ಸುದ್ದಿಗಳು

ನಟಿ ರೂಪಿಕಾಗೆ ‘ಕನ್ನಡ ಸೇವಾ ರತ್ನ’ ಪ್ರಶಸ್ತಿ

ಚಲನಚಿತ್ರ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವುದಕ್ಕಾಗಿ ಸಿಕ್ಕ ಗೌರವ

ಬೆಂಗಳೂರು.ಏ.16: ಸಾಧನೆ ಎನ್ನುವುದು ಸುಮ್ಮನೇ ಕುಳಿತಲ್ಲಿಗೆ ಬಂದು ಬೀಳುವ ವಸ್ತುವಲ್ಲ, ಮಂತ್ರ ಮಾಜಿಕ್ ಗಳಿಂದ ಸಿಗುವಂತದ್ದಲ್ಲ. ಅದಕ್ಕೆ ತಕ್ಕಂತ ಪರಿಶ್ರಮ ಇರಬೇಕು. ಹಠ ಮತ್ತು ಗುರಿಯನ್ನು ಮುಟ್ಟುವ ಛಲವೂ ಇರಬೇಕು. ಅದೇ ರೀತಿ ಚಿತ್ರರಂಗದಲ್ಲಿ ನಟನೆಯ ಮೂಲಕ ತನ್ನಲ್ಲಿರುವ ವಿಶೇಷ ಪ್ರತಿಭೆಯಾದ ನೃತ್ಯವನ್ನೂ ಪ್ರಸ್ತುತ ಪಡಿಸುತ್ತಾರೆ ರೂಪಿಕಾ.

ಅಂದ ಹಾಗೆ ರೂಪಿಕಾ ನೃತ್ಯ ಹಾಗೂ ಅಭಿನಯ ಎರಡನ್ನೂ ಸಮನಾಗಿ ತೂಗಿಸಿಕೊಂಡು ಬರುತ್ತಿದ್ದಾರೆ. ಈಗಾಗಲೇ ಇವರ ನೃತ್ಯಕ್ಕೆ ಸಾಕಷ್ಟು ಪ್ರಶಸ್ತಿಗಳು ಒಲಿದುಬಂದಿದ್ದು 3000 ಹೆಚ್ಚು ಪ್ರಶಸ್ತಿ ಹಾಗೂ ಬಹುಮಾನಗಳು ಇವರ ಜೊತೆಯಲ್ಲಿವೆ.

2008ರಲ್ಲಿ ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ, 2010ರಲ್ಲಿ ಅಸಾಧಾರಣ ಪ್ರತಿಭೆ ಪ್ರಶಸ್ತಿ, 2014ರಲ್ಲಿ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ವಿಶ್ವ ಮಾನ್ಯ ಪ್ರಶಸ್ತಿ, ಬೆಳ್ಳಿ ದೀಪ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ‘ಪ್ರಕೃತಿ’ ಕಿರುಚಿತ್ರಕ್ಕೆ ಶ್ರೇಷ್ಠ ಬಾಲ ನಟಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ದೊರೆತಿವೆ. ಇದೀಗ ಅವರಿಗೆ ‘ಕನ್ನಡ ಸೇವಾ ರತ್ನ’ ಪ್ರಶಸ್ತಿಯೂ ದೊರೆತಿದೆ.

ರೂಪಿಕಾರವರು ಸಿನಿಮಾ ಕ್ಷೇತ್ರದಲ್ಲಿ ಅವಿರತ ಸಾಧನೆಯನ್ನು ಸಾಧಿಸುತ್ತಾ ಬಂದಿದ್ದಾರೆ. ಹೀಗಾಗಿ ‘ಕನ್ನಡ ಸೇವಾ ರತ್ನ’ ಈ ಪ್ರಶಸ್ತಿಯನ್ನು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತುಂಬು ಅಭಿಮಾನದಿಂದ ಯುಗಾದಿ ಸಾಹಿತ್ಯ ಸಂಭ್ರಮದ ಸಂಭ್ರಮದಲ್ಲಿ ನೀಡಿ ಗೌರವಿಸಿದೆ.

ಇನ್ನು ರೂಪಿಕಾರವರು ತಾನು ಕಲಿತ ವಿದ್ಯೆಯನ್ನು ಎಲ್ಲರಿಗೂ ನೀಡಬೇಕು ಎನ್ನುವ ಉದ್ದೇಶದಿಂದ ಗೆಜ್ಜೆ ಶಾಲೆಯನ್ನು ಪ್ರಾರಂಭ ಮಾಡಿದ್ದಾರೆ. ಭರತನಾಟ್ಯ, ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಚಲನಚಿತ್ರ ನೃತ್ಯ, ಶಾಸ್ತ್ರೀಯ ನೃತ್ಯ, ಸುಗಮ ಸಂಗೀತ, ನಾಟಕಾಭಿನಯ ಹೀಗೆ ಇನ್ನೂ ಅನೇಕ ನೃತ್ಯಗಳ ತರಬೇತಿ ನೀಡುವುದಷ್ಟೇ ಅಲ್ಲದೆ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ ರೂಪಿಕಾ ತಂಡ.

ನಮೋ ವೆಂಕಟೇಶಾ, ನಮೋ ಶ್ರೀನಿವಾಸಾ.. : ಮೋಡಿ ಮಾಡಿದ ‘ಒಂಭತ್ತನೇ ಅದ್ಬುತ’ ಸಾಂಗ್

#roopika,#kannadasevarathna, #award, #balkaninews #filmnews, #kannadasuddigalu,

Tags