರಣವೀರ್ ಅವರ ಆರತಕ್ಷತೆ ಕಾರ್ಯಕ್ರಮ ಮುಗಿದ ಬಳಿಕ ಡಿಸೆಂಬರ್ 3 ರಂದು  ಸಿಂಬಾ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆಯಂತೆ.ಸಿಂಬಾ ತೆಲುಗು ಚಿತ್ರ ‘ಟೆಂಪರ್’ ಚಿತ್ರದ ರಿಮೇಕ್ ಆಗಿದ್ದು, ಡಿಸೆಂಬರ್ 28 ರಂದು ತೆರೆ ಮೇಲೆ ಮೂಡಿಬರಲಿದೆ.

Tags